Latest

*ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಆರೋಗ್ಯ ಗಂಭೀರ*

ಪ್ರಗತಿವಾಹಿನಿ ಸುದ್ದಿ; ವಿಜಯಪುರ: ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿತಿ ಇನ್ನಷ್ಟು ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಜ್ಞಾನಯೋಗಾಶ್ರಮದ ಮೊದಲ ಮಹಡಿಯಲ್ಲಿಯೇ ಶ್ರೀಗಳಿಗೆ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಇಂದು ಬೆಳಿಗ್ಗೆವರೆಗೂ ಶ್ರೀಗಳು ಚಿಕಿತ್ಸೆಗೆ ಚೆನ್ನಾಗಿಯೇ ಸ್ಪಂದಿಸುತ್ತಿದ್ದರು. ಆದರೆ ಮಧ್ಯಾಹ್ನದ ವೇಳೆಗೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

Home add -Advt

ಬಿಎಲ್ ಡಿ ಇ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರಾದ ಡಾ.ಎಸ್.ಬಿ.ಪಾಟೀಲ್, ಡಾ. ಅರವಿಂದ ಪಾಟೀಲ್, ಡಾ.ಮಲ್ಲಣ್ಣ ಮೂಲಿಮನಿ ನೇತೃತ್ವದ ವೈದ್ಯರ ತಂಡ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿದೆ.

ಸಿದ್ದೇಶ್ವರ ಸ್ವಾಮೀಜಿಗಳ ದರ್ಶನಕ್ಕಾಗಿ ಭಕ್ತರ ದಂಡೇ ಜ್ಞಾನಯೋಗಾಶ್ರಮದತ್ತ ಹರಿದು ಬರುತ್ತಿದೆ. ರಾಜ್ಯದಲ್ಲಿ ಕೊರೊನಾ ಹಾಗೂ ರೂಪಾಂತರಿ ವೈರಸ್ ಆತಂಕ ಹೆಚ್ಚುತ್ತಿರುವುದರಿಂದ ಭಕ್ತರು ಆಶ್ರಮಕ್ಕೆ ಬರದಂತೆ ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗಶ್ರೀ ಮನವಿ ಮಾಡುತ್ತಿದ್ದರೂ ಆತಂಕಗೊಂಡಿರುವ ಭಕ್ತರು ಆಶ್ರಮದಂತ ಬರುತ್ತಿದ್ದಾರೆ.

ಶ್ರೀಗಳ ಆರೋಗ್ಯದ ಬಗ್ಗೆ, ಚಿಕಿತ್ಸೆ ಬಗ್ಗೆಯೂ ಭಕ್ತರು ಯೂಟೂಬ್, ಫೇಸ್ ಬುಕ್ ಲೈವ್ ನಲ್ಲಿ ವೀಕ್ಷಿಸಬಹುದು. ಆನ್ ಲೈನ್ ಮೂಲಕವೂ ಶ್ರೀಗಳ ದರ್ಶನ ಪಡೆದುಕೊಳ್ಳಬಹುದು. ಕೋವಿಡ್ ಆತಂಕ ಹಿನ್ನೆಲೆಯಲ್ಲಿ ಆಶ್ರಮಕ್ಕೆ ಭೇಟಿ ಕೊಡಬೇಡಿ ಎಂದು ಬಸವಲಿಂಗಶ್ರೀ ಜನರಲ್ಲಿ ಮನವಿ ಮಾಡಿದ್ದಾರೆ.

*ಮೀಸಲಾತಿ ಗೊಂದಲಕ್ಕೆ ಸಿಎಂ ಸ್ಪಷ್ಟನೆ *

https://pragati.taskdun.com/panchamasaliokkaligareservationcm-basavaraj-bommaireactionhubli/

Related Articles

Back to top button