Kannada NewsKarnataka NewsLatest

*ಶಿವಗಂಗೆ ಬೆಟ್ಟದಲ್ಲಿ ಐಟಿ ಉದ್ಯೋಗಿ ಯುವಕ ನಾಪತ್ತೆ ಪ್ರಕರಣ: ಲ್ಯಾಪ್ ಟಾಪ್ ನಲ್ಲಿ ಬಯಲಾಯ್ತು ಆತಂಕಕಾರಿ ಮಾಹಿತಿ*

ಪ್ರಗತಿವಾಹಿನಿ ಸುದ್ದಿ: ಟ್ರೆಕಿಂಗ್ ಗೆಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಬಳಿಯ ಶಿವಗಂಗೆ ಬೆಟ್ಟಕ್ಕೆ ಹೋಗಿದ್ದ ಟೆಕ್ಕಿ ಯುವಕ ನಾಪತ್ತೆಯಾಗಿ ನಾಲ್ಕ ದಿನಗಳಾಗಿದ್ದರೂ ಈವರೆಗೂ ಯುವಕನ ಸುಳಿವು ಸಿಕ್ಕಿಲ್ಲ. ಶಿವಗಂಗೆಯ ಶಾಂತಲಾ ಡ್ರಾಪ್ ನಲ್ಲಿ 60 ಪೊಲೀಸರು ಹಾಗೂ ಸಿಬ್ಬಂದಿಗಳಿಂದ ಶೋಧಕಾರ್ಯಾಚರಣೆ ಮುಂದುವರೆದಿದೆ. ಈ ನಡಿವೆ ಯುವಕನ ಲ್ಯಾಪ್ ಟಾಪ್ ನಲ್ಲಿ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಿನ ವೈಟ್ ಫೀಲ್ಡ್ ನ ಕಾಡುಗೋಡಿ ನಿವಾಸಿ ಐಟಿ ಉದ್ಯೋಗಿ 31 ವರ್ಷದ ಅದ್ವೈತ್ ಉಪಾಧ್ಯಾಯ ನಾಪತ್ತೆಯಾಗಿರುವ ಯುವಕ. ಆಗಸ್ಟ್ ೪ರಂದು ಶಿವಗಂಗೆ ಬೆಟ್ಟಕ್ಕೆ ಟ್ರೆಕಿಂಗ್ ಗೆ ಎಂದು ಹೇಳಿಬಂದವನು ನಾಪತ್ತೆಯಾಗಿದ್ದಾನೆ. ಯುವಕ ಬೆಟ್ಟ ಹತ್ತುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಲ್ಲದೇ ತಾನು ಬೆಟ್ಟ ಹತ್ತಲು ಆರಂಭಿಸಿದ ಕ್ಷಣಗಳನ್ನು ಅದೈತ್ ತಾನು ನಿಶ್ಚಿತಾರ್ಥ ಮಾಡಿಕೊಂಡಿರುವ ಯುವತಿಗೆ ಕಳುಹಿಸಿದ್ದಾನೆ. ಬಟ್ಟದ ಮೇಲೆ ಹೋಗಿರುವ ಅದೈತ್ ಬಳಿಕ ವಾಪಸ್ ಆಗಿಲ್ಲ. ಆತನ ಫೋನ್ ಸ್ವಿಚ್ ಆಫ್ ಆಗಿದೆ.

ಮತ್ತೊಂದೆಡೆ ಪೊಲೀಸರು ಅದ್ವೈತ್ ಉಪಾಧ್ಯಾಯನ ವೈಟ್ ಫೀಲ್ಡ್ ಬಳಿಯ ಕಾಡುಗೋಡಿ ನಿವಾಸದಲ್ಲಿ ಪರಿಶೀಲನೆ ನಡೆಸಿದ್ದು, ಈ ವೇಳೆ ಆತನ ಲ್ಯಾಪ್ ಟಾಪ್ ಮನೆಯಲ್ಲಿ ಪತ್ತೆಯಾಗಿದೆ. ಅದರಲ್ಲಿ ಸ್ಫೋಟಕ ಸಂಗತಿ ಬಯಲಾಗಿದೆ. ಅದ್ವೈತ್ ಇಂಟರ್ ನೆಟ್ ನಲ್ಲಿ ಎಐ ಮೂಲಕ ಆತ್ಮಹತ್ಯೆಯ ಬಗ್ಗೆ ಸರ್ಚ್ ಮಾಡಿದ್ದಾನೆ.

ಶಿವಗಂಗೆಯ ಶಾಂತಲಾ ಡ್ರಾಪ್ ಬಗ್ಗೆಯೂ ಎಐನಲ್ಲಿ ತಡಕಾಡಿದ್ದು, ಶಾಂತಲಾ ಡ್ರಾಪ್ ನಿಂದ ಆತ್ಮಹತ್ಯೆ ಮಾಡಿಕೊಳ್ಳಬಹುದಾ? ಎಲ್ಲಿಂದ ಬಿದ್ದರೆ ಎಷ್ಟೊತ್ತಿಗೆ ಬಿದ್ದರೆ ಸಾಯಬಹುದು? ಎಂದು ಎಐನಲ್ಲಿ ಸರ್ಚ್ ಮಾಡಿದ್ದಾನೆ. 7:30ಕ್ಕೆ ಬಿದ್ದು ಸಾಯಬಹುದು ಎಂದು ಎಐ ತಿಳಿಸಿದೆ. ಬಳಿಕ ಆಗಸ್ಟ್ 4ರಂದು ಶಿವಗಂಗೆಯ ಶಾಂತಲಾ ಡ್ರಾಪ್ ಗೆ ಅದ್ವೈತ್ ಬಂದಿದ್ದಾನೆ. ಆಬಳಿಕ ಆತನ ಸುಳಿವಿಲ್ಲ ಎಂದು ತಿಳಿದುಬಂದಿದೆ.

ಪೊಲೀಸರು ಶಾಂತಲಾ ಡ್ರಾಪ್ ನಲ್ಲಿ ಇಂದೂ ಕೂಡ ನಿರಂತರವಾಗಿ ಶೋಧಕಾರ್ಯ ನಾಡೆಸಿದ್ದಾರೆ. ಶಾಂತಲಾ ಡ್ರಾಪ್ ನ ಬಲ ಭಾಗದ ಕಡಿದಾದ ಕಂದಕ, ಪ್ರಪಾತಗಳಲ್ಲಿ ಪ್ರಾಣದ ಹಂಗು ತೊರೆದು ಪೊಲೀಸರು ಶೋಧಕಾರ್ಯಾಚರಣೆ ನಡೆಸುತ್ತಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button