Kannada NewsKarnataka News

ವಿಶೇಷ ಚೇತನ ಪುತ್ರ ಪ್ರೇರಣಾ ಶಕ್ತಿ: ಶಶಿಕಲಾ ಜೊಲ್ಲೆ

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ಪ್ರತಿವರ್ಷ ಜ್ಯೋತಿಪ್ರಸಾದ ಜೊಲ್ಲೆಯವರ ಹುಟ್ಟುಹಬ್ಬದ ನಿಮಿತ್ಯ ಪ್ರೇರಣಾ ಉತ್ಸವ ಆಚರಿಸುವುದರ ಮೂಲಕ ಜೊಲ್ಲೆ ಗ್ರೂಪ್ ಗಡಿನಾಡು ಯಕ್ಸಂಬಾದಲ್ಲಿ ಒಂದೇ ಸೂರಿನಡಿ ಸಾಮಾಜಿಕ, ಧಾರ್ಮಿಕ, ಆರ್ಥಿಕವಾಗಿ ಹಾಗೂ ಶೈಕ್ಷಣಿಕ ಸೇವೆಯನ್ನು ಸಲ್ಲಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಶ್ರೀ ಗುರುದೇವ ಬೃಹ್ಮಾನಂದ ಆಶ್ರಮದ ಪ.ಪೂ. ಸದ್ಗುರು ಡಾ. ಅಭಿನವ ಬೃಹ್ಮಾನಂದ ಮಹಾಸ್ವಾಮಿಜಿ ಆಶೀರ್ವಚನ ನೀಡಿದರು.

ಯಕ್ಸಂಬಾದ ಜೊಲ್ಲೆ ಉದ್ಯೋಗ ಸಮೂಹದಿಂದ ಆಯೋಜಿಸಲಾದ 11 ನೇ ವರ್ಷದ ಪ್ರೇರಣಾ ಉತ್ಸವದಲ್ಲಿ ಆಶೀರ್ವಚನ ನೀಡಿದರು. ಕಾರ್ಯಕ್ರಮವು ಮುಂಬರುವ ದಿನಗಳಲ್ಲಿ ಈ ಭಾಗದ ಸರ್ವತೋಮುಖ ಬೆಳವಣಿಗೆಗೆ ಮುನ್ನುಡಿಯಾಗಲಿ ಎಂದು ಹಾರೈಸಿದರು.

ಯಕ್ಸಂಬಾದ ಜೊಲ್ಲೆ ಉದ್ಯೋಗ ಸಮೂಹದಿಂದ ಆಯೋಜಿಸಲಾದ 11 ನೇ ವರ್ಷದ ಪ್ರೇರಣಾ ಉತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮಿಕೊಳ್ಳಲಾಗಿತ್ತು.

 

Home add -Advt

ಬೆಳಗ್ಗೆಯಿಂದ ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ಚಿತ್ರಕಲಾ ಸ್ಪರ್ಧೆ, ಕ್ರಾಫ್ಟ್ ಸ್ಪರ್ಧೆ ಹಾಗೂ ಮಹಿಳೆಯರಿಗಾಗಿ ಶಾಖಾಹಾರಿ ಅಡುಗೆ ಪದಾರ್ಥಗಳ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು. ಬಳಿಕ ಕಾರದಗಾ ಗ್ರಾಮದ ಕಾರ್ಯಕರ್ತರು ನಿಪ್ಪಾಣಿ ಮತಕ್ಷೇತ್ರದ ಅಭಿವೃದ್ಧಿ ಬಗ್ಗೆ ನೂತನ ಕ್ಯಾಲೆಂಡರನ್ನು ಬಿಡುಗಡೆ ಮಾಡಲಾಯಿತು.

ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ ನಮ್ಮ ಹಿರಿಯ ಮಗ ವಿಶೇಷ ಚೇತನ ಮಗುವಾಗಿರುವುದರಿಂದ ಅವನನ್ನ ಬೆಳೆಸುವಂತಹ ಒಂದು ಪ್ರಸಂಗದಲ್ಲಿ ಬದಲಾವಣೆ ಕಂಡು ಬಂದಿತು.

ಒಬ್ಬ ತಾಯಿಯಾಗಿ ನಾನೇನು ಕಷ್ಟಪಟ್ಟಿದ್ದೇನೆ, ಇಂತಹ ಮಕ್ಕಳು ಸಮಾಜದಲ್ಲಿದ್ದಾಗ ತಂದೆ, ತಾಯಿಗಳು ಏನು ಕಷ್ಟಪಡುತ್ತಾರೆ, ಏನು ನೋವು ಇರುತ್ತದೆ ಅನ್ನೋದು ನಾನು ಅನುಭವಿಸಿದ್ದೇನೆ. ಹಾಗಾಗಿ ಆ ಮಗನನ್ನು ನಾನು ಒಂದು ಪ್ರೇರಣಾ ಶಕ್ತಿ ಅಂತ ಹೇಳಿ ನಾವು ಅದನ್ನು ತಿಳಿದುಕೊಂಡು ನಾವು ನಮ್ಮ ಜೀವನವನ್ನು ಒಂದು ಸಮಾಜ ಸೇವೆಗೆ ಮುಡುಪಾಗಿಡಬೇಕೆಂದು ಇಚ್ಚೆಯನ್ನು ಮಾಡಿದ್ದೇವೆ ಎಂದರು.

ಅಣ್ಣಾಸಾಹೇಬರು ನನಗೆ ಬಾಳಿನ ದೀಪವಾಗಿ ಜನಸೇವೆಯೇ ಜನಾರ್ದನ ಸೇವೆ ಎಂದು ತಿಳಿದು, ಮಗು ಒಳ್ಳೆಯ ರೀತಿ ಬೆಳೆಯಬೇಕಾದರೆ ಸಮಾಜ ಸೇವೆ ಮಾಡೋಣವೆಂದು ಪ್ರೇರೇಪಿಸಿದರು.

ನೋವನ್ನು ಮರೆಯುವುಕ್ಕಾಗಿ ನನ್ನನ್ನು ಸಮಾಜ ಸೇವೆಗೆ ತೊಡಗಿಸಿಕೊಂಡೆ. 2001ರಿಂದ ಸನಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಅಲ್ಲಿಂದ ಇಲ್ಲಿಯವರೆಗೆ ನಾನು ಸಮಾಜಮುಖಿಯಾಗಿ ಕೆಲಸಮಾಡುತ್ತಿದ್ದೆನೆ.

ಪ್ರತಿಯೊಬ್ಬರಲ್ಲೂ ದೇವರನ್ನು ಕಂಡು ಆ ದೇವರ ಸೇವೆ ಮಾಡುವ ರೂಪದಲ್ಲಿ ನಾನು ಜನಸೇವೆ ಮಾಡಿದಾಗ ನನ್ನ ಮಗುವಿನಲ್ಲಿ ಬಹಳಷ್ಟು ಬದಲಾವಣೆಗಳು ಕಂಡುಬಂದವು.

ಹಾಗಾಗಿ ಈ ಒಂದು ಸಂದೇಶ ಇಡಿ ಸಮಾಜಕ್ಕೆ ಹೋಗಬೇಕೆಂದು ಕಳೆದ 12 ವರ್ಷಗಳಿಂದ ಪ್ರೇರಣಾ ಉತ್ಸವ ಮಾಡುತ್ತಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಬಸವಜ್ಯೋತಿ ಯುಥ್ ಫೌಂಡೇಶನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ, ಬೀರೇಶ್ವರ ಸಂಸ್ಥೆಯ ಅಧ್ಯಕ್ಷರಾದ ಜಯಾನಂದ ಜಾಧವ, ಉಪಾಧ್ಯಕ್ಷರಾದ ಸಿದ್ರಾಮ ಗಡದೆ,  ಅಪ್ಪಾಸಾಹೇಬ ಜೊಲ್ಲೆ, ಕಲ್ಲಪ್ಪ ಜಾಧವ, ರವಿ ಹಂಜಿ, ವಿವೇಕಾನಂದ ಬಂಕೊಳ್ಳಿ, ವಿಜಯ್ ರಾವುತ್, ಜೊಲ್ಲೆ ಗ್ರೂಪ್ ವಿವಿಧ ಅಂಗಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸಂಚಾಲಕ ಮಂಡಳಿ ಸಲಹಾ ಸಮಿತಿ ಸದಸ್ಯರು, ಆಡಳಿತ ಕಛೇರಿಯ ಪಧಾದಿಕಾರಿಗಳು ಹಾಗೂ ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು. ರಮೇಶ ಪಾಟೀಲ ನಿರೂಪಿಸಿದರು.

 

 

https://pragati.taskdun.com/prerana/

ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ: ಮತ್ತೆ ಐವರ ಬಂಧನ; ಬಂಧಿತರ ಸಂಖ್ಯೆ 41ಕ್ಕೆ ಏರಿಕೆ

https://pragati.taskdun.com/prerana/

Related Articles

Back to top button