Latest

ಬಟ್ಟೆ ಬಿಚ್ಚುವಂತೆ ಮಹಿಳೆಗೆ ಒತ್ತಾಯಿಸಿದ ಬೆಂಗಳೂರು ವಿಮಾನ ನಿಲ್ದಾಣ ಸಿಬ್ಬಂದಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:  ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿ ಭದ್ರತಾ ತಪಾಸಣೆ ವೇಳೆ ಮಹಿಳಾ ಪ್ರಯಾಣಿಕರೊಬ್ಬರಿಗೆ ಶರ್ಟ್ ಬಿಚ್ಚುವಂತೆ ಒತ್ತಾಯಿಸಿದ್ದು ತಮಗಾದ ಅವಮಾನಕ್ಕೆ ಮಹಿಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಅವಮಾನಕ್ಕೆ ಒಳಗಾದ ಮಹಿಳೆ ಸಂಗೀತಗಾರ್ತಿಯಾಗಿದ್ದು, ‘ನಿಜವಾಗಿಯೂ ಇದು ಅವಮಾನಕರ ಅನುಭವ. ಮಹಿಳೆಯರ ಬಟ್ಟೆ ಏಕೆ ಬಿಚ್ಚಿಸಬೇಕು?’ ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

ವಿಮಾನ ನಿಲ್ದಾಣ ಸಿಬ್ಬಂದಿಯ ಈ ವರ್ತನೆಯಿಂದ ತಮಗೆ ಬಹಳ ಮುಜುಗರ ಹಾಗೂ ಅವಮಾನವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಹಿರಿಯ ಅಧಿಕಾರಿಗಳ ವಿಷಾದ:
ಈ ಘಟನೆ ಬಗ್ಗೆ ಬೆಂಗಳೂರು ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಗಳು ವಿಷಾದ ವ್ಯಕ್ತಪಡಿಸಿದ್ದಾರೆ. ವಿಮಾನ ನಿಲ್ದಾಣದ ಭದ್ರತೆಯನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ನಿರ್ವಹಿಸುತ್ತಿದ್ದು, ಕಾರ್ಯಾಚರಣೆ ಮತ್ತು ಭದ್ರತಾ ತಂಡಗಳಿಗೆ ಸಮಸ್ಯೆಯ ಬಗ್ಗೆ ವಿವರಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

Home add -Advt

ಕಾಂಗ್ರೆಸ್ ನಿಂದ ಬಿಜೆಪಿ ಹಟಾವೋ ಚಳವಳಿ:  ಬಸವರಾಜ ರಾಯರಡ್ಡಿ ಮಾಹಿತಿ

https://pragati.taskdun.com/bjp-hatao-movement-basavaraja-rayardi/

*ಮತ್ತೊಂದು ಭಯಾನಕ ಘಟನೆ ಬೆಳಕಿಗೆ; ರೈಲ್ವೆ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಕವರ್ ನಲ್ಲಿ ಸೀಲ್ ಮಾಡಿದ ರೀತಿಯಲ್ಲಿ ಯುವತಿಯ ಶವ ಪತ್ತೆ*

https://pragati.taskdun.com/unidentified-ladybody-foundyeshwantpur-railway-station/

*ಪಡಿತರ ಅಕ್ಕಿ ಪಡೆಯುವವರಿಗೆ ಬಿಗ್ ಶಾಕ್*

https://pragati.taskdun.com/bpl-card-holders4-kg-ricereductionannounce/

Related Articles

Back to top button