Latest

ಚಿತ್ರದುರ್ಗ‌ ಮುರುಘಾ ಶ್ರೀ‌ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಅತ್ಯಾಚಾರ ‌ನಡೆದೇ‌ ಇಲ್ಲ ಅಂತಿದೆ ವೈದ್ಯಕೀಯ ವರದಿ

ಪ್ರಗತಿವಾಹಿನಿ ಸುದ್ದಿ, ಚಿತ್ರದುರ್ಗ: ಹಾಸ್ಟೆಲ್​ನ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಮುರುಘಾ ಮಠ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ವೈದ್ಯರು ನೀಡಿರುವ ವರದಿ ಈಗ ಬಿಗ್ ಟ್ವಿಸ್ಟ್ ನೀಡಿದೆ.

ಒಂದಡೆ ಮುರುಘಾ ಶರಣರು ಪೋಕ್ಸೋ ಕಾಯ್ದೆಯಡಿ ಜೈಲು ಸೇರಿದ್ದರೆ ಇತ್ತ ಚಿತ್ರದುರ್ಗ ಜಿಲ್ಲಾಸ್ಪತ್ರೆಯ ವೈದ್ಯರು ವರದಿ ನೀಡಿದ್ದು ಅದರಲ್ಲಿ ಅತ್ಯಾಚಾರ ನಡೆದೇ ಇಲ್ಲ ಎಂದು ಹೇಳಲಾಗಿದೆ.

1ನೇ ಪೋಕ್ಸೋ ಪ್ರಕರಣದ ಇಬ್ಬರು ಸಂತ್ರಸ್ತೆ ಬಾಲಕಿಯರ ಮೆಡಿಕಲ್ ರಿಪೋರ್ಟ್​​​ನಲ್ಲಿ ಅತ್ಯಾಚಾರ ಆಗಿಲ್ಲ ಎಂಬ ವರದಿ ಬಂದಿದೆ. ಯಾವುದೇ ಗಾಯಗಳು ಇಲ್ಲ ಎಂದು ಚಿತ್ರದುರ್ಗ‌ ಜಿಲ್ಲಾಸ್ಪತ್ರೆಯ ವೈದ್ಯರು ಕೋರ್ಟ್​​​ಗೆ ಸಂತ್ರಸ್ತ ಬಾಲಕಿಯರ ಮೆಡಿಕಲ್ ರಿಪೋರ್ಟ್ ಸಲ್ಲಿಸಿದ್ದಾರೆ.

ಈಗಾಗಲೇ ಪೊಲೀಸರು ಸಲ್ಲಿಸಿದ ಚಾರ್ಜ್ ಶೀಟ್​ನಲ್ಲಿಯೂ ಮೆಡಿಕಲ್ ರಿಪೋರ್ಟ್ ಬಗ್ಗೆ ಉಲ್ಲೇಖಿಸಲಾಗಿತ್ತು. ಇದರಿಂದಾಗಿ ಸದ್ಯ ಮುರುಘಾಶ್ರೀ ವಿರುದ್ಧದ ಫೋಕ್ಸೋ ಕೇಸ್ ಗೆ ಮತ್ತಷ್ಟು ತಿರುವು ಸಿಗುವ ಸಾಧ್ಯತೆ ಇದೆ.

Home add -Advt

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ, ಚಿತ್ರದುರ್ಗ‌ ಜಿಲ್ಲಾಸ್ಪತ್ರೆ ವೈದ್ಯರ ವರದಿ ಬಗ್ಗೆ ಮಾಹಿತಿ ಇಲ್ಲ. ಅಂತೆ ಕಂತೆ ವಿಚಾರಗಳಿಗೆ ತಾವು ಪ್ರತಿಕ್ರಿಯಿಸುವುದಿಲ್ಲ. ಮುರುಘಾಶ್ರೀ ಸೇರಿದಂತೆ ಎಲ್ಲರನ್ನೂ ಬಂಧಿಸಲಾಗಿದೆ. ಪ್ರಕರಣದ ತನಿಖೆ ವೇಳೆ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ತನಿಖೆ ನಡೆಸಲು ಪೊಲೀಸರಿಗೆ ಮುಕ್ತ ಅವಕಾಶ ನೀಡಲಾಗಿದೆ ಎಂದಿದ್ದಾರೆ.

KPTCL ಪರೀಕ್ಷೆ ಅಕ್ರಮ: ಮತ್ತೆ ಮೂವರ ಬಂಧನ

https://pragati.taskdun.com/kptcl-exam-scam-three-arrested-again/

*ಇದೇ ಬಿಜೆಪಿಯ ನಿಜವಾದ ಮುಖ; ಪಕ್ಷದ ಅಜೆಂಡಾವನ್ನೇ ರಾಜ್ಯಾಧ್ಯಕ್ಷರು ಹೇಳಿದ್ದಾರೆ; ಡಿ.ಕೆ.ಶಿವಕುಮಾರ್ ವಾಗ್ದಾಳಿ*

https://pragati.taskdun.com/d-k-shivakumarreactionnalin-kumar-kateel-statment/

ಬರಪೀಡಿತ ನಾಡಿಗೆ ಕಳಸಾ- ಬಂಡೂರಿ ‘ಜಲಾಮೃತ’; ಕೇಂದ್ರ ಸರಕಾರದ ದಿಟ್ಟ ನಿರ್ಣಯ ; ಜನತೆಯ ಪರವಾಗಿ ಧನ್ಯವಾದ `ಬಿಜೆಪಿ’

https://pragati.taskdun.com/kalasa-banduri-bold-decision-of-the-central-government-thank-you-bjp-on-behalf-of-the-people/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button