ಪ್ರಗತಿವಾಹಿನಿ ಸುದ್ದಿ; ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಶೀತ ಮಾರುತ ಮುಂದುವರೆದಿದ್ದು, ದಟ್ಟ ಮಂಜು ಆವರಿಸಿದೆ. ಇದರಿಂದಾಗಿ ವಿಮಾನ ಹಾಗೂ ರೈಲು ಸಂಚಾರದಲ್ಲಿ ವ್ಯತ್ಯಯವುಂಟಾಗಿದೆ.
ಕಳೆದ ಐದು ದಿನಗಳಿಂದ ದೆಹಲಿಯಲ್ಲಿ ಶೀತಗಾಳಿಯಿಂದಾಗಿ ತಾಪಮಾನ ತೀವ್ರವಾಗಿ ಕುಸಿದಿದೆ. ದೆಹಲಿ ಸಂಪೂರ್ಣ ಮಂಜಿನಿಂದ ಮುಸುಕಿದ್ದು, ರಸ್ತೆಗಳು, ವಿಮಾನ, ರೈಲು ಮಾರ್ಗಗಳು ಕಣ್ಣಿಗೆ ಕಾಣದೇ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ದಟ್ಟ ಮಂಜಿನ ಕಾರಣ ದೆಹಲಿಯಲ್ಲಿ ಇಳಿಯಬೇಕಾದ ವಿಮಾನದಲ್ಲಿ ವ್ಯತ್ಯಗಳಾಗಿದ್ದು, ಇನ್ನು ದೆಹಲಿಯಿಂದ ಜೈಪುರ, ಶೀಮ್ಲಾ, ಚಂಡೀಗಢ, ಕುಲು, ಡೆಹ್ರಾಡೂನ್ ಸೇರಿದಂತೆ ಹಲವು ನಗರಗಳಿಗೆ ತೆರಳಬೇಕಿದ್ದ ವಿಮಾನದಲ್ಲಿ ವ್ಯತ್ಯಯವುಂಟಾಗಿದೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ಫಾಗ್ ಅಲರ್ಟ್ ಘೋಷಿಸಲಾಗಿದೆ. ದೆಹಲಿ, ಉತ್ತರ ಭಾರದಾದ್ಯಂತ ದಟ್ಟ ಮಂಜು ಹಿನ್ನೆಲೆಯಲ್ಲಿ 150ಕ್ಕೂ ಹೆಚ್ಚು ದೇಶಿಯ ವಿಮಾನಗಳ ಸಂಚಾರ ರದ್ದಾಗಿದೆ. 250ಕ್ಕೂ ಹೆಚ್ಚು ರೈಲು ಸಂಚಾರವನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ರೈಲ್ವೆ ಹಳಿಗಳು, ಸಿಗ್ನಲ್ ಗಳು ಸರಿಯಾಗಿ ಗೋಚರಿಸದ ಕಾರಣದಿಂದಾಗಿ ಹಲವು ರೈಲುಗಳನ್ನು ರದ್ದುಗೊಳಿಸಲಾಗಿದೆ.
ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ, ರಾಜಸ್ಥಾನಗಳಲ್ಲಿಯೂ ಶೀತಗಾಳಿ ಹಾಗು ದಟ್ಟ ಮಂಜು ಕವಿದಿರುವ ಹಿನ್ನೆಲೆಯಲ್ಲಿ ಜನರು ತತ್ತರಿಸಿದ್ದಾರೆ. ಭಾರಿ ಚಳಿ ಹಿನ್ನೆಲೆಯಲ್ಲಿ ಜನವರಿ 15ರವರೆಗೆ ದೆಹಲಿಯಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಜ.16ರ ನಾ ನಾಯಕಿ ಸಮಾವೇಶಕ್ಕೆ ಪ್ರಿಯಾಂಕಾ ಗಾಂಧಿ ಆಗಮನ: ಡಿ.ಕೆ. ಶಿವಕುಮಾರ್
https://pragati.taskdun.com/priyanka-gandhis-arrival-at-na-nayaki-convention-on-january-16-d-k-shivakumar/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ