ಡಂಬಲ್ ಇಂಜಿನ್ ಸರ್ಕಾರ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ನಾಯಕರು
ಪ್ರಜಾ ಧ್ವನಿ ಸಮಾವೇಶದಲ್ಲಿ ಒಗ್ಗಟ್ಟು ಪ್ರದರ್ಶಿಸಿದ ಕೈ ನಾಯಕರು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : “600 ಭರವಸೆಗಳಲ್ಲಿ 60 ಭರವಸೆಗಳನ್ನು ಈಡೇರಿಸದ ಬಿಜೆಪಿ ವಚನ ಭ್ರಷ್ಟ ಸರ್ಕಾರದ ಕರ್ಮಕಾಂಡವನ್ನ ಪ್ರಜಾಧ್ವನಿ ಮೂಲಕ ರಾಜ್ಯದ ಜನರ ಮಂದೆ ಈಡುತ್ತೆವೆ” ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷ ಇಂದು ಆರಂಭಿಸಿದ ಪ್ರಜಾಧ್ವನಿ ಯಾತ್ರೆ ನಿಮಿತ್ತ ಬೆಳಗಾವಿಯ ಆಟೋನಗರದ ಅಂಜುಮನ್ ಸಂಸ್ಥೆಯ ಮೈದಾನದಲ್ಲಿ ಬುಧವಾರ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದ 7 ಕೋಟಿ ಜನತೆಗೆ ಧ್ವನಿಇದಾಗಿದ್ದು, ನಿಮ್ಮ ಆಸೆ, ನಿರೀಕ್ಷೆಯಂತೆ ಜನಪರ ಆಡಳಿತವನ್ನು ಕಾಂಗ್ರೆಸ್ ನೀಡಲು ಮುಂದಾಗಿದೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮುಖಾಂತರ ಅಧಿಕಾರಕ್ಕೆ ತರಬೇಕೆಂದ ಅವರು, ಬಿಜೆಪಿ ಸುಳ್ಳು ತಯಾರಿಸುವ ಕಾರ್ಖಾನೆಯಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದರೇ ರೈತರ ಸಾಲ ಮನ್ನಾ ಮಾಡುತ್ತೆವೆ ಎಂದು ಭರವಸೆ ನೀಡಿತ್ತು, ಈಗ್ ಅಧಿಕಾರಕ್ಕೆ ಬಂದ ಬೊಮ್ಮಾಯಿ ಸರ್ಕಾರ ರೈತರ ನಯಾಪೈಸೆ ಸಾಲ ಮನ್ನಾ ಮಾಡಿಲ್ಲ ಎಂದು ಕಿಡಿ ಕಾರಿದರು.
ಪ್ರಣಾಳಿಕೆಯಲ್ಲಿ ಬಿಜೆಪಿ ನೀಡಿದ ಭರವಸೆ ಸುಳ್ಳಾಗಿದೆ. ಬೊಮ್ಮಾಯಿಯವರೇ ಒಂದೇ ವೇದಿಕೆಗೆ ಬನ್ನಿ, ರಾಜ್ಯದ ಜನತೆ ಮುಂದೆ ನಾವೇನೂ ಮಾಡಿದ್ದೆವೆ, ನೀವೆನೂ ಮಾಡಿದ್ದಿರಿ ಎಂದು ಈ ರಾಜ್ಯದ ಜನವೇ ನೋಡಲಿ ಎಂದು ಸವಾಲೆಸೆದರು.
ರಾಜ್ಯದ ನೀರಾವರಿ ಯೋಜನೆಗೆ 1 ಲಕ್ಷ 50 ಸಾವಿರ ಕೋಟಿ ರೂ. ಬಿಡುಗಡೆ ಮಾಡುತ್ತೇವೆ ಎಂದಿದ್ದರು. ಖರ್ಚು ಮಾಡಿದ್ದು ಕೇವಲ 45 ಸಾವಿರ ಕೋಟಿ. ದೊಡ್ಡ ದೊಡ್ಡ ಭರವಸೆ ಕೊಟ್ಟು ಜನರ ಮನಸ್ಸಿನಲ್ಲಿ ಆಸೆ ಹುಟ್ಟಿಸಿ ಜನರಿಗೆ ಮೋಸ ಮಾಡಿರುವುದು ಬಿಜೆಪಿ ಎಂದು ಹರಿಹಾಯ್ದರು.
ರಾಜ್ಯದ 25 ಸಂಸದರು ಇದ್ದಾರೆ. 15ನೇ ಹಣಕಾಸು ಆಯೋಗದ ಯೋಜನೆಯ 5,495 ಕೋಟಿ ಅನುದಾನ ಕೇಳಲು ಅವರಿಗೆ ಧಮ್ ಇಲ್ಲ. ತಾಕತ್ತು ಇಲ್ಲ. ಇಂಥ ಹೇಡಿ ಸರಕಾರ ರಾಜ್ಯದಲ್ಲಿ ಮತ್ತೇ ಬರಬಾರದು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತು ಎತ್ತಿದ್ದರೆ ಧರ್ಮ ಇದ್ದರೇ, ತಾಕತ್ತು ಇದ್ದರೆ ಎನ್ನುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಲು ರಾಜ್ಯ ಬಿಜೆಪಿ ನಾಯಕರು ಗಡ ಗಡ ಮಾಡುತ್ತಾರೆ ಎಂದು ಲೇವಡಿ ಮಾಡಿದರು.
ಭ್ರಷ್ಟ ಬಿಜೆಪಿಯನ್ನ ಬೇರು ಸಮೇತ ಕಿತ್ತು ಹಾಕಿ: ರಣದೀಪ್ ಸಿಂಗ್ ಸುರ್ಜೇವಾಲಾ ಗುಡುಗು
‘ಈಗ ರಾಜ್ಯದಲ್ಲಿರುವುದು 40 ಪರ್ಸೆಂಟ್ ಸರ್ಕಾರ. ದೇಶದಲ್ಲಿ ಅತೀ ಭ್ರಷ್ಟಚಾರ ಎಂದರೆ ಬೊಮ್ಮಾಯಿ ಸರ್ಕಾರ ಎಂದು ಬಿಜೆಪಿ ವಿರುದ್ಧ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹರಿಹಾಯ್ದರು.
ಬೆಳಗಾವಿಗೊಂದು ಇತಿಹಾಸ ಇದೆ. ರಾಜ್ಯ ಬೆಳವಣಿಗೆಯಲ್ಲಿ ಬೆಳಗಾವಿ ಪಾತ್ರ ಮಹತ್ವದಾಗಿದೆ. ಹೀಗಾಗಿ ಬೆಳಗಾವಿಯಿಂದ ರಾಜ್ಯದ ಜನತೆಗೆ ಎಚ್ಚರಿಸುವ ಪ್ರಯತ್ನ ಮಾಡಲಾಗುತ್ತಿದೆ. ಭ್ರಷ್ಟ ಬಿಜೆಪಿಯನ್ನ ಬೇರು ಸಮೇತ ಕಿತ್ತು ಹಾಕಲು ಮತಪ್ರಭುಗಳು ಮುಂದಾಗಿಬೇಕೆಂದು ಹೇಳಿದರು.
ಸಂತೋಷ ಪಾಟೀಲ ಬಿಜೆಪಿ ಕಟ್ಟಾ ಕಾರ್ಯಕರ್ತರಾಗಿದರು. ಈವರ ಗುತ್ತಿಗೆದಾರ ಸಚಿವ ಶೇ.40 ಪರ್ಸೆಂಟ್ ಕಮಿಷನ್ ಕೇಳಿದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡು, ಇದು ಅಕ್ಷಮ ಅಪರಾಧ ಎಂದು ಬಿಜೆಪಿ ವಿರುದ್ಧ ಗುಡುಗಿದರು.
ಕಾಂಗ್ರೆಸ್ ನೊಂದ ಕುಟುಂಬಗಳಿಗೆ ಸಾಂತ್ವನ ಹೇಳುವ ಮೂಲಕ ಕಣ್ಣಿರು ಒವರಿಸುವ ಕೆಲಸ ಮಾಡಿದೆ. ಬಿಜೆಪಿ 40 % ಶೇ ಪರ್ಸೆಂಟ್ ಕಮಿಷನ್ ದಂಧೆಯಿಂದ ರಾಜ್ಯದಲ್ಲಿರುವ ಪ್ರಾಮಾಣಿಕ ಗುತ್ತಿಗೆದಾರರು ಆತ್ಮಹತ್ಯೆ ದಾರಿಯತ್ತ ಮುಖ ಮಾಡುತ್ತಿದ್ದಾರೆ ಇದು ಖಂಡನೀಯ ಎಂದು ವಿಷಾದ ವ್ಯಕ್ತಪಡಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರ ಬದುಕಿನಲ್ಲಿ ಮತ್ತೆ ಬೆಳಕು ತರುವ ದೃಷ್ಟಿಯಿಂದ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದು ಘೋಷಿಸಿದರು.
ನೊಂದವರ, ಕಷ್ಟುದಲ್ಲಿ ಬೆಂದವರ ಕಣ್ಣಿರುವ ಒರೆಸುವದೇ ಪ್ರಜಾಧ್ವನಿ ಮುಖ್ಯ ಉದ್ದೇಶವಾಗಿದೆ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಬಿಜೆಪಿ ಸರ್ಕಾರ ಈಡೇರಿಸಿಲ್ಲ, ನುಡಿದಂತೆ ಸರ್ಕಾರ ನಡೆದಿಲ್ಲ, ಬಿಜೆಪಿ ನೀಡಿದ ಭರವಸೆ ಸುಳ್ಳಾಗಿದೆ. ಕೋವಿಡ್ ನಿಂದ ಪ್ರಾಣ ಕಳೆದುಕೊಂಡ 4.50 ಲಕ್ಷ ಜನರಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಆದರೆ, ಅವರ ಕೈಗೆ ಹಣ ಬರಲಿಲ್ಲ, ಪ್ರಾಣ ಕಳೆದುಕೊಂಡತಹ ಹೆಣ ಮಾತ್ರ ಬಂತು ಎಂದು ಬಿಜೆಪಿ ವಿರುದ್ಧ ಕುಟುಕಿದರು.
ಕೋವಿಡ್ ನಿಂದ ಈ ಭಾಗದ ಪ್ರಭಾವಿ ನಾಯಕ, ಕೇಂದ್ರ ಸಚಿವ ದಿ. ಸುರೇಶ ಅಂಗಡಿಯವರು ನಿಧನವಾದಾಗ ಅವರ ಪಾರ್ಥೀವ ಶರೀರವನ್ನ ಬೆಳಗಾವಿಗೆ ತರಲಿಕೆ ಬಿಜೆಪಿಗೆ ಆಗಲಿಲ್ಲ, ಈ ಭಾಗದ ಜನರು ಅವರ ದರ್ಶನಕ್ಕೆ ಕಾಯ್ದು ಕುಳಿತಿದ್ದರು, ಬಿಜೆಪಿ ಸರ್ಕಾರ ತಮ್ಮದೇ ಆದ ಪ್ರಭಾವಿ ನಾಯಕ ಶವವನ್ನು ತರದೇ ಕ್ಷೇತ್ರದ ಜನತೆಗೆ ತಣ್ಣಿರು ಎರಚ್ಚುವ ಕೆಲಸ ಮಾಡಿದೇ, ಮುಂಬರುವ ದಿನಗಳಲ್ಲಿ ಈ ಭಾಗದ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲು ಮುಂದಾಗಬೇಕೆಂದು ತಿಳಿ ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಾತನಾಡಿ, ಪ್ರಜಾ ಧ್ವನಿ ಯಾತ್ರೆ ಇದು, ಜನರ ಧ್ವನಿ. ಕೊರೊನಾ ಸಂದರ್ಭದಲ್ಲಿ ಸರಕಾರ ಮಾಡದ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ರಾಜ್ಯದಲ್ಲಿ ಒಳ್ಳೆಯ ಸರಕಾರ ಬರಬೇಕಾದರೆ ಎಲ್ಲರ ಬೆಂಬಲ ಅಗತ್ಯವಾಗಿದೆ ಎಂದರು.
ಬೆಳಗಾವಿಯಲ್ಲಿ ನೂರು ಪ್ರತಿಶತ ಭ್ರಷ್ಟಾಚಾರ ಬಗ್ಗೆ ಯಾರೂ ಬೆಳಕು ಚೆಲ್ಲುತ್ತಿಲ್ಲ ಅದನ್ನು ಮುಂಬರುವ ದಿನಗಳಲ್ಲಿ ಜನರ ಮುಂದೆ ತರುವ ಕೆಲಸ ಮಾಡುತ್ತೇವೆ. ಬೆಳಗಾವಿ ನಗರಾಭಿವೃದ್ಧಿ ಇಲಾಖೆ, ಸ್ಮಾರ್ಟ್ ಸಿಟಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಅದು ಬೆಳಗಾವಿ ದಕ್ಷಿಣ ದಿಂದ ನಡೆಸಬೇಕೋ ಉತ್ತರ ಮತಕ್ಷೇತ್ರದಿಂದ ನಡೆಸಬೇಕೋ ಎಂದು ತಿಳಿಯುತ್ತಿಲ್ಲ ಎಂದರು.
ಬುಡಾದಲ್ಲಿ ನೂರಾರು ಕೋಟಿ ರೂ. ಭ್ರಷ್ಟಾಚಾರ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇದರ ಬಗ್ಗೆ ಕಾಂಗ್ರೆಸ್ ನಾಯಕರು ಸರಕಾರದ ಬೆಳಕು ಚೆಲ್ಲುವ ಅವಶ್ಯಕತೆ ಇದೆ. ಅಲ್ಲದೆ, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕಳೆದೊಂದೂವರೆ ವರ್ಷದಿಂದ ಮೇಯರ್ ಚುನಾವಣೆ ನಡೆದಿಲ್ಲ. ಇಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರು ಹಾಗೂ ಉತ್ತರ ಮತಕ್ಷೇತ್ರದ ಶಾಸಕರ ಮುಖ ನೋಡಿಕೊಂಡು ಪಾಲಿಕೆ ಸದಸ್ಯರು ನಿಲ್ಲುವ ಪರಿಸ್ಥಿತಿ ಇದೆ. ಇದು ಕೇವಲ ಬೆಳಗಾವಿಯಲ್ಲಿ ಮಾತ್ರವಲ್ಲ ರಾಜ್ಯದ ಬಹುತೇಕ ಕಡೆಯಲ್ಲಿ ಇದೇ ರೀತಿ ನಡೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಅನ್ಯಾಯದ ಕತ್ತಿಲು ಕಳೆದು ನ್ಯಾಯದ ಬೆಳಕು ಬರಬೇಕಾದರೆ ಮತಪ್ರಭುಗಳು ಕೈ ಪಕ್ಷಕ್ಕೆ ಬಲ ತುಂಬುವ ಕೆಲಸ ಮಾಡಬೇಕಿದೆ. ಈ ಪ್ರಜಾಧ್ವನಿಯಾತ್ರೆ ರಾಜ್ಯಾಧ್ಯಂತ ಸಂಚರಿಸಿ, ಬಿಜೆಪಿ ಸರ್ಕಾರ ಭ್ರಷ್ಟ ಆಡಳಿದ ಕಾರ್ಯವೈಖರಿಯನ್ನ ಜನತೆ ಮುಂದೆ ತಿಳಿಸುವ ಕೆಲಸ ಮಾಡಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ, ಶಾಸಕಿಯರಾದ ಲಕ್ಷ್ಮೀ ಹೆಬ್ಬಾಳಕರ್, ಅಂಜಲಿ ನಿಂಬಾಳ್ಕರ್, ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಬಸವರಾಜ ರಾಯರಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಶಾಸಕ ಆರ್.ವಿ. ದೇಶಪಾಂಡೆ, ಮಾಜಿ ಸಚಿವರಾದ ವಿನಯ ಕುಲಕರ್ಣಿ, ಯು.ಟಿ. ಖಾದರ್, ಪಿ.ಟಿ. ಪರಮೇಶ್ವರ ನಾಯ್ಕ, ಎ.ಬಿ. ಪಾಟೀಲ, ವೀರಕುಮಾರ ಪಾಟೀಲ್, ಡಿ.ಬಿ. ಇನಾಮದಾರ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶಾಸಕರಾದ ಗಣೇಶ ಹುಕ್ಕೇರಿ, ಮಹಾಂತೇಶ ಕೌಜಲಗಿ, ಪ್ರಕಾಶ ರಾಥೋಡ, ಮಾಜಿ ಶಾಸಕರಾದ ರಾಜು ಕಾಗೆ, ಶ್ಯಾಮ್ ಘಾಟಗೆ, ಕಾಕಾಸಾಹೇಬ್ ಪಾಟೀಲ್, ಪೀರೋಜ್ ಸೇಠ್, ರಾಜು ಸೇಠ್, ಕಾಂಗ್ರೆಸ್ ಸೇವಾದಳದ ರಾಜ್ಯಾಧ್ಯಕ್ಷ ರಾಮಚಂದ್ರಪ್ಪ, ಕಾಂಗ್ರೆಸ್ ಮುಖಂಡರಾದ ದರೆಪ್ಪ ಠಕ್ಕಣ್ಣವರ್, ಗಜಾನನ ಮಂಗಸೂಳಿ, ಮಹಾವೀರ ಮೋಹಿತೆ, ಪ್ರದೀಪ್ ಎಂ.ಜೆ, ಸುನೀಲ್ ಹಣಮನ್ನವರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಅನಂತಕುಮಾರ ಬ್ಯಾಕೂಡ, ಸೈಯ್ಯದ್ ಮನಸೂರ, ಸಿದ್ದಿಕ ಅಂಕಲಗಿ, ಪುಟ್ಟು ಪಾಟೀಲ, ಎಚ್.ಎಸ್. ನಸಲಾಪುರೆ, ರಾಜುಗೌಡ ಪಾಟೀಲ್, ರಿಷಬ್ ಪಾಟೀಲ, ರಾಜು ಕೋಟಗಿ, ಮಹೇಂದ್ರ ತಮ್ಮನ್ನವರ, ಯಲ್ಲಪ್ಪ ಶಿಂಗೆ ಇತರರು ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಪಕ್ಷದ ಮುಖಂಡರು ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ