ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹಲವು ದಿನಗಳಿಂದ ಸದ್ದು ಮಾಡಿದ್ದ ಕೆ.ಎಸ್.ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿಯ ಬಂಧನವಾಗಿದೆ.
ಕಳೆದ 11 ದಿನಗಳಿಂದ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ಕರ್ನಾಟಕ ಪೊಲೀದರು ಗುಜರಾತ್ ನಲ್ಲಿ ಬಂಧಿಸಿದ್ದಾರೆ. ಮೈಸೂರಿನ ವಿಜಯನಗರ ಠಾಣೆಯಲ್ಲಿ ತನ್ನ ವಿರುದ್ಧ ಕೇಸ್ ದಾಖಲಾಗುತ್ತಿದ್ದಂತೆ ಎಸ್ಕೇಪ್ ಆಗಿದ್ದ ಸ್ಯಾಂಟ್ರೋರವಿ ಬಂಧನಾಗಿ ನಾಲ್ವರು ಎಸ್ ಪಿಗಳ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಬಂಧನ ಭೀತಿಯಲ್ಲಿದ್ದ ಸ್ಯಾಂಟ್ರೋ ರವಿ ನಿರೀಕ್ಷಣಾ ಜಾಮೀನಿಗಾಗಿ ಕೋರ್ಟ್ ಮೊರೆ ಹೋಗಿದ್ದ. ಆದರೆ ಅರ್ಜಿ ವಿಚಾರಣೆಯನ್ನು ಮೈಸೂರು ಸೆಷನ್ಸ್ ಕೋರ್ಟ್ ಮುಂಡೂಡಿತ್ತು.
ಪೊಲೀಸರ ಕಣ್ತಪ್ಪಿಸಿ ಮಂಡ್ಯ, ರಾಮನಗರ, ಕೇರಳದ ಗಡಿ ಭಾಗ ಹೊರ ರಾಜ್ಯಗಳಲ್ಲಿಯೂ ಓಡಾಟ ನಡೆಸಿದ್ದ ಸ್ಯಾಂಟ್ರೋ ರವಿಅನ್ನು ಇದೀಗ ಗುಜರಾತ್ ನಲ್ಲಿ ಬಂಧಿಸಲಾಗಿದ್ದು, ಕರ್ನಾಟಕಕ್ಕೆ ಕರೆತರಲಾಗುತ್ತಿದೆ ಎಂದು ತಿಳಿದುಬಂದಿದೆ.
*’ಮಠ’ ಸಿನಿಮಾ ನಿರ್ದೇಶಕ ಗುರುಪ್ರಸಾದ್ ಅರೆಸ್ಟ್*
https://pragati.taskdun.com/mata-film-directorguruprasadarrestedcheque-bounce-case/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ