ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ನಿವೃತ್ತಿ ಘೋಷಿಸಿದ್ದಾರೆ.
ಜನವರಿ 16 ರಿಂದ ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಸಾನಿಯಾ ಅವರ ಕೊನೆಯ ಟೂರ್ನಿಯಾಗಿದೆ. ಈ ಕುರಿತು ಸ್ವತಃ ಸಾನಿಯಾ ಮಿರ್ಜಾ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ನಿವೃತ್ತಿಯ ಮಾಹಿತಿ ನೀಡಿದ್ದಾರೆ.
ಫೆಬ್ರವರಿ 19 ರಂದು ಆರಂಭವಾಗಲಿರುವ ಡಬ್ಲ್ಯುಟಿಎ 1000 ದುಬೈ ಟೆನ್ನಿಸ್ ಚಾಂಪಿಯನ್ ಷಿಪ್ ನಂತರ ನಿವೃತ್ತಿಯಾಗುವುದಾಗಿ ಸಾನಿಯಾ ಈ ಹಿಂದೆ ಹೇಳಿಕೊಂಡಿದ್ದರು. ಆದರೆ ಇದೀಗ ಆಸ್ಟ್ರೇಲಿಯನ್ ಓಪನ್ ಮೂಲಕವೇ ತಮ್ಮ40ನೇ ವಯಸ್ಸಿನಲ್ಲಿ ವೃತ್ತಿಜೀವನವನಕ್ಕೆ ವಿದಾಯ ಘೋಷಿಸಿದ್ದಾರೆ.
ಆಸ್ಟ್ರೇಲಿಯನ್ ಓಪನ್ ನಂತರ ತಮ್ಮ ಮಗನೊಂದಿಗೆ ಹೆಚ್ಚು ಸಮಯ ಕಳೆಯಲು ಇಷ್ಟಪಡುವುದಾಗಿ ಸಾನಿಯಾ ಹೇಳಿದ್ದಾರೆ. ಇನ್ನು ಸಾನಿಯಾ ಮಿರ್ಜಾ, ’30 ವರ್ಷಗಳ ಹಿಂದೆ ಹೈದರಾಬಾದ್ ನ ಆರು ವರ್ಷದ ಬಾಲಕಿ ತನ್ನ ತಾಯಿಯೊಂದಿಗೆ ಮೊದಲ ಬಾರಿ ಟೆನ್ನಿಸ್ ಕೋರ್ಟ್ ಪ್ರವೇಶಿಸಿದ್ದರು.
ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲ್ಲಿಕ್ ಜೊತೆ ವಿವಾಹವಾಗಿದ್ದ ಅವರು ಇತ್ತೀಚೆಗೆ ವಿಚ್ಛೇದನದ ವಿವಾದದಲ್ಲೂ ಸಿಲುಕಿದ್ದರು.
ಭಾರತ್ ಜೋಡೊ ಯಾತ್ರೆ ವೇಳೆ ಕುಸಿದು ಬಿದ್ದು ಕಾಂಗ್ರೆಸ್ ಸಂಸದ ಸಾವು
https://pragati.taskdun.com/congress-mp-dies-after-collapsing-during-bharat-jodo-yatra/
ಇಂದು ಕಾಂಗ್ರೆಸ್ ‘ಕೈ’ ಹಿಡಿಯಲಿದ್ದಾರೆ ಹಲವು ಪ್ರಮುಖರು
https://pragati.taskdun.com/today-many-prominent-people-are-going-to-hold-the-hand-of-the-congress/
ಸಾಧಕರಿಗೆ ಚೈತನ್ಯದಾಯಕ ಸಮಯ; ಮಕರ ಸಂಕ್ರಾಂತಿ
https://pragati.taskdun.com/makara-sankranti-an-invigorating-time-for-pros/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ