Karnataka News

ಭಾರತದ ಒನ್ ಡೇ ಕ್ರಿಕೇಟ್ ಇತಿಹಾಸದಲ್ಲೇ ಬೃಹತ್ ಅಂತರದ ವಿಜಯ

ಪ್ರಗತಿ ವಾಹಿನಿ ಸುದ್ದಿ, ತಿರುವನಂತಪುರಂ: ಭಾರತ ಕ್ರಿಕೇಟ್ ತಂಡ ಭಾನುವಾರ ತಿರುವನಂತಪುರಂನಲ್ಲಿ ನಡೆದ ಭಾರತ -ಶ್ರೀಲಂಕಾ ನಡುವಿನ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಬರೋಬ್ಬರಿ 317 ರನ್ ಗಳ ಭಾರಿ ಅಂತರದಿಂದ ಶ್ರೀಲಂಕಾ ತಂಡವನ್ನು ಮಣಿಸಿದೆ.

ಆ ಮೂಲಕ ಭಾರತ ಕ್ರಿಕೇಟ್ ತಂಡದ ಇತಿಹಾಸದಲ್ಲಿಯೇ ಭಾರಿ ಅಂತರದ ಜಯ ದಾಖಲಿಸಿದೆ.

Related Articles

ಮೊದಲು ಬ್ಯಾಟ್ ಮಾಡಿದ ಭಾರತ ತಂಡ ವಿರಾಟ್ ಕೋಹ್ಲಿ ಅವರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ 390 ರನ್ ಗಳಿಸಿತ್ತು. ಕೋಹ್ಲಿ 110 ಬಾಲ್‍ಗೆ 166 ರನ್ ಸಿಡಿಸಿ ಅಬ್ಬರಿಸಿದರು.

391 ರನ್‍ಗಳ ಗುರಿ ಬೆನ್ನತ್ತಿದ ಶ್ರೀಲಂಕಾ 20 ಓವರ್‍ಗಳಲ್ಲಿ ಕೇವಲ 73 ರನ್ ಗಳಿಸಿ ಆಲ್ ಔಟ್ ಆಯಿತು.
ಸರಣಿಯ ಮೂರೂ ಪಂದ್ಯವನ್ನು ಭಾರತ ಗೆದ್ದಿದ್ದು 3-0 ಮೂಲಕ ಶ್ರೀಲಂಕಾವನ್ನು ವೈಟ್ ವಾಶ್ ಮಾಡಿದೆ.

Home add -Advt

*ಗಿನ್ನಿಸ್ ದಾಖಲೆ ನಿರ್ಮಾಣದ ಗುರಿ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ*

https://pragati.taskdun.com/belagavisuvarnavidhanasoudhayogathansankranti/

 

Related Articles

Back to top button