*ಹೆಣ್ಣು ದೇಶದ ಶಕ್ತಿ; ಮಹಿಳೆಯರು, ಯುವಕರಿಗೆ ಶಕ್ತಿ ತುಂಬಿದರೆ ದೇಶದಲ್ಲಿ ಬದಲಾವಣೆ ಸಾಧ್ಯ: ಡಿ.ಕೆ. ಶಿವಕುಮಾರ್*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಈ ಪವಿತ್ರವಾದ ಕಾರ್ಯಕ್ರಮಕ್ಕೆ ದೇಶದ ಮಹಿಳೆಯರಿಗೆ ಶಕ್ತಿ ತುಂಬಲು, ಅವರ ಧ್ವನಿಯಾಗಲು ಶ್ರೀಮತಿ ಪ್ರಿಯಾಂಕಾ ಗಾಂಧಿ ಅವರು ಇಲ್ಲಿಗೆ ಬಂದಿದ್ದಾರೆ.
ಪ್ರಿಯಾಂಕಾ ಗಾಂಧಿ ಅವರು ನವ ಭಾರತದ ನಿರ್ಮಾತೃ ನೆಹರೂ ಅವರ ಮುಮ್ಮೊಗಳು ಮಾತ್ರವಲ್ಲ, ದೇಶದ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಅವರ ಮೊಮ್ಮಗಳು ಮಾತ್ರವಲ್ಲ, ದೇಶದ ಹಿತಕ್ಕಾಗಿ ಎರಡು ಬಾರಿ ಪ್ರಧಾನಮಂತ್ರಿ ಹುದ್ದೆ ತ್ಯಾಗ ಮಾಡಿದ ಸೋನಿಯಾ ಗಾಂಧಿ ಅವರ ಪುತ್ರಿಯೂ ಹೌದು. ನಾವೆಲ್ಲರೂ ಸೇರಿ ಅವರನ್ನು ಹೃದಯಪೂರ್ವಕವಾಗಿ ಸ್ವಾಗತಿಸೋಣ.
ಇಂದಿರಾ ಗಾಂಧಿ ಅವರ ಮಾತನ್ನು ಸೋನಿಯಾ ಗಾಂಧಿ ಅವರು ಒಂದು ಪುಸ್ತಕದಲ್ಲಿ ಉಲ್ಲೇಖಿಸಿದ್ದು, ಕಾಂಗ್ರೆಸ್ ಒಂದು ವಿಶೇಷವಾದ ಸಂಸ್ಥೆ, ಕಾಂಗ್ರೆಸ್ ಆರಂಭದಿಂದಲೂ ನಮ್ಮ ಜನರ ಮೂಲಭೂತ ಸಮಸ್ಯೆ ಗುರುತಿಸಿಕೊಂಡು, ಅವರಿಗೆ ಸಾಮಾಜಿಕ ನ್ಯಾಯ ಒದಗಿಸಲು ಜಾತ್ಯಾತೀತತೆ, ಪ್ರಜಾಪ್ರಭುತ್ವದ ಕಡೆ ನಿಂತಿದೆ. ಇವು ಈಗಲೂ ನಮ್ಮ ಪಾಲಿನ ಮಾರ್ಗದರ್ಶಿ. ನಾವು ಕೆಳ ಮಟ್ಟದಿಂದ ಕಾರ್ಯಕರ್ತರಿಗೆ ಮಾಡಬೇಕಾದ ಕೆಲಸದ ಜವಾಬ್ದಾರಿ ವಹಿಸಿದರೆ ಕಾಂಗ್ರೆಸ್ ಬಲಿಷ್ಠವಾಗಿ ಬೆಳೆಯಲಿದೆ.
ಪುರುಷರು ನೈಜ ಸಾಮರ್ಥ್ಯವನ್ನು ಅರಿವಾಗಿಸುವ ಮೊದಲು ಮಹಿಳೆಯರಿಗೆ ಪೂರ್ಣ ಪ್ರಮಾಣದ ಸಾಮರ್ಥ್ಯ ಬೆಳೆಸಿಕೊಳ್ಳಲು ಅನುವು ಮಾಡಿಕೊಡಬೇಕು. ಇದನ್ನು ಕಲ್ಪಿಸಿದ ಕ್ಷಣದಿಂದ ಆಕೆ ಶಿಕ್ಷಕಿ ಪಾತ್ರ ವಹಿಸುತ್ತಾಳೆ. ಆಕೆ ಉತ್ತಮ ಪತ್ನಿ ಹಾಗೂ ತಾಯಿಯಾಗಿರುತ್ತಾಳೆ. ಅವಳೇ ನಾ ನಾಯಕಿ.
ಹೆಣ್ಣು ಕುಟುಂಬದ ಕಣ್ಣು, ಹೆಣ್ಣು ದೇಶದ ಶಕ್ತಿ. ಮಹಿಳೆಯರು ಯುವಕರಿಗೆ ಶಕ್ತಿ ತುಂಬಿದರೆ ದೇಶದಲ್ಲಿ ಬದಲಾವಣೆ ಖಂಡಿತವಾಗಿಯೂ ಆಗುತ್ತದೆ. ಈ ಕಾರ್ಯ ಈ ಭೂಮಿಯಿಂದ ಆಗಲಿ. ರಾಜೀವ್ ಗಾಂಧಿ ಅವರು ಇದೇ ಸ್ಥಳದಿಂದ ದೇಶದ ನಾಯಕತ್ವ ವಹಿಸಿದ್ದರು. ಅವರ ಪುತ್ರಿ ಪ್ರಿಯಾಂಕಾ ಗಾಂಧಿ ಅವರು ಈ ಕಾರ್ಯಕ್ರಮದ ಮೂಲಕ ರಾಜಕೀಯವಾಗಿ ಕರ್ನಾಟಕಕ್ಕೆ ಮೊದಲ ಬಾರಿಗೆ ಆಗಮಿಸಿದ್ದು, ಅವರಿಗೆ ಹೃತ್ಪೂರ್ವಕ ಸ್ವಾಗತ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬೆಲೆ ಏರಿಕೆಯಿಂದ ನೊಂದಿರುವ ಮಹಿಳೆಯರಿಗೆ ನೆರವಾಗಲು ರಾಜ್ಯದ ಪ್ರತಿ ಮನೆಯ ಓರ್ವ ಗೃಹಿಣಿಗೆ ಶಕ್ತಿ ತುಂಬಲು ಪ್ರತಿ ತಿಂಗಳು 2 ಸಾವಿರ ರೂಪಾಯಿಯನ್ನು ನೀಡಲಾಗುವುದು.
*BJPಯ ಮತ್ತೋರ್ವ ಶಾಸಕನ ವಿರುದ್ಧ ಲಂಚ ಪಡೆದ ಆರೋಪ; ಆಡಿಯೋ ಬಿಡುಗಡೆ*
https://pragati.taskdun.com/bjp-mla-tippareddycorreptionaudio-releasechitradurga/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ