ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಪ್ರತಿಷ್ಠಿತ ಕೆಎಲ್ಇ ಉನ್ನತ ಶಿಕ್ಷಣ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರ ವಿವಿಯ (ಕಾಹೇರ್) ನ ನೂತನ ಉಪ ಕುಲಪತಿಯಾಗಿ ಡಾ. ನಿತಿನ್ ಗಂಗಾನೆ ಅವರು ನಿಯೋಜನೆಗೊಂಡರು.
ಇದಕ್ಕೂ ಪೂರ್ವದಲ್ಲಿ ಮಹಾರಾಷ್ಟ್ರದ ಸೇವಾ ಗ್ರಾಮದ ಮಹಾತ್ಮಾಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಆಗಿ ಸೇವೆ ಸಲ್ಲಿಸುತ್ತಿದ್ದ ಡಾ. ನಿತಿನ್ ಗಂಗಾನೆ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಅನುಭವ ಪಡೆದಿದ್ದಾರೆ.
ಸುಮಾರು 180ಕ್ಕೂ ಹೆಚ್ಚು ವೈದ್ಯಕೀಯ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಅವರು ವಿಶ್ವ ಆರೋಗ್ಯ ಸಂಸ್ಥೆಯಡಿ ಕ್ಯಾನ್ಸರ್ ಕುರಿತು ಸಂಶೋಧನೆಗಾಗಿ ಯಮಗಿವಾ-ಯೋಶಿಧಾ ಸ್ಮರಣಾರ್ಥ ಅಂತಾರಾಷ್ಟ್ರೀಯ ಕ್ಯಾನ್ಸರ್ ಅಧ್ಯಯನದ ಅನುದಾನ ಪಡೆದಿದ್ದಾರೆ.
ಅಲ್ಲದೇ, ಅಸೋಸಿಯೇಶನ್ ಆಫ್ ನೋರ್ಡಿಕ್ ಕ್ಯಾನ್ಸರ್ ಸೊಸೈಟಿ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ನ ಫೆಲೋಶಿಪ್ ಗೌರವ ಪಡೆದಿದ್ದಾರೆ. 7 ವೈದ್ಯಕೀಯ ಸಂಶೋಧನಾ ಯೋಜನೆಗಳಲ್ಲಿ ಮುಖ್ಯಸ್ಥರಾಗಿ 12ಕ್ಕೂ ಹೆಚ್ಚು ಸಂಶೋಧನಾ ಯೋಜನೆಗಳಲ್ಲಿ ಸಂಶೋಧನಾ ತಂಡದ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ನ ಆಡಳಿತ ಮಂಡಳಿಯ ಸದಸ್ಯರಾಗಿ, ಮಹಾರಾಷ್ಟ್ರ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇಂಡಿಯನ್ ಅಸೋಸಿಯೇಶನ್ ಆಫ್ ಪೆಥಾಲಜಿಸ್ಟ್ ಎಂಡ್ ಮೈಕ್ರೋಬಯಾಲಜಿಸ್ಟ್ ಸಂಸ್ಥೆಯ ಮಹಾರಾಷ್ಟ್ರ ವಿಭಾಗದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಕಾಹೇರ್ನ ಪ್ರಭಾರ ಉಪ ಕುಲಪತಿಯಾಗಿದ್ದ ಡಾ. ಎನ್. ಎಸ್. ಮಹಾಂತಶೆಟ್ಟಿ ಅವರು ಸೋಮವಾರ ಡಾ. ನಿತಿನ್ ಗಂಗಾನೆ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
*ಶಿಕ್ಷಕರ ಅಧ್ಯಯನ ಪ್ರವಾಸ ತಡೆದ ಲೆಫ್ಟಿನೆಂಟ್ ಗವರ್ನರ್; ಎಎಪಿ ಪ್ರತಿಭಟನಾ ಮೆರವಣಿಗೆ*
https://pragati.taskdun.com/arvind-kejriwalaap-marches-against-delhilieutenant-governorteachers-training/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ