ಪ್ರಗತಿ ವಾಹಿನಿ ಸುದ್ದಿ, ನಿಪ್ಪಾಣಿ: ಜೊಲ್ಲೆ ಸಮೂಹ ಸಂಸ್ಥೆಗಳ ವತಿಯಿಂದ ಆಯೋಜಿಲಾಗಿರುವ ಅಖಿಲ ಭಾರತ ಎ-ಗ್ರೇಡ್ ಕಬಡ್ಡಿ ಪಂದ್ಯಾವಳಿಗೆ ನಾಳೆ (ಜನವರಿ 19) ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿ, ಹಜ್ ಮತ್ತು ವಕ್ಪ್ ಸಚಿವರು ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಅ. ಜೊಲ್ಲೆ ಅವರು ಚಾಲನೆ ನೀಡಲಿದ್ದಾರೆ.
ಅಮೇಚ್ಯೂರ್ ಕಬಡ್ಡಿ ಫೇಡರೇಶನ್ ಆಫ್ ಇಂಡಿಯ, ಕರ್ನಾಟಕ ರಾಜ್ಯ ಅಮೇಚ್ಯೂರ್ ಕಬಡ್ಡಿ ಅಸೋಷಿಯೇಶನ್ ಮತ್ತು ಬೆಳಗಾವಿ ಜಿಲ್ಲಾ ಅಮೆಚ್ಯೂರ್ ಕಬಡ್ಡಿ ಅಸೋಸಿಯೇಶನ್ ಮಾನ್ಯತೆಯಲ್ಲಿ ನಡೆಯುತ್ತಿರುವ ಈ ಪಂದ್ಯಾವಳಿಯಲ್ಲಿ ದೇಶದ ಪ್ರಮುಖ ಪುರುಷ ಮತ್ತು ಮಹಿಳಾ ಕಬಡ್ಡಿ ತಂಡಗಳು ಭಾಗವಹಿಸಲಿವೆ.
ದೇಶದ ವಿವಿಧ ಭಾಗಗಳಿಂದ ಆಗಮಿಸುತ್ತಿರುವ 40 ಪುರುಷ ಮತ್ತು 40 ಮಹಿಳಾ ತಂಡಗಳು ಭಾಗವಹಿಸಲಿದ್ದು, ನಿಪ್ಪಾಣೀಯ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ವಿಶೇಷವಾಗಿ ನಿರ್ಮಿಸಲಾಗಿರುವ ಮ್ಯಾಟ್ ನ ಸ್ಪರ್ಧೆಗಳು ನಡೆಯಲಿವೆ.
ಭಾರತೀಯ ನೌಕದಳ, ಸಿಆರ್ಪಿಎಫ್ ದೆಹಲಿ, ಬಿಎಸ್ಫ್ ದೆಹಲಿ, ಐಟಿಬಿಪಿ ದೆಹಲಿ, ಜಮ್ಮು ಮತ್ತು ಕಾಶ್ಮೀರ ರಾಜ್ಯ ಪೆÇಲೀಸ್ ತಂಡ, ಮಹರಾಷ್ಟ್ರ ಪೆÇಲೀಸ್, ಕರ್ನಾಟಕ ರಾಜ್ಯ ಪೆÇಲೀಸ್, ಯುಪಿ ಯೊದ್ದ, ಕೆಪಿಟಿಸಿಎಲ್ ಬೆಂಗಳೂರು, ರಾಜಸ್ಥಾನ ಪೆÇಲೀಸ್, ಗುರು ನಾನಕ್ ದೇವ್ ಅಕಾಡೆಮಿ ಪಂಜಾಬ್, ಗೋವಾ ರಾಜ್ಯದ ಪೆÇಲೀಸ್, ತಮಿಳುನಾಡು ಪೆÇಲೀಸ್, ಸೆಂಟ್ರಲ್ ರೈಲ್ವೇಸ್ ನಂತಹ ಪ್ರಮುಖ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.
ನಮ್ಮ ಸಾಂಪ್ರದಾಯಿಕ ಕ್ರೀಡೆಗಳ ಮಹತ್ವವನ್ನು ಇಂದಿನ ಯುವ ಪಿಳೀಗೆಗೆ ತಿಳಿಸಿಕೊಡುವ ನಿಟ್ಟಿನಲ್ಲಿ ನಾವು ಪ್ರತಿ ವರ್ಷ ಈ ಪಂದ್ಯಾವಳಿಗಳನ್ನ ಆಯೋಜಿಸುತ್ತಿದ್ದೇವೆ.
ಜೊಲ್ಲೆ ಸಮೂಹ ಈ ಭಾಗದಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳನ್ನ ಆಯೋಜಿಸುವ ಮೂಲಕ ಇಲ್ಲಿಯ ಯುವ ಜನತೆಗೆ ಪೆÇ್ರೀತ್ಸಾಹ ನೀಡಬೇಕು ಎನ್ನುವುದು ಪ್ರಮುಖ ಉದ್ದೇಶವಾಗಿದೆ. ದೇಶದ ಪ್ರಮಖ 80 ತಂಡಗಳು ಸ್ಪರ್ಧೇಯಲ್ಲಿ ಭಾಗವಹಿಸುತ್ತಿದ್ದು, ಪುರುಷರ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆಯುವ ತಂಡಕ್ಕೆ 3 ಲಕ್ಷ ರೂಗಳು ಹಾಗೂ ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ 2 ಲಕ್ಷ ರೂಪಾಯಿಗಳ ಬಹುಮಾನ ನೀಡಲಾಗುವುದು.
ಇದಲ್ಲದೆ, ಅಂತರಾಷ್ಟ್ರೀಯ ಗಾಳಿಪಟ ಉತ್ಸವದಂತಹ ಹಲವಾರು ಆಕರ್ಷಕ ಕಾರ್ಯಕ್ರಮಗಳನ್ನು ತಿಂಗಳಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಚಿಕ್ಕೋಡಿ ಸಂಸದರು ಹಾಗೂ ಜೊಲ್ಲೆ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಅಣ್ಣಾ ಸಾಹೇಬ್ ಜೊಲ್ಲೆ ಅವರು ತಿಳಿಸಿದರು.
ಮಹಿಳೆ ಈಗ ಸರ್ವ ಕ್ಷೇತ್ರಗಳಲ್ಲೂ ಸಬಲೆ: ಸಚಿವೆ ಶಶಿಕಲಾ ಜೊಲ್ಲೆ
https://pragati.taskdun.com/women-are-now-strong-in-all-fields-minister-shashikala-jolla/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ