ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಯಾವ ಮಹಿಳೆಯರು ತಮ್ಮ ಹಕ್ಕು ಬಾಧ್ಯತೆಗಳ ಬಗ್ಗೆ ಸರಿಯಾದ ಅರಿವನ್ನು ಹೊಂದಿರುತ್ತಾರೋ ಅವರು ಜೀವನದಲ್ಲಿ ಶೋಷಣೆಗೆ ಒಳಗಾಗುವುದಿಲ್ಲ ಎಂದು ಬಿಜೆಪಿ ಧುರೀಣೆ ಡಾ.ಸೋನಾಲಿ ಸರ್ನೋಬತ್ ಹೇಳಿದರು.
ಅವರು ತಮ್ಮ ತಂಡದಿಂದ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಮಹಿಳೆಯರ ಹಕ್ಕುಗಳು ಮತ್ತು ಜವಾಬ್ದಾರಿಗಳ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಖಾನಾಪುರದಲ್ಲಿ ಶೇ.54ರಷ್ಟು ಮಹಿಳೆಯರು ಮಾತ್ರ ಮತದಾನ ಮಾಡಿರುವುದು ಉತ್ತಮ ಬೆಳವಣಿಗೆಯಲ್ಲ. ಹಾಗಾಗಿ ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಶಿಕ್ಷಣ ಪಡೆಯಬೇಕು. ಶೇ. ನೂರರಷ್ಟು ಮಹಿಳೆಯರು ಪರಮಾಧಿಕಾರ ಚಲಾಯಿಸಬೇಕು ಎಂದರು.
ಚಿಕ್ಕಮುನ್ನವಳ್ಳಿಯ ಆರೂಢ ಮಠದ ಶಿವಪುತ್ರಯ್ಯ ಸ್ವಾಮೀಜಿ ಮಾತನಾಡಿ, ಡಾ.ಸೋನಾಲಿ ಸರ್ನೋಬತ್ ಅವರು ನಿರ್ಗತಿಕರಿಗೆ ಮತ್ತು ನಿರ್ಗತಿಕರಿಗಾಗಿ ಮಾಡಿದ ಕಾರ್ಯಗಳು ಶ್ಲಾಘನೀಯ ಎಂದರಲ್ಲದೆ ಡಾ.ಸೋನಾಲಿ ಅವರ ಉತ್ತಮ ಭವಿಷ್ಯಕ್ಕೆ ಹಾರೈಸಿದರು.
ಅರ್ಜುನ್ ಗುರವ್ ಅಧ್ಯಕ್ಷತೆ ವಹಿಸಿದ್ದರು.
ಗಂಗೂ ತಳವಾರ, ಕಾವ್ಯಾ ತಳವಾರ, ಸಖೂಬಾಯಿ ತೊರೋಜಿ, ಬಾಳೇಶ ಚವಣ್ಣವರ, ವೈಷ್ಣವಿ ಭೋಸಲೆ ಉಪಸ್ಥಿತರಿದ್ದರು.
ಇದೇ ವೇಳೆ ಮಹಿಳೆಯರಿಂದ ಅರಿಶಿಣ- ಕುಂಕುಮ ಕಾರ್ಯಕ್ರಮ ನಡೆಯಿತು.
*ನಿಮ್ಮ ಆಶಿರ್ವಾದವೇ ನಮಗೆ ಶಕ್ತಿ: ಪ್ರಧಾನಿ ಮೋದಿ*
https://pragati.taskdun.com/pm-narendra-modiyadagirinarana-edadande-kaluvesurth-chennai-highway/
*ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
https://pragati.taskdun.com/chikkamagaluru-habbacm-basavaraj-bommaimobile-clinic/
2022–23ನೇ ಸಾಲಿನ SSLC ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ
https://pragati.taskdun.com/2022-23-sslc-exam-final-time-table-announced/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ