ಬೆಳಗಾವಿಯಲ್ಲಿ ಜ.21ರಿಂದ 11ನೇ ಅಂತಾರಾಷ್ಟ್ರೀಯ ಕೈಟ್ ಫೆಸ್ಟಿವಲ್; ಅಭಯ ಪಾಟೀಲ್ ನೇತೃತ್ವದಲ್ಲಿ ಆಯೋಜನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಜನೆವರಿ 21ರಿಂದ ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯಲಿದೆ. ಇದು 11ನೇ ವರ್ಷದ ಗಾಳಿಪಟ ಉತ್ಸವವಾಗಿದೆ.
ಶಾಸಕ ಅಭಯ ಪಾಟೀಲ ಅವರ ಪರಿವರ್ತನ ಪರಿವಾರ ಉತ್ಸವ ಆಯೋಜಿಸಿದ್ದು, ಬಿ.ಎಸ್.ಯಡಿಯೂರಪ್ಪ ಮಾರ್ಗದ ಮಾಲಿನಿ ಸಿಟಿಯಲ್ಲಿ 4 ದಿನಗಳ ಕಾಲ ವಿವಿಧ ಕಾರ್ಯಕರ್ಮಗಳು ನಡೆಯಲಿವೆ. ಗಾಳಿಪಟ ಉತ್ಸವದಲ್ಲಿ 4 ವಿವಿಧ ದೇಶಗಳಿಂದಲೂ ಪ್ರತಿನಿಧಿಗಳು ಹಾಗೂ ಗುಜರಾತ್, ಪಂಜಾಬ್, ಮಹಾರಾಷ್ಟ್ರ, ಓಡಿಸ್ಸಾ, ರಾಜಸ್ತಾನ ಸೇರಿದಂತೆ ಭಾರತದ ವಿವಿಧ ರಾಜ್ಯದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಶಾಸಕ ಅಭಯ ಪಾಟೀಲ ಹಾಗೂ ಅವರ ತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಮೊದಲ ದಿನ (ಜ.21) ಬೆಳಗ್ಗೆ 8.30ಕ್ಕೆ ಗಾಳಿಪಟ ಉತ್ಸವ ಉದ್ಘಾಟನೆಯಾಗಲಿದೆ. ಅದೇ ದಿನ ಸಂಜೆ 5 ಗಂಟೆಗೆ ಚಿಲ್ಡ್ರನ್ಸ್ ಫೆಸ್ಟಿವಲ್ ಉದ್ಘಾಟನೆಗೊಳ್ಳುವುದು. ನಂತರ 7 ಗಂಟೆಗೆ ಗ್ರುಪ್ ಡಾನ್ಸ್ ಸ್ಫರ್ಧೆ ನಡೆಯುವುದು ಎಂದು ಚೈತನ್ಯ ಕುಲಕರ್ಣಿ ತಿಳಿಸಿದರು.
ಜ.22ರಂದು ಉಮಂಗ್ ಯುಥ್ ಫೆಸ್ಟಿವಲ್ ಉದ್ಘಾಟನೆ, ಬೆಳಗ್ಗೆ 11 ಗಂಟೆಯಿಂದ ಯುವಕರಿಗಾಗಿ ವಿವಿಧ ಸ್ಫರ್ಧೆಗಳು ನಡೆಯಲಿವೆ. ಸಂಜೆ 5 ಗಂಟೆಗೆ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದ ಸಮಾರೋಪ ನಡೆಯಲಿದೆ. ನಂತರ 6 ಗಂಟೆಗೆ ಯುಥ್ ಫೆಸ್ಟಿವಲ್ ಗ್ರುಪ್ ಡಾನ್ಸ್ ಸ್ಫರ್ಧೆ ನಡೆಯುವುದು. 23ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಟೆಯವರೆಗೆ ಇಂಟರ್ ನ್ಯಾಶನಲ್ ಕೈಟ್ ಫ್ಲೈಯಿಂಗ್, ಯುಥ್ ಫೆಸ್ಟಿವಲ್ ಸೋಲೋ ಇನ್ ಸ್ಟ್ರುಮೆಂಟಲ್, ಕ್ವಿಝ್, ಸಂಜೆ 4 ಗಂಟೆಗೆ ಮಕ್ಕಳಿಗಾಗಿ ಬಲೂನ್ ಫೆಸ್ಟಿವಲ್, 5 ಗಂಟೆಗೆ ಡ್ರಾಯಿಂಗ್ ಕಾಂಪಿಟೀಶನ್, ಬಹುಮಾನ ವಿತರಣೆ ನಡೆಯುವುದು. 6.30ಕ್ಕೆ ಫ್ಯಾಶನ್ ಶೋ, ಹಿಪ್ ಹಾಪ್ ಡಾನ್ಸ್ ನಡೆಯಲಿದೆ ಎಂದು ಸಂದೇಶ ಕಡ್ಡಿ ಮಾಹಿತಿ ನೀಡಿದರು.
24ರಂದು ಬೆಳಗ್ಗೆ 10 ಗಂಟೆಗೆ ಚರ್ಚಾ ಸ್ಫರ್ಧೆ, ಕ್ವಿಝ್ ಫೈನಲ್, ಸಂಜೆ 5.30ಕ್ಕೆ ಮಾಕ್ ಪ್ರೆಸ್, ಗ್ರುಫ್ ಫ್ಯಾಶನ್ ಶೋ, 6 ಗಂಟೆಗೆ ಬಾಡಿ ಬಿಲ್ಡಿಂಗ್, ಕಾಂಪಿಟೇಶನ್, 8 ಗಂಟೆಗೆ ಕ್ರ್ಯಾಕರ್ ಶೋ, 9 ಗಂಟೆಗೆ ಬಹುಮಾನ ವಿತರಣೆ ನಡೆಯಲಿದೆ.
https://pragati.taskdun.com/pm-narendra-modikarnatakayadagirivisit/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ