ನಿಪ್ಪಾಣಿಯಲ್ಲಿ ನಡೆದ ಜೊಲ್ಲೆ ಗ್ರುಪ್ ಆಯೋಜನೆ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ : ಗಡಿ ಭಾಗದ ಯುವಕರಿಗೆ ಕ್ರೀಡಾ ಮನೋಭಾವ ಬೆಳೆಸುವ ಉದ್ದೇಶದಿಂದ ಆಲ್ ಇಂಡಿಯಾ ಎ ಗ್ರೇಡ್ ಕಬ್ಬಡ್ಡಿ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ. ಇದರ ಜೊತೆಗೆ ಸಾಂಸ್ಕೃತಿಕ ಹಿರಿಮೆ ಹೆಚ್ಚಿಸಲು ಇತಿಹಾಸ ಪರುಷರ ನಾಟಕ ಪ್ರದರ್ಶನ ನಡೆಯಲಿದೆ ಎಂದು ಮುಜರಾಯಿ ಹಜ್ ಮತ್ತು ವಕ್ಪ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ನಿಪ್ಪಾಣಿ ನಗರದ ಮುನ್ಸಿಪಲ್ ಶಾಲಾ ಮೈದಾನದಲ್ಲಿ ನಡೆದ ಆಲ್ ಇಂಡಿಯಾ ಎ ಗ್ರೇಡ್ ಪುರುಷ ಮತ್ತು ಮಹಿಳಾ ಕಬ್ಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.ಕ್ರೀಡೆಯಿಂದ ಮನುಷ್ಯನ ಶಾರೀರಿಕ ದೈಹಿಕ ಬೆಳವಣಿಗೆ ಆಗುತ್ತದೆ. ಕಬಡ್ಡಿ ಕ್ರೀಡೆಯಿಂದ ಮನುಷ್ಯನ ಉಸಿರಾಟದ ಜೊತೆ ಆಟವಾಗಿದೆ. ಉಸಿರಿರುವರಿಗೂ ಜೀವನ ನಡೆಸಬೇಕು.ಪ್ರಧಾನಿ ನರೇಂದ್ರ ಮೋದಿ ಭಾರತ ಪ್ರದಾನಿಯಾದ ಬಳಿಕ ಕ್ರೀಡಾಪಟುಗಳು ಒಲಂಪಿಕ್ಸ್ ಹೆಚ್ಚಿನ ಮೆಡಲ್ ಒಲಿದು ಬರುತ್ತಿರುವುದು ಸಂತಸ ತಂದಿದೆ ಎಂದರು.
ಭಾರತೀ ಕಬ್ಬಡ್ಡಿ ತಂಡದ ಮಾಜಿ ಕ್ಯಾಪಟನ್ ಮತ್ತು ಅರ್ಜುನ ಪ್ರಶಸ್ತಿ ವಿಜೇತ ಬಿ.ಸಿ.ರಮೇಶ ಮಾತನಾಡಿ. ಗ್ರಾಮೀಣ ಭಾಗದಲ್ಲಿ ಕಬ್ಬಡ್ಡಿ ಬೆಳೆಯಲು ಜೊಲ್ಲೆ ದಂಪತಿ ಪ್ರಯತ್ನ ಮಾಡುತ್ತಿದ್ದಾರೆ. ಈ ಪಂದ್ಯಾವಳಿಯಲ್ಲಿ ದೇಶದ ನಾನಾವಿಭಾಗದಿಂದ ಪ್ರಥಮ ಭಾರಿಗೆ ನಿಪ್ಪಾಣಿ ಕಡೆ ಬಂದಿದ್ದಾರೆ. ಕ್ರೀಡಾ ಪ್ರೇಮಿಗಳು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕು ಎಂದರು.
ದಿವ್ಯ ಸಾನಿಧ್ಯವನ್ನು ಚಿಂಚಣಿ ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ. ಜೊಲ್ಲೆ ಗ್ರುಪ್ ಕ್ರೀಡೆ.ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಗಡಿ ಭಾಗದ ಜನರಿಗೆ ಒಂದಿಲ್ಲೋಂದು ಮನರಂಜನಾ ಇಟ್ಡುಕೊಳ್ಳುತ್ತಾ ಬಂದಿದ್ದಾರೆ.ಕ್ರೀಡೆ ಮನುಷ್ಯ ದೇಹ ಮತ್ತು ಮನಸ್ಸು ಗಟ್ಟಿ ಮಾಡುತ್ತದೆ ಎಂದರು.
ನಿಪ್ಪಾಣಿ ಪ್ರಾಣಲಿಂಗ ಸ್ವಾಮೀಜಿ ಮಾತನಾಡಿ. ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದ ಎರಡನೆ ಬಾರಿ ಕಬ್ಬಡ್ಡಿ ಹಮ್ಮಿಕೊಂಡು ಯುವಕರಲ್ಲಿ ಕ್ರೀಡಾ ಸ್ಪೂರ್ತಿ ಮೆರೆಯುತ್ತಿರುವ ಜೊಲ್ಲೆ ದಂಪತಿ ಕಾರ್ಯ ಶ್ಲಾಘನೀಯ ಎಂದರು.
ಅಭಿನವ ಮಂಜುನಾಥ ಸ್ಚಾಮೀಜಿ ಮಾತನಾಡಿ. ಆಟದಲ್ಲಿ ಪ್ರೇಮ ಸ್ಬೇಹದಿಂದ ಆಡಬೇಕು ಎಂದರು.
ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಮಾತನಾಡಿ.ಜೊಲ್ಲೆ ದಂಪತಿಗಳು ಸಾಮಾಜಿಕ. ಧಾರ್ಮಿಕ ಮತ್ತು ಕ್ರೀಡೆಗಳನ್ನು ಗಡಿ ಭಾಗದಲ್ಲಿ ಹಮ್ಮಿಕೊಳ್ಳುವ ಮೂಲಕ ಅನೇಕ ಕೆಲಸ ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಯವಂತ ಬಾಟಲೆ. ನೀತಾ ಬಾಗಡೆ. ರಾಜೇಶ ಗುಂದೇಶಾ. ವಿಶ್ವನಾಥ ಕಮತೆ.ಅಭಯ ಮಾನ್ವಿ. ಸಿದ್ದು ನರಾಟೆ. ಪ್ರಣವ ಮಾನ್ವಿ. ಜಯಾನಂದ ಜಾಧವ. ಸುರೇಶ ಶೇಟ್ಟಿ. ಪ್ರತಾಪ ಪಟ್ಟನಶೆಟ್ಟಿ. ತಹಶೀಲ್ದಾರ ಪ್ರವೀಣ ಕರಾಂಡೆ. ಕಬ್ಬಡ್ಡಿ ತಂಡದ ಆಯೋಜಕ ಎಂ.ಕೆ.ಶಿರಗುಪ್ಪಿ. ಡಯಟ್ ದೈಹಿಕ ಶಿಕ್ಷಣ ಉಪನ್ಯಾಸಕ ಎಸ್.ಬಿ.ಚೌಗಲೆ.ಕಬ್ಬಡ್ಡಿ ಅಸೋಸಿಯೇಷನ್ ರೇಪರಿ ಅಧ್ಯಕ್ಷ ಬಿ.ಸಿ.ಹರಲಾಪೂರ.
ಪಂದ್ಯಾವಳಿಯಲ್ಲಿ ಪುಣೆ. ದೆಹಲಿ. ಸಾಯಿ ಗುಜರಾತ. ವೆಷ್ಟ ಬೆಂಗಾಲ. ರೆಡ್ ಆರ್ಮಿ. ಗ್ರೀನ ಆರ್ಮಿ ದೆಹಲಿ. ಡಿಎಸ್ ಎಫ್ ದೆಹಲಿ. ಸಿಆರ್ ಪಿಎಫ ದೆಹಲಿ. ಮಹಾರಾಷ್ಟ್ರ ಪೊಲೀಸ್ . ಮಹಿಳಾ ವಿಭಾಗದಲ್ಲಿ ರಾಜಸ್ಥಾನ.ಎಂ.ಎಸ್.ಅಕಾಡೆಮಿ. ವಿಕೆಎಂ ಮುಂಬೈ. ಇಚಲಕರಂಜಿ. ಕೇರಳಾ. ತಮಿಳುನಾಡು. ಎಂ.ಪಿ.ಛತ್ತಿಸಘಡ. ಮಧ್ಯಪ್ರದೇಶ ಮುಂತಾದ ರಾಜ್ಯಗಳ ಸುಮಾರು 80 ತಂಡಗಳು ಪಾಲ್ಗೊಂಡಿದ್ದವು.
ಜೊಲ್ಲೆ ಗ್ರುಪ್ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಸ್ವಾಗತಿಸಿದರು. ವಿಜಯ ರಾಹುತ್ ನಿರೂಪಿಸಿದರು.
https://pragati.taskdun.com/11th-international-kite-festival-in-belgaum-from-january-21-organized-by-abhay-patil/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ