ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಮಹಾನಗರದ ಸುಮಾರು 2,000 ಶಾಲಾ ವಿದ್ಯಾರ್ಥಿಗಳು ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಸ್ಯಾಂಕಿ ಮೇಲ್ಸೇತುವೆ ನಿರ್ಮಾಣವನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.
“ಪ್ರಿಯ ಬೊಮ್ಮಾಯಿ ಅಂಕಲ್, ದಯವಿಟ್ಟು ನಮ್ಮ ಪರಿಸರವನ್ನು ಉಳಿಸಿ, ನಮಗೆ ಸ್ಯಾಂಕಿ ಮೇಲ್ಸೇತುವೆ ಬೇಡ” ಎಂದು ಮಲ್ಲೇಶ್ವರಂ, ಸ್ಯಾಂಕಿ ಟ್ಯಾಂಕ್ ಮತ್ತು ಸದಾಶಿವನಗರದ ಶಾಲೆಗಳ ವಿದ್ಯಾರ್ಥಿಗಳು ಮುಖ್ಯಮಂತ್ರಿಗೆ ಪತ್ರ ಬರೆದು ಕೋರಿದ್ದಾರೆ.
ಈ ಯೋಜನೆಯಿಂದಾಗಿ ಮಲ್ಲೇಶ್ವರಂ ಪ್ರದೇಶದಲ್ಲಿರುವ 40 ಮರಗಳನ್ನು ತೆರವುಗೊಳಿಸಲು ಕಾರಣವಾಗುತ್ತದೆ ಎನ್ನಲಾಗಿದೆ. ಇದೊಂದು ಪರಿಸರ ಸಂಬಂಧಿ ಪ್ರಮಾದ ಎಂದು ಪರಿಸರ ಕಾರ್ಯಕರ್ತರು ಹೇಳಿದ್ದಾರೆ.
ಈ ಪ್ರದೇಶದಲ್ಲಿ ಭಾರೀ ದಟ್ಟಣೆ ತಡೆಯುವ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚತುಷ್ಪಥ ಮೇಲ್ಸೇತುವೆ ನಿರ್ಮಾಣಕ್ಕೆ 2011 ರಲ್ಲಿ ಪ್ರಸ್ತಾಪಿಸಿತ್ತು. ಇದು ಸರ್ಕಾರದ ಉದ್ದೇಶವನ್ನು ಪ್ರಶ್ನಿಸುವ ಅನೇಕ ವಿವಾದಗಳಿಗೆ ಕಾರಣವಾಯಿತು. ಸ್ಥಳೀಯ ನಿವಾಸಿಗಳು ರಾಜ್ಯ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ನ್ಯಾಯಾಲಯ ಬಿಬಿಎಂಪಿ ಪರವಾಗಿ ತೀರ್ಪು ನೀಡಿತು.
ಅಪಘಾತದಲ್ಲಿ 30ಕ್ಕೂ ಹೆಚ್ಚು ಮೂಳೆಗಳನ್ನು ಮುರಿದುಕೊಂಡಿದ್ದಾಗಿ ಹೇಳಿದ ನಟ
https://pragati.taskdun.com/the-actor-said-that-he-had-broken-more-than-30-bones-in-the-accident/
ಗೌನ್ ಧರಿಸಲು ಹೋಗಿ ಗುಂಡೇಟು ಹಾಕಿಕೊಂಡ ನ್ಯಾಯಾಧೀಶ
https://pragati.taskdun.com/the-judge-who-went-to-wear-a-gown-and-shot-himself/
ಬೆಳಗಾವಿಯಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಅದ್ಧೂರಿ ಜಯಂತಿ
https://pragati.taskdun.com/nija-sharana-ambigara-chowdayya-jayanthi-held-in-belagavi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ