ಪ್ರಗತಿವಾಹಿನಿ ಸುದ್ದಿ; ಕೋಲಾರ: ನನ್ನ ಸರ್ಕಾರದ ಅವಧಿಯಲ್ಲಿ ಒಂದೇ ಒಂದು ನಯಾ ಪೈಸೆ ಲಂಚ ಪಡೆದಿಲ್ಲ. ಬಿಜೆಪಿ ನಾಯಕರು ಅನಗತ್ಯ ಸುಳ್ಳು ಆರೋಪಗಳನ್ನು ಮಾಡುತ್ತ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಕೋಲಾರದ ಹೊರವಲಯದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನನ್ನ ಅವಧಿಯಲ್ಲಿ ಒಂದು ಪೈಸೆ ಲಂಚ ಪಡೆದಿದ್ದರೆ ತೋರಿಸಲಿ. ನಾನು ಲಂಚ ಪಡೆದಿದ್ದು ತೋಸಿದ್ದೇ ಆದರೆ ರಾಜಕೀಯ ನಿವೃತಿ ಪಡೆದು ಸನ್ಯಾಸತ್ವ ಸ್ವೀಕರಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾರಕಕ್ಕೇರಿದೆ. ವಿಧಾನಸೌಧದ ಗೋಡೆಗಳು ಲಂಚ ಲಂಚ ಎಂದು ಪಿಸುಗುಡುತ್ತಿವೆ. ಪ್ರತಿಯೊಂದು ಇಲಾಖೆಯಲ್ಲಿಯೂ ಭ್ರಷ್ಟಾಚಾರ, ಲಂಚ ನಡೆಯುತ್ತಿದೆ. ಹೋಟೆಲ್ ನಲ್ಲಿ ಉಪ್ಪಿಟ್ಟು, ಕೇಸರಿ ಬಾತ್, ಇಡ್ಲಿ, ವಡೆ, ಮಸಾಲಾ ದೋಸೆಗೆ ರೇಟ್ ಫಿಕ್ಸ್ ಮಾಡಿ ಮೆನುಕಾರ್ಡ್ ಇಟ್ಟಂತೆ ವಿಧಾನಸೌಧದಲ್ಲಿ ಇಂತಿಂತ ಹುದ್ದೆಗೆ ಇಷ್ಟು ಎಂದು ಬೋರ್ಡ್ ಹಾಕಿದ್ದಾರೆ ಎಂದು ಗುಡುಗಿದರು.
ತಹಿಶೀಲ್ದಾರ್ ಹುದ್ದೆಗೆ ಇಷ್ಟು, ಪಿಎಸ್ ಐ ಹುದ್ದೆಗೆ ಇಷ್ಟು, ಎಸ್ ಪಿ ಹುದ್ದೆಗೆ ಇಷ್ಟು…ಆ ಹುದ್ದೆ ಇಷ್ಟು, ಈ ಹುದ್ದೆಗೆ ಇಷ್ಟು ಎಂದು ಕಮಿಷನ್ ಬೋರ್ಡ್ ಹಾಕಿದ್ದಾರೆ. ಯಾರಾದರೂ ವಿಧಾನಸೌಧದ ಗೋಡೆಗೆ ಕಿವಿಕೊಟ್ಟು ನೋಡಿ… ಲಂಚ… ಲಂಚ…ಲಂಚ ಎಂದು ಪಿಸುಗುಡುವುದು ಕೇಳುತ್ತದೆ ಅಷ್ಟರಮಟ್ಟಿಗೆ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಬಿಜೆಪಿ ಸರ್ಕಾರದಿಂದಾಗಿ ರಾಜ್ಯದ ಜನತೆ ನಾನಾ ಕಷ್ಟ ಅನುಭವಿಸುವಂತಾಗಿದೆ. ಇಂತಹ ಮಾನ ಮರ್ಯಾದೆ ಇಲ್ಲದ ಬಿಜೆಪಿ ನಾಯಕರು ಮತ್ತೆ ಅಧಿಕಾರಕ್ಕೆ ಬರಬೇಕಾ ಎಂಬುದನ್ನು ಜನರು ಯೋಚಿಸಬೇಕಿದೆ. ಭ್ರಷ್ಟ ಸರ್ಕಾರವನ್ನು ತೊಲಗಿಸಿ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕಿದೆ ಎಂದು ಹೇಳಿದರು.
*ಸಿಎಂ ಬೊಮ್ಮಾಯಿಗೆ ಸವಾಲು ಹಾಕಿದ ಡಿ.ಕೆ.ಶಿವಕುಮಾರ್*
https://pragati.taskdun.com/congressprotestbangalored-k-shivakumar/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ