ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: “ನಮ್ಮ ದೇಶದ ಜನಪದರು ತಮ್ಮ ಕೃಷಿ ಕಾಯಕದೊಂದಿಗೆ ವಿವಿಧ ಆಚರಣೆಗಳನ್ನು ರೂಢಿಸಿಕೊಂಡು ಬಂದಿದ್ದಾರೆ. ಭೂಮಿಯನ್ನು ತಾಯಿಯಾಗಿ ಪೂಜಿಸುವ ಸಂಸ್ಕೃತಿ ನಮ್ಮದು. ಅಂಥ ಕೃಷಿ ಪರಂಪರೆಯನ್ನು ಉಳಿಸಿ, ಬೆಳೆಸುವ ಮೂಲಕ ಅನ್ನದಾತನ ಋಣ ತೀರಸಬೇಕು” ಎಂದು ಕ್ರಾಂತಿ ಮಹಿಳಾ ಮಂಡಳದ ಹಾಗೂ ಉಮಾ ಸಂಗೀತ ಪ್ರತಿಷ್ಠಾನದ ಅಧ್ಯಕ್ಷರಾದ ಮಂಗಲ ಮಠದ ಅಭಿಪ್ರಾಯ ಪಟ್ಟರು.
ಕ್ರಾಂತಿ ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನದ ವತಿಯಿಂದ ಸಂಕ್ರಾಂತಿ ನಿಮಿತ್ತ ಜಕ್ಕನ್ನವರ ತೋಟದಲ್ಲಿ ಹಮ್ಮಿಕೊಳ್ಳಲಾದ ಅರಿಶಿನ ಕುಂಕುಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಸುಗ್ಗಿಯ ಕಾಲದಲ್ಲಿ ಸೂರ್ಯ ತನ್ನ ಪಥವನ್ನು ಬದಲಿಸುವ ದಿನವನ್ನು ಸುಗ್ಗಿಯ ಹಬ್ಬ ಮಾಡಿ ಕೃಷಿಯ ಆಧಾರವಾಗಿರುವ ಸೂರ್ಯ, ಭೂಮಿಯನ್ನು ಪೂಜಿಸಿ ಸಂಭ್ರಮಿಸುತ್ತಾರೆ” ಎಂದರು.
ಪ್ರಕೃತಿಯ ಮಡಿಲಲ್ಲಿ ಹಚ್ಚ ಹಸುರಿನ ರಮ್ಯ ತಾಣದಲ್ಲಿ ಮಂಡಳದ ಎಲ್ಲ ಮಹಿಳೆಯರು ಅತ್ಯಂತ ಉತ್ಸಾಹದಿಂದ ಕಪ್ಪು ಬಣ್ಣದ ಸೀರೆ ಉಟ್ಟು ಪ್ರಕೃತಿ ಮಾತೆಯನ್ನು ಪೂಜಿಸಿ ಸುಗ್ಗಿ ಹಾಡನ್ನು ಹಾಡುತ್ತ ಒಬ್ಬರಿಗೊಬ್ಬರು ಎಳ್ಳು ಬೆಲ್ಲವನ್ನು ಕೊಟ್ಟು ಸಿಹಿ ಹಂಚಿ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಸಂಪ್ರದಾಯಿಕ ಗ್ರಾಮೀಣ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಭೂತಾಯಿ ಮಡಿಲಲ್ಲಿ ಸಂಕ್ರಾಂತಿ ಹಬ್ಬದ ಮೃಷ್ಟಾನ್ನ ಭೋಜನ ಸವಿದುರು.
ಕಾರ್ಯದರ್ಶಿ ರತ್ನಶ್ರೀ ಗುಡೇರ ಹಾಗೂ ಪ್ರಾಯೋಜಕರಾದ ಪ್ರೀತಿ ಕಲ್ಯಾಣ ಶೆಟ್ಟಿ, ಆಶಾ ಹೊಸಮನಿ, ಸಂಜೋತಾ ಪಾಟೀಲ, ಪದ್ಮಜಾ ತುರಮುಂದಿ, ವಸುಂದರಾ ದೇಸನೂರ, ರಾಧಿಕಾ ಬಿರ್ಜೆ ಮುಂತಾದವರು ಉಪಸ್ಥಿತರಿದ್ದರು.
*ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಕುಮಾರಸ್ವಾಮಿಗೆ ಸಾಲು ಸಾಲು ಪ್ರಶ್ನೆ ಮುಂದಿಟ್ಟ ಡಿ.ಕೆ.ಶಿವಕುಮಾರ್*
https://pragati.taskdun.com/d-k-shivakumarkolaraprajadhwani/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ