ಪ್ರಗತಿವಾಹಿನಿ ಸುದ್ದಿ, ರಾಮದುರ್ಗ: ಕೃಷಿ ಜಮೀನಿನಿಂದ ಪಂಪ್ ಸೆಟ್ ಹಾಗೂ ಅದಕ್ಕೆ ಸಂಬಂಧಿಸಿದ ಪರಿಕರಗಳನ್ನು ಕಳುವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಖಾನಪೇಟ್ ನಿವಾಸಿ ಪ್ರವೀಣ ಈರಯ್ಯ ಪೂಜಾರಿ ಹಾಗೂ ಗಂಗಪ್ಪ ನಾಗಪ್ಪ ಯರಗಟ್ಟಿ ಬಂಧಿತರು.
ಇವರಿಂದ ಕಟಕೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹಳ್ಳಿಗಳಲ್ಲಿ ಕಳ್ಳತನ ಮಾಡಿದ ಬೈಕ್ , 2 ಸ್ಟಾಟರ್ ಕೇಬಲ್ ವೈರ್, 2 ಬೋರಿನ ಮೋಟಾರ್ ಮತ್ತು 6 ಬೋರಿನ ಪಂಪ್ ಸೇರಿ ಒಟ್ಟು 1.80ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ಜ.15 ರಂದು ಚುಂಚನೂರು ಗ್ರಾಮದ ಗಿರೆಪ್ಪ ಪತ್ತೆಪ್ಪ ಹಂಜಿ ಎಂಬುವವರು ಕಟಕೋಳ ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ಜಮೀನಿನಲ್ಲಿನ 30 ಸಾವಿರ ರೂ. ಮೌಲ್ಯದ ಎಲ್.ಟಿ ಅಡಕಿ ಕಂಪನಿಯ 5 ಸ್ಟಾಟರ್ ಗಳು, 17 ಸಾವಿರ ರೂ. ಮೌಲ್ಯದ ಫಿನೋಲೆಕ್ಸ್ ಕಂಪನಿಯ 4 ಎಂಎಂನ 200 ಸೂಟ್ ಕೇಬಲ್ ವೈರ್ ಗಳನ್ನು ಜ.5ರ ರಾತ್ರಿ ಕಳುವು ಮಾಡಿದ್ದಾಗಿ ದೂರು ನೀಡಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಹಾಗೂ ಡಿಎಸ್ ಪಿ ರಾಮನಗೌಡ ಹಟ್ಟಿ ಹಾಗೂ ಐ.ಆರ್. ಪಟ್ಟಣಶೆಟ್ಟಿ ರಾಮದುರ್ಗ ಅವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಗಳಾದ ಕಟಕೋಳ ಪಿಎಸ್ ಐ ಎಸ್.ಪಿ. ಉನ್ನದ ನೇತೃತ್ವದಲ್ಲಿ ಸಿಬ್ಬಂದಿ ಎಚ್.ಬಿ. ಮಾದಿನ್ನಿ, ಎಸ್. ಎಫ್. ಭಾಂಗಿ, ಬಿ.ಎ. ಗುಂಡೂರ, ಎಂ.ಬಿ. ಪೂಜೇರ, ಡಿ.ಎಚ್. ನದಾಫ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ