ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಈವರೆಗೆ ಕಂಡರಿಯದ ಅಭಿವೃದ್ಧಿ ಕಾರ್ಯ ನಡೆದಿದ್ದು ಈ ಪೈಕಿ ಬಹುತೇಕ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಜನತೆಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಅವರು ಗ್ರಾಮೀಣ ಕ್ಷೇತ್ರದ ಹಿಂಡಲಗಾ ಗ್ರಾಮದಲ್ಲಿರುವ ಕೇಂದ್ರೀಯ ಕಾರಾಗೃಹ ಪಕ್ಕದಲ್ಲಿರುವ ಕ್ವಾಟರ್ಸ್ ಗಳಿಗೆ ಮುಖ್ಯ ರಸ್ತೆಯಿಂದ ಸಾಗುವ ಉಪ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಈ ಕಾಮಗಾರಿಗೆ ಅವರು ಲೋಕೋಪಯೋಗಿ ಇಲಾಖೆ ವತಿಯಿಂದ 65 ಲಕ್ಷ ರೂ. ಮಂಜೂರು ಮಾಡಿಸಿದ್ದಾರೆ. ಈ ಸೌಲಭ್ಯಗಳನ್ನು ಸ್ಥಳೀಯರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಈ ಸಂದರ್ಭದಲ್ಲಿ ಹಿಂಡಲಗಾ ಕೇಂದ್ರೀಯ ಕಾರಾಗೃಹದ ಸೂಪರಿಂಟೆಂಡೆಂಟ್ ಸಿದ್ಧಾರ್ಥ ಕೃಷ್ಣ, ಇನ್ನುಳಿದ ನೌಕರಸ್ಥರು, ಯುವರಾಜ ಕದಂ, ಮಹಾಂತೇಶ ವಜ್ರಮಟ್ಟಿ ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.
https://pragati.taskdun.com/kpcc-m-lakshmanpress-meetramesh-jarakiholid-k-shivakumaraudio-bomb/
*ಚಿನ್ನದಂಗಡಿ ಮಾಲೀಕರು, ಉದ್ಯಮಿಗಳಿಗೆ IT ಶಾಕ್; 25 ಕಡೆ ದಾಳಿ*
https://pragati.taskdun.com/vidhanasabha-electioncongressbelagavi12-seatm-b-patil/
*ಹಿರಿಯ ಸಾಹಿತಿ ಡಾ. ಕೆ.ವಿ.ತಿರುಮಲೇಶ್ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ನಷ್ಟ: ನಾಡೋಜ ಡಾ.ಮಹೇಶ ಜೋಶಿ ಸಂತಾಪ*
https://pragati.taskdun.com/senior-literature-dr-k-v-tirumaleshpassing-awaynadoja-dr-mahesh-joshicondolences/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ