ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಹುತೇಕ ಕಾಂಕ್ರೀಟ್ ರಸ್ತೆಗಳನ್ನು ಗುಣಮಟ್ಟದಲ್ಲಿ ನಿರ್ಮಿಸಲಾಗಿದ್ದು ಇವು ದೀರ್ಘ ಕಾಲದವರೆಗೆ ಬಾಳಿಕೆ ಬರಲಿವೆ. ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಜನತೆ ತಮ್ಮೊಂದಿಗೆ ಸಹಕರಿಸಬೇಕು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಂಗ್ರಾಳಿ ಕೆಎಚ್ ಗ್ರಾಮದ ನಾರಾಯಣ ಗಲ್ಲಿಯ ರಸ್ತೆಯ ಅಭಿವೃದ್ಧಿಗಾಗಿ ಪಂಚಾಯತ ರಾಜ್ ಎಂಜಿನಿಯರಿಂಗ್ ಇಲಾಖೆ ವತಿಯಿಂದ ಹಣ ಮಂಜೂರು ಮಾಡಿಸಿರುವ ಲಕ್ಷ್ಮೀ ಹೆಬ್ಬಾಳಕರ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಮಂಗಳವಾರ ಭೂಮಿ ಪೂಜೆ ಕೈಗೊಂಡು ಚಾಲನೆ ನೀಡಿದರು.
“ಇನ್ನೂ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಬೆಳಗಾವಿ ಗ್ರಾಮೀಣ ಕ್ಷೇತ್ರದ ಪ್ರತಿಷ್ಠೆ ಹೆಚ್ಚಿಸುವ ಉದ್ದೇಶ ತಮ್ಮದಾಗಿದ್ದು ಜನತೆಯ ಆಶೀರ್ವಾದದಿಂದ ಮಾತ್ರ ಇದು ಕಾರ್ಯಗತವಾಗಲು ಸಾಧ್ಯ” ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಬಾಳು ಪಾಟೀಲ, ಜ್ಯೋತಿ ಪಾಟೀಲ, ಅನಿತಾ ಪಾಟೀಲ, ಮನೋಹರ ಪಾಟೀಲ್, ಬಾಹು ಬೇನಾಳ್ಕರ್, ವಿಶಾಲ ಭೋಸ್ಲೆ, ಜ್ಯೋತಿಬಾ ಪಾಟೀಲ, ಸೂರಜ್ ದಳ್ವಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ಅದಾನಿ 11ಕ್ಕಿಳಿದ ನಂತರ ಜಗತ್ತಿನ ಟಾಪ್ ಟೆನ್ ಶ್ರೀಮಂತರು ಯಾರು ಗೊತ್ತೇ?
https://pragati.taskdun.com/do-you-know-who-are-the-top-ten-richest-people-in-the-world-after-adani-is-down-to-11/
*ಹೈಸ್ಕೂಲು ವಿದ್ಯಾರ್ಥಿ ಆತ್ಮಹತ್ಯೆ; ಬಾಲಕನ ದುಡುಕಿನ ನಿರ್ಧಾರಕ್ಕೆ ಕಾರಣವೇನು?*
https://pragati.taskdun.com/14years-boy9th-studentssuicidemangalore/
ಗೋರಖನಾಥ ಮಂದಿರದ ಮೇಲಿನ ದಾಳಿಕೋರನಿಗೆ ಮರಣ ದಂಡನೆ
https://pragati.taskdun.com/death-penalty-for-attacker-of-gorakhnath-temple/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ