Latest

*ಅಂಬಾಭವಾನಿ ಜಾತ್ರಾ ಮಹೋತ್ಸವದ ಧರ್ಮಸಭೆ ಕಾರ್ಯಕ್ರಮ*

ಪ್ರಗತಿವಾಹಿಹಿನಿ ಸುದ್ದಿ; ಜಮಖಂಡಿ: ಜಮಖಂಡಿ ತಾಲೂಕಿನ ಸಾವಳಗಿ ಪಟ್ಟಣದಲ್ಲಿ ಪ್ರತಿ ವರ್ಷಕ್ಕೊಮ್ಮೆ ಜರುಗುವ ಅಂಬಾಭವಾನಿ ಜಾತ್ರಾ ಮಹೋತ್ಸವವನ್ನು ಪಟ್ಟಣದಲ್ಲಿ ಭಕ್ತಿ, ಶ್ರದ್ಧೆ, ಸಡಗರಗಳಿಂದ ಆಚರಿಸಲಾಯಿತು.

ನಾಲ್ಕುನೇಯ ದಿನವಾದ ಮಂಗಳವಾರ ಧರ್ಮ ಸಭೆ ಹಾಗೂ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮವನ್ನು ಮರಾಠಾ ಸಮಾಜದ ಜಗದ್ಗುರು ವೇದಾಂತಾಚಾರ್ಯ ಶ್ರ್ರೀ ಮಂಜುನಾಥ ಭಾರತಿ ಸ್ವಾಮೀಜಿ ಉದ್ಘಾಟಿಸಿದರು.

ನಂತರ ಮಾತನಾಡಿದ ಸ್ವಾಮೀಜಿ ಅವರು ಜಾತಿ ಮತ ಪಂಥ ಬೇದ ಬಾವ ಇಲ್ಲದೆ ನಾಲ್ಕು ದಿನಗಳ ಕಾಲ ಜಾತ್ರೆ ಅತಿ ವಿಜೃಂಭಣೆಯಿಂದ ನಡೆಸಿಕೊಂಡು ಬಂದಿದ್ದಿರಿ, ದೇಶಭಕ್ತನಾಗಿ, ಸ್ವಾಭಿಮಾನಿಯಾಗಿ ಬದುಕುವಂತೆ ಶಿವಾಜಿ ತಾಯಿ ಜೀಜಾಬಾಯಿ ಹಾಗೂ ಆಧ್ಯಾತ್ಮಿಕ ಗುರು ಕೊಂಡದೇವ ಆತನಿಗೆ ಮಾರ್ಗದರ್ಶನ ನೀಡಿದ್ದರು. ಶೌರ್ಯ ಸಾಹಸಕ್ಕೆ ಹೆಸರಾಗಿರುವ ಶಿವಾಜಿಯ ಜೀವನಾದರ್ಶ ಇಂದಿನ ಯುವ ಜನಾಂಗಕ್ಕೆ ಮಾದರಿ ಯಾಗಿದೆ ಎಂದು ಹೇಳಿದರು.

ಬಿಜೆಪಿ ಯುವ ನಾಯಕರು ಮೋಹನ ಜಾಧವ ಮಾತನಾಡಿ ಅವರು ಶಿವಾಜಿ ಮಹಾರಾಜರು ಅಪ್ಪಟ ದೇಶಭಕ್ತಿ, ಸಾಮಾಜಿಕ ಕಳಕಳಿ ಹೊಂದಿದ ಮಹಾನ್ ವ್ಯಕ್ತಿ. ಇಂತಹ ಮಹಾನ್ ವ್ಯಕ್ತಿಗಳ ಜೀವನತತ್ವಗಳನ್ನು ಅಳವಡಿಸಿಕೊಂಡು ನಾವು ಮುನ್ನಡೆಯಬೇಕು. ಶಿವಾಜಿ ಮಹಾರಾಜರಲ್ಲಿದ್ದ ಅಪ್ಪಟ ದೇಶಾಭಿಮಾನ, ಧೈರ್ಯ, ಸಾಹಸ ಗುಣಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು, ಶಿವಾಜಿ ಮಹಾರಾಜರ ಜೀವನ ಚರಿತ್ರೆ ಅಧ್ಯಯನ ಮಾಡಬೇಕು, ಜೀವನದ ಸಾಧನೆ ತಿಳಿದುಕೊಳ್ಳುವು ದರಿಂದ ನಮ್ಮಲ್ಲಿ ಹೊಸ ಉತ್ಸಾಹ, ಸ್ವಾಭಿಮಾನ ಜಾಗೃತಗೊಳ್ಳುತ್ತದೆ ಎಂದು ಹೇಳಿದರು.

ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಸುಶೀಲಕುಮಾರ ಬೆಳಗಲಿ ಮಾತನಾಡಿ ಬಾಲ್ಯದಲ್ಲಿ ಶಿವಾಜಿಯು ತನ್ನ ವಯಸ್ಸಿನ ಮಕ್ಕಳನ್ನು ಕೂಡಿಹಾಕಿ ಅವರ ನಾಯಕನಾಗಿ ಹೋರಾಡಿ ಕೋಟೆಗಳನ್ನು ಗೆಲ್ಲುವ ಆಟವನ್ನು ಆಡುತ್ತಿದ್ದನು. ಅವರು ಯೌವನಕ್ಕೆ ಬಂದ ತಕ್ಷಣ, ಅವರು ಆಡುತ್ತಿದ್ದ ಆಟವು ನಿಜವಾದ ಕೆಲಸವಾಯಿತು ಮತ್ತು ಶತ್ರುಗಳ ಮೇಲೆ ಆಕ್ರಮಣ ಮಾಡಿ ಅವರ ಕೋಟೆಗಳು ಇತ್ಯಾದಿಗಳನ್ನು ಗೆಲ್ಲಲು ಪ್ರಾರಂಭಿಸಿದರು. ಪುರಂದರ ಮತ್ತು ತೋರಣ ಮುಂತಾದ ಕೋಟೆಗಳ ಮೇಲೆ ಶಿವಾಜಿ ತನ್ನ ಅಧಿಕಾರವನ್ನು ಸ್ಥಾಪಿಸಿದ ತಕ್ಷಣ, ಅವರ ಹೆಸರು ಮತ್ತು ಕಾರ್ಯಗಳು ದಕ್ಷಿಣದಾದ್ಯಂತ ಹರಡಿತು ಎಂದರು.

ಈ ಕಾರ್ಯಕ್ರಮದಲ್ಲಿ ಜಮಖಂಡಿ ತಹಶೀಲ್ದಾರ್ ಸದಾಶಿವ ಮುಕ್ಕೋಜಿ, ಸ್ವಾಮಿ ಬುದ್ದಿಯೋಗಾನಂದ ಸ್ವಾಮೀಜಿ, ತಮ್ಮಣ್ಣಾಚಾರ್ಯ ಜೋಶಿ, ಶ್ರೀಕಾಂತ್ ಕುಲಕರ್ಣಿ, ಸಿದ್ದು ದಿವಾಣ, ಉತ್ತರಪ್ರದೇಶ ಬಿಜೆಪಿ ನಾಯಕ ಅನೀಲ ಪಾಟೀಲ, ಸುನೀಲ್ ಸಿಂಧೆ, ಶ್ರೀಮತಿ ಸುನಂದಾ ಮಾನೋಣಿ, ಬಸವರಾಜ ಸಿಂಧೂರ, ಸುಭಾಷ್ ಪಾಟೋಳ್ಳಿ, ಸತಗೌಡ ನ್ಯಾಮಗೌಡ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

*ಜನಾರ್ಧನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ ಯಾರ ವಿರುದ್ಧ ಸ್ಪರ್ಧಿಸಲಿದ್ದಾರೆ ಗೊತ್ತಾ?*

https://pragati.taskdun.com/janaradhana-reddykalyana-rathayatrearuna-lakshmibellary-candidate/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button