Latest

“ಗಾಂಧಿ ಸ್ಮರಣ – ಗಾಂಧಿ ನಮನ” ಕಾರ್ಯಕ್ರಮ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಆಚಾರ, ವಿಚಾರಗಳೇ ಗಾಂಧೀಜಿಯವರ ಬದುಕಾಗಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಇಂದು ವಿವೇಕ ಯುವ ಮತ್ತು ಗಮ್ಯ ಫೌಂಡೇಶನ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಹಯೋಗದೊಂದಿಗೆ ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಬಳಿ ಆಯೋಜಿಸಿದ್ದ “ಗಾಂಧಿ ಸ್ಮರಣ – ಗಾಂಧಿ ನಮನ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನೈಸರ್ಗಿಕವಾಗಿರುವ ಸೃಷ್ಟಿಯಲ್ಲಿ ಏನು ಬೇಕೆಂದು ತಿಳಿದುಕೊಳ್ಳುವ ಬುದ್ಧಿ ಮನುಷ್ಯನಲ್ಲಿ ಮಾತ್ರ ಇದೆ. ಮಹಾತ್ಮಾ ಗಾಂಧೀಜಿ ಅವರಿಗೆ ಮೆದುಳು – ಹೃದಯ ಒಂದೇ ಇತ್ತು. ಹೃದಯ ಹೇಳುವುದೇ ಅವರ ವಿಚಾರ ಆಗಿತ್ತು ಎಂದು ಅವರು ಹೇಳಿದರು.

ಇಡೀ ಜಗತ್ತಿಗೆ ನೈಜ ಭಾರತ  ಪ್ರತಿನಿಧಿಸಿದ ಏಕೈಕ ವ್ಯಕ್ತಿ ಗಾಂಧೀಜಿ. ಅಲ್ಲಿಯವರೆಗೂ ಭಾರತದ ಬಗ್ಗೆ ಅನೇಕ ಅಭಿಪ್ರಾಯಗಳು ಇದ್ದವು. ಎರಡನೇ ಜಾಗತಿಕ ಯುದ್ಧ ಮುಗಿದು ಎಲ್ಲೆಡೆ ಪ್ರಜಾಪ್ರಭುತ್ವ ಸ್ಥಾಪನೆಯಾಗುತ್ತಿದ್ದಾಗ ಇಡೀ ವಿಶ್ವ ಭಾರತದ ಬಗ್ಗೆ ಗೌರವಯುತವಾಗಿ ನಡೆದುಕೊಳ್ಳುವಂತಾಗಲು ಕಾರಣ ಗಾಂಧೀಜಿ. ಅವರ ಜೀವನ ೆಲ್ಲ ಭಾವನೆಗಳಿಂದಲೂ ಸಮ್ಮಿಳಿತವಾಗಿರುವುದು ಮಹತ್ವದ್ದಾಗಿದೆ ಎಂದರು.

ಈ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳು ಹಾಗೂ ರಾಜ್ಯ ಗಡಿ ಹಾಗೂ ನದಿ ರಕ್ಷಣಾ ಆಯೋಗದ ಅಧ್ಯಕ್ಷ ನ್ಯಾ.ಶಿವರಾಜ್ ವಿ.ಪಾಟೀಲ, ಪ್ರಜಾವಾಣಿ ಮುಖ್ಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್, ನಾಡೋಜ , ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ: ವೂಡೇ ಪಿ.ಕೃಷ್ಣ, ವಿವೇಕ ಯುಗ ಪ್ರತಿಷ್ಠಾನದ ಪ್ರತಿನಿಧಿಗಳು ಉಪಸ್ಥಿತರಿದ್ದರು.

 

 

*ಕೇಂದ್ರ ಬಜೆಟ್ ಗೆ ಪ್ರಧಾನಿ ಮೋದಿ ಮೆಚ್ಚುಗೆ*

https://pragati.taskdun.com/union-budgetnirmala-sitaramanpm-narendra-modireaction/

ಕೇಂದ್ರ ಬಜೆಟ್ ಗೆ ಪ್ರಧಾನಿ ಮೋದಿ ಸಂಪುಟ ಅನುಮೋದನೆ

https://pragati.taskdun.com/union-budget-2023nirmala-seetaramanlokasabhe-2/

*ಯಾವುದರ ಬೆಲೆ ದುಬಾರಿ? ಯಾವುದು ಕಡಿಮೆ?*

https://pragati.taskdun.com/union-budget-2023central-governmentnirmala-sitaraman-2/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button