Kannada NewsKarnataka NewsLatest

*BREAKING: ಆಟವಾಡುತ್ತಿದ್ದ ವೇಳೆ ದುರಂತ: ಕೆರೆಗೆ ಬಿದ್ದು ಇಬ್ಬರು ಮಕ್ಕಳು ಸಾವು*

ಪ್ರಗತಿವಾಹಿನಿ ಸುದ್ದಿ: ಮನೆಯ ಬಳಿ ಆಟವಾಡುತ್ತಿದ್ದ ಬಾಲಕರಿಬ್ಬರೂ ಕೆರೆ ನೀರಿಗೆ ಬಿದ್ದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ವಿಶ್ವೇಶ್ವರಯ್ಯ ಲೇಔಟ್ ನಲ್ಲಿ ಈ ದುರಂತ ನಡೆದಿದೆ. ಬಾಲಕರಿಬ್ಬರೂ ಅಣ್ಣ-ತಮ್ಮಂದಿರು. ಮನೆ ಬಳಿ ಆಟವಾಡುತ್ತಿದ್ದ ಇಬ್ಬರೂ ಆಕಸ್ಮಿಕವಾಗಿ ಕೆರೆಗೆ ಬಿದ್ದಿದ್ದಾರೆ. ಗಮನಕ್ಕೆ ಬರುತ್ತಿದ್ದಂತೆ ಪೋಷಕರು, ಸ್ಥಳೀಯರು ಮಕ್ಕಳಿಬ್ಬರನ್ನು ಮೇಲಕೆತ್ತಿದ್ದಾರೆ. ಅಷ್ಟರಲ್ಲಿ ಓರ್ವ ಬಾಲಕ ಸಾವನ್ನಪ್ಪಿದ್ದ. ಇನ್ನೋರ್ವನ ಸ್ಥಿತಿ ಗಂಭೀರವಾಗಿತ್ತು.

Home add -Advt

ತಕ್ಷಣ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೇ ಆತನೂ ಕೊನೆಯುಸಿರೆಳೆದಿದ್ದಾನೆ. 10 ವರ್ಷದ ಜಗನ್ನಾಥ್ ಹಾಗೂ 8 ವರ್ಷದ ಸಂಜಯ್ ಮೃತ ಬಾಲಕರು. ಇಬ್ಬರು ಮಕ್ಕಳನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.


Related Articles

Back to top button