Latest

*ಕೇಂದ್ರ ಸರ್ಕಾರದ ಬಜೆಟ್ ಕನ್ನಡಿಯೊಳಗಿನ ಗಂಟು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಜೆಟ್ ನಲ್ಲಿ ಕರ್ನಾಟಕಕ್ಕೆ ಏನನ್ನೂ ನೀಡಿಲ್ಲ. ಕೇಂದ್ರ ಸರ್ಕಾರದ ಬಜೆಟ್ ಕನ್ನಡಿಯೊಳಗಿನ ಗಂಟು ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಒಟ್ಟು 45 ಲಕ್ಷದ 3 ಸಾವಿರದ 97 ಕೋಟಿ ಬಜೆಟ್ ಮಂಡಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ 6 ಲಕ್ಷ ಕೋಟಿ ಹೆಚ್ಚಳದ ಬಜೆಟ್ ಇದು. ಆದರೆ ನೋಟೀಫಿಕೇಷನ್ ಆಗದ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಘೋಷಿಸಿ ಸುಳ್ಳು ಆಶ್ವಾಸನೆ ನೀಡಿದ್ದಾರೆ ಎಂದು ಕಿಡಿಕಾರಿದರು.

ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ, ಕೈಗಾರಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಬಜೆಟ್ ನಲ್ಲಿ ಯಾವುದೇ ಒತ್ತು ನೀಡಿಲ್ಲ. ಕರ್ನಾಟಕಕ್ಕೆ ಯಾವುದೇ ಯೋಜನೆ ಏನೂ ನೀಡಿಲ್ಲ. ಭದ್ರಾಮೇಲ್ದಂಡೆ ಯೋಜನೆಗೆ 5,300ಕೋಟಿ ಹಣ ನೀಡುತ್ತೇವೆ ಎಂದು ಘೋಷಿಸಿದ್ದಾರೆ. ಆದರೆ ಯೋಜನೆಗೆ ಇನ್ನೂ ನೋಟಿಫಿಕೇಷನ್ ಸಹ ಆಗಿಲ್ಲ. ನೋಟಿಫಿಕೇಷನ್ ಆಗಿಲ್ಲ ಎಂದರೆ 1 ರೂಪಾಯಿ ಕೂಡ ಖರ್ಚು ಮಾಡಲಾಗಲ್ಲ. ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದರು. ಈ ಬಗ್ಗೆ ಬಜೆಟ್ ನಲ್ಲಿ ಯಾವ ಘೋಷಣೆಯನ್ನೂ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ತೆರಿಗೆ ವಿನಾಯಿತಿ ಎಂದು ಘೋಷಿಸಿದ್ದಾರೆ. ಆದರೆ ಕಾರ್ಪೊರೇಟ್, ಆದಾಯ ತೆರಿಗೆಯಿಂದ ಶೇ.30ರಷ್ಟು ಆದಾಯ ಬರುತ್ತೆ. ಜನರು ಕಟ್ಟುವ ತೆರಿಗೆಯಿಂದ ಶೇ.34ರಷ್ಟು ಆದಾಯ ಕೇಂದ್ರಕ್ಕೆ ಹೋಗುತ್ತೆ ಹೀಗಿರುವ ಅವರು ಕೊಟ್ಟಿದ್ದಕ್ಕಿಂತ ಜನರು ಕಟ್ಟುವ ತೆರಿಗೆಯೇ ಹೆಚ್ಚು. ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲಮಾಡಲು ತೆರಿಗೆ ಕಡಿತ ಮಾಡಿದ್ದಾರೆ. ಕೇಂದ್ರ ಬಜೆಟ್ ಕನ್ನಡಿಯೊಳಗಿನ ಗಂಟು ಎಂದು ಟೀಕಿಸಿದ್ದಾರೆ.

*ಕೇಂದ್ರ ಬಜೆಟ್; ಕರ್ನಾಟಕಕ್ಕೆ ಬಂಪರ್ ಗಿಫ್ಟ್*

https://pragati.taskdun.com/union-budget-2023central-governmentnirmala-sitaramanbhadra-meldande-yojane/

*ತೆರಿಗೆ ಹೊರೆ ಇಳಿಸಿದ ಪ್ರಧಾನಿ ಮೋದಿ ಸರ್ಕಾರ*

https://pragati.taskdun.com/union-budget-2023central-governmentnirmala-sitaramanincom-tax/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button