ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
ಶಾಸಕ ಶಿವನಗೌಡ ನಾಯಕ್ ಅವರನ್ನು ಬಂಧಿಸಿರುವುದನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಅವರು ಖಂಡಿಸಿದ್ದಾರೆ.
ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನಲ್ಲಿ ಮನವಿ ಸಲ್ಲಿಸಲು ತೆರಳಿದ್ದ ಜನಪ್ರತಿನಿಧಿಯನ್ನು ಬಂಧಿಸುವ ಮೂಲಕ ಮುಖ್ಯಮಂತ್ರಿಗಳ ಪಾಳೇಗಾರಿಕೆ ಸಂಸ್ಕೃತಿ ಮೆರೆದಿದ್ದಾರೆ. ಆದರೆ ಪಾಳೇಗಾರಿಕೆ ಆಳ್ವಿಕೆ ಇಲ್ಲಿ ನಡೆಯುವುದಿಲ್ಲ. ಇದೇ ರೀತಿಯ ಆಡಳಿತ ನಡೆಸಿದರೆ ರಾಜ್ಯದ ಜನರು ಸರಿಯಾದ ಪಾಠ ಕಲಿಸುತ್ತಾರೆಂದು ಅವರು ಪತ್ರಿಕಾ ಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ಶಿವನಗೌಡ ನಾಯಕ್ ಅವರು ಜನಪ್ರತಿನಿಧಿಯಾಗಿದ್ದು ಅವರನ್ನು ಯಾವ ಕಾರಣಕ್ಕೆ ಬಂಧಿಸಲಾಗಿದೆ ಎಂದು ಪ್ರಶ್ನಿಸಿರುವ ರವಿಕುಮಾರ್ ಕೂಡಲೇ ಶಿವನಗೌಡ ನಾಯಕ್ ಅವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಶಿವನಗೌಡ ನಾಯಕ್ ಅವರು ವಾಲ್ಮೀಕ ಸಮುದಾಯದ ನಾಯಕರಾಗಿದ್ದು ಅವರ ಬಂಧನದಿಂದ ಮುಖ್ಯಮಂತ್ರಿಗಳು ವಾಲ್ಮೀಕ ವರ್ಗದವರ ನಾಯಕನಿಗೆ ಅವಮಾನ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ