Latest

ಅದಾನಿ, ಹಿಂಡೆನ್‌ಬರ್ಗ್ ವರದಿ ಗದ್ದಲ: ಲೋಕಸಭೆ, ರಾಜ್ಯಸಭೆ ಕಲಾಪಗಳು ಮುಂದೂಡಿಕೆ  

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಉದ್ಯಮಿ ಗೌತಮ್ ಅದಾನಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಕೋಲಾಹಲ ಸೃಷ್ಟಿಸಿದ ನಂತರ ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳನ್ನು ಗುರುವಾರ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.

ಅದಾನಿ ಗ್ರೂಪ್ ವಂಚನೆ ಮಾಡಿದೆ ಎಂದು ಆರೋಪಿಸಿರುವ ಹಿಂಡೆನ್‌ಬರ್ಗ್ ವರದಿಯ ಕುರಿತು ಚರ್ಚೆಗೆ ಪ್ರತಿಪಕ್ಷಗಳು ಒತ್ತಾಯಿಸಿದವು. ಮಾರುಕಟ್ಟೆ ಮೌಲ್ಯ  ಕಳೆದುಕೊಳ್ಳುತ್ತಿರುವ ಕಂಪನಿಗಳಲ್ಲಿ ಎಲ್‌ಐಸಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಹೂಡಿಕೆಯ ಬಗ್ಗೆ ಪ್ರತಿಪಕ್ಷಗಳು ಸರಕಾರದಿಂದ ಸ್ಪಷ್ಟನೆ ಬಯಸುವುದಾಗಿ ಎಂದು ಕಾಂಗ್ರೆಸ್ ಹೇಳಿದೆ.

ಸ್ಪೀಕರ್ ಓಂ ಬಿರ್ಲಾ ಅವರು ಜಾಂಬಿಯಾದಿಂದ ಸಂಸದೀಯ ನಿಯೋಗವನ್ನು ಸ್ವಾಗತಿಸಿ ಪ್ರಶ್ನೋತ್ತರ ಅವಧಿ ಆರಂಭಿಸುತ್ತಿದ್ದಂತೆಯೇ ಪ್ರತಿಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗುತ್ತ ಸದನದ ಬಾವಿಗೆ ಧಾವಿಸಿದರು. ಈ ವೇಳೆ ಸ್ಪೀಕರ್ ಬಿರ್ಲಾ ಅವರು ಗದ್ದಲ ಕುರಿತು ಆಕ್ಷೇಪಿಸಿ ಘೋಷಣೆಗಳನ್ನು ಕೂಗದಂತೆ ಕೇಳಿಕೊಂಡರು.

ಆದಾಗ್ಯೂ ಪ್ರತಿಪಕ್ಷದ ಸದಸ್ಯರ ಘೋಷಣೆಗಳು ಮುಂದುವರಿದಿದ್ದರಿಂದ ಲೋಕಸಭೆಯನ್ನು ಸ್ಪೀಕರ್ ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

*ಡಂಬಲ್ಸ್ ನಿಂದ ಮನಬಂದಂತೆ ಹೊಡೆದು ಪತ್ನಿಯನ್ನು ಕೊಂದ ಪತಿ*

https://pragati.taskdun.com/husbandmurderwifebangalore-2/

100 ಬಿಲಿಯನ್ ಡಾಲರ್ ತಲುಪಿದ ಅದಾನಿ ಗ್ರುಪ್ ಮಾರುಕಟ್ಟೆ ನಷ್ಟ

https://pragati.taskdun.com/adani-group-market-loss-reaches-100-billion-dollars/

*ಬಿಜೆಪಿ ಟಿಕೆಟ್ ಗಾಗಿ ಪೊಲೀಸ್ ಹುದ್ದೆಯನ್ನೇ ತೊರೆದ ಲೋಕಾಯುಕ್ತ ಇನ್ಸ್ ಪೆಕ್ಟರ್*

https://pragati.taskdun.com/lokayuktainspector-mahendra-nayakresignbjp-ticketvidhanasabha-election/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button