Kannada NewsKarnataka News

ಸವದತ್ತಿಯಲ್ಲಿ ಸರಣಿ ದಾಳಿ: 5 ಪ್ರಕರಣ ದಾಖಲು; 5 ಜನರ ಬಂಧನ; ಮುಂದುವರಿದ ಕಾರ್ಯಾಚರಣೆ

ಪ್ರಗತಿವಾಹಿನಿ ಸುದ್ದಿ, ಸವದತ್ತಿ: ಜಾತ್ರೆ ಸಂದರ್ಭದಲ್ಲಿ ಅಕ್ರಮ ಸರಾಯಿ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಸವದತ್ತಿ ಪೊಲೀಸರು ಸರಣಿ ದಾಳಿ ಮುಂದುವರಿಸಿದ್ದಾರೆ.

ವಿವಿಧೆಡೆ ದಾಳಿ ನಡೆಸಿ ಈವರೆಗೆ 5 ಪ್ರಕರಣ ದಾಖಲಿಸಿರುವ ಪೊಲೀಸರು, ಐವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ದಾಳಿ ಮುಂದುವರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದು, ಇನ್ನಷ್ಟು ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ.

ದಾಳಿಯ ಸಮಯದಲ್ಲಿ ಒಟ್ಟು 23.85 ಲೀಟರ್ ಮದ್ಯವನ್ನು ಮತ್ತು ಒಂದು ಬೈಕನ್ನು ವಶಪಡಿಸಿಕೊಂಡಿದೆ.
 ಬಂಧಿತರು:
1) ಸಂಗೀತಾ ಪರಶುರಾಮ್ ಲಮಾಣಿ ಸಾ: ಯಲ್ಲಮ್ಮಾ ಗುಡ್ಡ ತಾಂಡಾ
2) ಮಹದೇವಪ್ಪ ಗಂಗಪ್ಪ ಮಾದರ ಸಾ: ಕುರಿವಿನಕೊಪ್ಪ
3)ಸಚಿನ್ ಗೌಡಪ್ಪ ಲಮಾಣಿ ಸಾ: ಯಲ್ಲಮ್ಮಾ ಗುಡ್ಡ ತಾಂಡಾ
4) ವಿಠ್ಠಲ ಗುರಪ್ಪ ಕಾರಬರಿ ಸಾ: ಕಾರ್ಲಕಟ್ಟಿ ತಾಂಡಾ
5) ನಾಗೇಶ್ ರಾಮಪ್ಪ ಲಮಾಣಿ ಸಾ: ಯಲ್ಲಮ್ಮಾ ಗುಡ್ಡ ತಾಂಡಾ

ಸವದತ್ತಿ ಯಲ್ಲಮ್ಮ ದೇವಸ್ಥಾನ ಸುತ್ತಮುತ್ತ ಮತ್ತು ತಾಲೂಕಿನ ಹಳ್ಳಿ ಹಳ್ಳಿಗಳಲ್ಲಿ ಅಕ್ರಮ ಸರಾಯಿ ಮಾರಾಟ ನಡೆಯುತ್ತಿದೆ ಎನ್ನುವ ದೂರು ಬಹಳ ಕಾಲದಿಂದ ಇದೆ. ಅಂದಿನ ಶಾಸಕ ಆನಂದ ಮಾಮನಿ ಅನೇಕ ಸಂದರ್ಭದಲ್ಲಿ ಬಹಿರಂಗವಾಗಿಯೇ ಈ ಕುರಿತು ಹೇಳಿಕೆ ನೀಡಿದ್ದರು.

*ಭೀಕರ ಬೈಕ್ ಅಪಘಾತ; ASI ಸ್ಥಳದಲ್ಲೇ ಸಾವು*

https://pragati.taskdun.com/bike-accidentasi-shabbir-husendeathdavanagere/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button