Latest

*ನನ್ನ ಬಗ್ಗೆ ಹೇಳಿಕೆ ಕೊಡುವಾಗ ಎಚ್ಚರಿಕೆ ಇರಲಿ; ಸಿ.ಟಿ.ರವಿಗೆ HDK ವಾರ್ನಿಂಗ್ *

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಜೆಡಿಎಸ್ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ, ನಮ್ಮದು ಮನೆಯೊಳಗಿನ ಸಾಮರ್ಥ್ಯ, ಹೆಚ್ ಡಿಕೆಯವರದ್ದು ಮನೆ ಊರು ದಾಟಿದ ಸಾಮರ್ಥ್ಯ ಎಂದು ವ್ಯಂಗ್ಯವಾಡಿದ್ದರು. ಸಿ.ಟಿ ರವಿ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ಶಿಕ್ಷಕನೋರ್ವನ ಸಾವಿನ ಬಗ್ಗೆ ಪ್ರಸ್ತಾಪಿಸುವ ಮೂಲಕ ಟಾಂಗ್ ನೀಡಿದ್ದಾರೆ.

ಸುದ್ದಿಗೋಷ್ಠಿಯಲಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ನಾನು ಸಿ.ಟಿ.ರವಿ ವಿಚಾರಕ್ಕೆ ಹೋಗಿಲ್ಲ, ಹೀಗಿರುವಾಗ ಅವರೇಕೆ ನನ್ನ ಬಗ್ಗೆ ಟೀಕಿಸ್ತಿದ್ದಾರೆ? ನಾವು ಮನೆ ಬಿಟ್ಟು ಊರಾಚೆ ನಡೆಸಿದವರು ಎಂದು ಹೇಳಿದ್ದಾರೆ. ಸಿ.ಟಿ ರವಿಯ ಇತಿಹಾಸ ಏನೆಂಬುದು ಇಡೀ ರಾಜ್ಯಕ್ಕೆ ಗೊತ್ತು. ಸಿ.ಟಿ ರವಿಯೇನು ಪತಿವ್ರತಾನಾ? ಎಂದು ಪ್ರಶ್ನಿಸಿದ್ದಾರೆ.

ಶಿಕ್ಷಕನೋರ್ವ ಕೆ ಆರ್ ಎಸ್ ನಿಂದ ಬಿದ್ದು ಯಾಕೆ ಸತ್ತ? ಶಿಕ್ಷಕನ ಸಾವಿನ ಬಗೆ ಹೇಳ್ತೀರಾ ರವಿಯವರೇ…? ನನ್ನ ಬಗ್ಗೆ ಹೇಳಿಕೆ ಕೊಡುವಾಗ ಎಚ್ಚರವಿರಲಿ ಎಂದು ಹೇಳಿದ್ದಾರೆ.

ಬಿಜೆಪಿ ವಿರುದ್ಧ ಸರಣಿ ಟ್ವೀಟ್ ಮೂಲಕ ಕಿಡಿಕಾರಿದ್ದ ಜಾತ್ಯಾತೀತ ಜನತಾದಳ, ಪ್ರಧಾನಿ ಮೋದಿಯವರು ಬಂದ ದಿನ ರೆಕ್ಕೆ ಬಲಿತ ಹಕ್ಕಿಯಂತೆ ಆಡುವುದು ಮಾತ್ರ ಇಲ್ಲಿನ ಬಿಜೆಪಿ ಸರ್ಕಾರಕ್ಕೆ ಗೊತ್ತಿರುವುದು! ಇಂತಹ ಬೃಹತ್ ನಾಟಕ ಮಂಡಳಿಯ ಯಾವ ಪ್ರದರ್ಶನವೂ ಇನ್ನು ಕರ್ನಾಟಕದಲ್ಲಿ ನಡೆಯುವುದಿಲ್ಲ. ನಿಮ್ಮಂತಹ ಮುಖೇಡಿ ರಾಜಕಾರಣಿಗಳು ಹಾಗೂ ನಿಮ್ಮನ್ನು ತೊಗಲು ಗೊಂಬೆಗಳನ್ನಾಗಿ ಮಾಡಿರುವ ದೆಹಲಿ ದೊರೆಗಳನ್ನು ರಾಜ್ಯ ತಿರಸ್ಕರಿಸಲಿದೆ. ರಾಜ್ಯ ಸರ್ಕಾರ ನಪುಂಸಕವಾಗಿರುವುದು ದಿಟ. ಬರಡು ಭೂಮಿಯಂತೆ ಯಾವ ಪ್ರಯೋಜನವು ಇಲ್ಲದ ರಾಜ್ಯ ಸರ್ಕಾರವಿದು. ಸಾರ್ವಜನಿಕರ ಹಣ ಬಾಚುವ, ದೋಚುವುದಷ್ಟೆ ಇವರ ಕಾಯಕ. ಒಟ್ಟಿನಲ್ಲಿ, ಕೇಂದ್ರದ ತಾಳಕ್ಕೆ ಕುಣಿಯುತ್ತಾ, ರಾಜ್ಯದ ನೆಮ್ಮದಿ ಕಸಿಯುವ ಕೀಚಕ ಸರ್ಕಾರವನ್ನು ಜನರು ಕಿತ್ತೊಗೆಯುವುದು ಸೂರ್ಯ-ಚಂದ್ರರಷ್ಟೇ ಸತ್ಯ ಎಂದು ಹೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಬಿಜೆಪಿ ನಾಯಕ ಸಿ.ಟಿ.ರವಿ, ನಮಗೆ ಕುಮಾರಸ್ವಾಮಿಯವರಷ್ಟು ಸಾಮರ್ಥ್ಯವಿಲ್ಲ ಎಂದು ನಾವು ಮೊದಲೇ ಒಪ್ಪಿಕೊಂಡಿದ್ದೇವೆ. ನಮ್ಮದು ಮನೆಯೊಳಗಿನ ಸಾಮರ್ಥ್ಯ, ಅವರದ್ದು ಮನೆ ಊರು ದಾಟಿದ ಸಾಮರ್ಥ್ಯ. ನಮಗೆ ಅವರಷ್ಟು ಸಾಮರ್ಥ್ಯವಿಲ್ಲ. ಅವರು ವೈಯಕ್ತಿಕವಾಗಿ ಹೇಳಿದ್ದಾರೋ, ರಾಜಕೀಯವಾಗಿ ಹೇಳಿದ್ದಾರೋ ಗೊತ್ತಿಲ್ಲ, ರಾಜಕೀಯವಾಗಿ ಹೇಳಿದ್ದರೆ ಬಿಜೆಪಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಲೇ ಬಂದಿದೆ ಎಂದು ಹೇಳಿದ್ದರು.

*ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದ ಮಾಜಿ ಸಿಎಂ ಕುಮಾರಸ್ವಾಮಿ*

https://pragati.taskdun.com/h-d-kumaraswamyreactionravi-subrahmanya/

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button