ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹುಟ್ಟಿದಾಗಿನ ಹಾಗೂ ನಡುವಿನ ಬದುಕಿನ ಅಗತ್ಯಗಳು ಎಷ್ಟು ಮುಖ್ಯವೋ ಮನುಷ್ಯನ ಅಂತ್ಯದಲ್ಲಿನ ಸಂಸ್ಕಾರಗಳು ಅದಕ್ಕಿಂತ ಮುಖ್ಯ. ಒಬ್ಬ ಮನುಷ್ಯನನ್ನು ಸಾವಿನಲ್ಲೂ ಗೌರವಯುತವಾಗಿ ನಡೆಸಿಕೊಳ್ಳಬೇಕಾದುದು ಎಲ್ಲರ ಕರ್ತವ್ಯ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಬಡಸ್ ಕೆ.ಎಚ್. ಗ್ರಾಮದ ದಲಿತ ಸಮಾಜದ ಸ್ಮಶಾನ ಭೂಮಿಯ ಸಲುವಾಗಿ ಇಂದು ವೈಯಕ್ತಿಕ 3 ಲಕ್ಷ ರೂ. ಸಹಾಯಧನ ನೀಡಿ ಮಾತನಾಡಿದರು.
ಈ ಸಹಾಯಧನ ಬಳಸಿ ಸ್ಮಶಾನ ಭೂಮಿಯನ್ನು ಯಾವುದೇ ಮೂಲಸೌಕರ್ಯಗಳ ಕೊರತೆ ಇಲ್ಲದಂತೆ ಅಭಿವೃದ್ಧಿಪಡಿಸಿಕೊಳ್ಳುವಂತೆ ಅವರು ಸಮುದಾಯದ ಮುಖಂಡರಿಗೆ ಸಲಹೆ ನೀಡಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ಶಂಕರ ಗಿಡ್ಡಬಸನ್ನವರ, ಇನಾಯತ್ ಅಲಿ ಅತ್ತಾರ, ಮನ್ಸೂರ್ ಅಲಿ, ಪ್ರಶಾಂತ ಪಾಟೀಲ, ಶಂಕರ ಪಾಟೀಲ, ಭರ್ಮಾ ಶೀಗಿಹಳ್ಳಿ, ಗೌಸ್ ಶಿಂಪಿ, ಸದೆಪ್ಪ ಹಾದಿಮನಿ, ಕಲ್ಲಪ್ಪ ವಣ್ಣೂರ, ಅರ್ಜುನ ಜಿಮ್ಮನ್ನವರ, ಭೀಮಶಿ ಹಾದಿಮನಿ ಮತ್ತಿತರರು ಉಪಸ್ಥಿತರಿದ್ದರು.
*ಇಡಿಯಿಂದ ಮತ್ತೆ ಬುಲಾವ್; ಮಗಳಿಗೂ ಸಿಬಿಐ ನೊಟೀಸ್; ಬೇಸರ ತೋಡಿಕೊಂಡ ಡಿ.ಕೆ.ಶಿವಕುಮಾರ್*
https://pragati.taskdun.com/d-k-shivakumarpressmeetshivamoggaed/
*ಬ್ರಾಹ್ಮಣ ಸಮುದಾಯದ ಬಗ್ಗೆ ಹೇಳಿಕೆ ; ಗೋಕರ್ಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿಗೆ ತರಾಟೆ*
https://pragati.taskdun.com/h-d-kumaraswamybrahmana-samudayaclarification/
*ರೆಪೊ ದರ ಹೆಚ್ಚಿಸಿದ RBI; ಮನೆ, ವಾಹನ ಸಾಲದ ಬಡ್ಡಿದರದಲ್ಲಿ ಏರಿಕೆ*
https://pragati.taskdun.com/rbirepo-rate-hikes-to-6-5shaktikanth-das/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ