ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತಾಲೂಕಿನ ನಾವಗೆ ಗ್ರಾಮದ ಸ್ಮಶಾನಕ್ಕೆ ತೆರಳುವ ರಸ್ತೆಯ ಅಭಿವೃದ್ಧಿಗಾಗಿ 60 ಲಕ್ಷ ರೂ. ಮಂಜೂರು ಮಾಡಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಗ್ರಾಮಸ್ಥರ ಸಮ್ಮುಖದಲ್ಲಿ ಬುಧವಾರ ಚಾಲನೆ ನೀಡಿದರು.
ಕ್ಷೇತ್ರದಾದ್ಯಂತ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಹೊಲಗದ್ದೆಗಳು, ಸ್ಮಶಾನ ಮತ್ತಿತರೆಡೆ ಅತಿ ಅಗತ್ಯವಿರುವಲ್ಲಿ ಬಹುಕಾಲ ತಾಳಿಕೆ ಬರುವ ರಸ್ತೆ ನಿರ್ಮಾಣ ಮಾಡಲಾಗಿದೆ. ಸ್ಥಳೀಯರು ಮುತುವರ್ಜಿ ವಹಿಸಿ ಗುಣಮಟ್ಟದ ಕಾಮಗಾರಿಗಳನ್ನು ಮಾಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಗ್ರಾಮದ ಹಿರಿಯರು, ಮೃಣಾಲ್ ಹೆಬ್ಬಾಳಕರ್, ಅರ್ಚನಾ ಬಾ. ಚಿಗರೆ, ಪರುಶರಾಮ ಶಹಾಪುರಕರ್, ಸಾತೇರಿ ಕಾಮತೆ, ಹನಮಂತ ಹಕ್ಕಲದಾ, ಮೈಲಪ್ಪ ಮುದ್ದಿ, ಸುಜಾತಾ ಕರ್ಲೇಕರ್, ಲಕ್ಷ್ಮಣ ಶಹಾಪುರಕರ್, ಬಾಳಪ್ಪ ಚಿಗರೆ, ಯಲ್ಲಪ್ಪ ಮುದ್ದಿ, ಪರಶುರಾಮ ನಾಯಿಕ್, ಸಂತೋಷ ತಿಪ್ಪಿ ಮುಂತಾದವರು ಉಪಸ್ಥಿತರಿದ್ದರು.
ಜಾತ್ರಾ ಮಹೋತ್ಸವದಲ್ಲಿ ಭಾಗಿ:
ನಾವಗೆ ಗ್ರಾಮದ ಮಾಹಿ ಹಾಗೂ ಮಾರ್ಕಂಡೇಯ ನಗರದ ಶ್ರೀ ಮಹಾಲಕ್ಷ್ಮಿ ಹಾಗೂ ಶ್ರೀ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವಗಳಲ್ಲಿ ಪಾಲ್ಗೊಂಡು ಕ್ಷೇತ್ರದ ಹಾಗೂ ನಾಡಿನ ಒಳಿತಿಗಾಗಿ ಲಕ್ಷ್ಮೀ ಹೆಬ್ಬಾಳಕರ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಆಯಾ ಗ್ರಾಮಗಳ ಹಿರಿಯರು, ಸುರೇಶ ಗಾವನ್ನವರ, ಬಸಪ್ಪ ಗುಂಡ್ಯಾಗೋಳ, ಬಸವರಾಜ ಧೂಳಪ್ಪಗೋಳ, ನಿಂಗಪ್ಪ ತಲ್ಲೂರಿ, ಅಡಿವೆಪ್ಪ ತಲ್ಲೂರಿ, ಬಸಪ್ಪ ಪೆಂಡಾರಿ ಮತ್ತಿತರರು ಉಪಸ್ಥಿತರಿದ್ದರು.
*ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ*
https://pragati.taskdun.com/basavaraj-bommaireactionh-d-kumaraswamy-statment/
https://pragati.taskdun.com/recommend-to-center-to-name-shimoga-airport-as-b-s-yediyurappa-airport-cm-bommai/
https://pragati.taskdun.com/bhadravaticongress-prajadhwanid-k-shivakumar/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ