Latest

ಜ್ಯೋತಿರ್ಲಿಂಗಗಳ ವೈಶಿಷ್ಟ್ಯಗಳು

ಭಾರತದಲ್ಲಿನ ಪ್ರಮುಖ ಶಿವಸ್ಥಾನ ಗಳೆಂದರೆ ಹನ್ನೆರಡು ಜ್ಯೋತಿರ್ಲಿಂಗಗಳು. ಅವು ತೇಜಸ್ವಿ ರೂಪದಲ್ಲಿ ಉತ್ಪನ್ನವಾದವು. ಹನ್ನೆರಡು ಜ್ಯೋತಿರ್ಲಿಂಗಗಳು ಶರೀರವಾಗಿದ್ದು ಕಾಠ್ಮಾಂಡುದಲ್ಲಿರುವ ಪಶುಪತಿನಾಥ ಜ್ಯೋತಿರ್ಲಿಂಗವು ತಲೆಯಾಗಿದೆ.

ರುದ್ರಾಕ್ಷದ ಮಂತ್ರಸಿದ್ಧಿಗಾಗಿ ಗುಣ ಹಾಗೂ ಶಕ್ತಿಗೆ ತಕ್ಕಂತೆ ಯೋಗ್ಯ ಗುಣಗಳುಳ್ಳ ಜ್ಯೋತಿರ್ಲಿಂಗವನ್ನು ಆರಿಸಿಕೊಂಡು ಆ ಜ್ಯೋತಿರ್ಲಿಂಗಕ್ಕೆ ಅಭಿಷೇಕ ಮಾಡಬೇಕು. ಉದಾಹರಣೆಗೆ ಮಹಾಕಾಳನು ತಾಮಸಶಕ್ತಿಯಿಂದ ಯುಕ್ತನಾಗಿದ್ದಾನೆ, ನಾಗನಾಥನು ಹರಿಹರ ಸ್ವರೂಪನಾಗಿದ್ದು ಸತ್ತ್ವ ಹಾಗೂ ತಮೋಗುಣ ಪ್ರಧಾನನಾಗಿದ್ದಾನೆ, ತ್ರ್ಯಂಬಕೇಶ್ವರನು ಅವಧೂತನಾಗಿದ್ದಾನೆ ಮತ್ತು ಸೋಮನಾಥನು ರೋಗಮುಕ್ತಿಗಾಗಿ ಯೋಗ್ಯನಾಗಿದ್ದಾನೆ.

ಜ್ಯೋತಿರ್ಲಿಂಗದ ಅರ್ಥ
ವ್ಯಾಪಕ ಬ್ರಹ್ಮಾತ್ಮಲಿಂಗ ಅಥವಾ ವ್ಯಾಪಕ ಪ್ರಕಾಶ. ತೈತ್ತಿರೀಯ ಉಪನಿಷತ್ತಿನಲ್ಲಿ ಬ್ರಹ್ಮ, ಮಾಯೆ, ಜೀವ, ಮನಸ್ಸು, ಬುದ್ಧಿ, ಚಿತ್ತ, ಅಹಂಕಾರ ಮತ್ತು ಪಂಚಮಹಾಭೂತಗಳು ಎಂಬ ಹನ್ನೆರಡು ತತ್ತ್ವಗಳನ್ನು ಹನ್ನೆರಡು ಜ್ಯೋತಿರ್ಲಿಂಗಗಳೆಂದು ಕರೆಯಲಾಗಿದೆ. ಶಿವಲಿಂಗದ ಹನ್ನೆರಡು ಖಂಡಗಳು. ಪಾಣಿಪೀಠವು ಯಜ್ಞವೇದಿಕೆಯ ಮತ್ತು ಲಿಂಗವು ಯಜ್ಞದ ಪ್ರತೀಕವಾಗಿರುವ ಜ್ಯೋತಿಯ, ಅಂದರೆ ಯಜ್ಞಶಿಖೆಯ ಪ್ರತೀಕವಾಗಿದೆ. ದ್ವಾದಶ ಆದಿತ್ಯರ ಪ್ರತೀಕಗಳು. ಸುಪ್ತಾವಸ್ಥೆಯಲ್ಲಿರುವ ಜ್ವಾಲಾಮುಖಿಯ ಉದ್ರೇಕ ಸ್ಥಾನಗಳು

ದಕ್ಷಿಣ ದಿಕ್ಕಿನ ಸ್ವಾಮಿಯಾದ ಯಮನು ಶಂಕರನ ಅಧಿಪತ್ಯದಲ್ಲಿರುವುದರಿಂದ ದಕ್ಷಿಣ ದಿಕ್ಕು ಶಂಕರನ ದಿಕ್ಕಾಗುತ್ತದೆ. ಜ್ಯೋತಿರ್ಲಿಂಗಗಳು ದಕ್ಷಿಣಾಭಿಮುಖಿಯಾಗಿರುತ್ತವೆ, ಅಂದರೆ ಜ್ಯೋತಿರ್ಲಿಂಗಗಳ ಪಾಣಿಪೀಠದ ಹರಿನಾಳವು ದಕ್ಷಿಣ ದಿಕ್ಕಿಗಿರುತ್ತದೆ. ಬಹುತೇಕ ಮಂದಿರಗಳು ದಕ್ಷಿಣಾಭಿಮುಖವಾಗಿರುವುದಿಲ್ಲ. ಪಾಣಿಪೀಠವು ದಕ್ಷಿಣಾಭಿಮುಖವಾಗಿದ್ದರೆ ಆ ಲಿಂಗವು ಹೆಚ್ಚು ಶಕ್ತಿಶಾಲಿಯಾಗಿರುತ್ತದೆ. ಹರಿನಾಳವು ಉತ್ತರ ದಿಕ್ಕಿಗಿದ್ದರೆ ಆ ಲಿಂಗವು ಕಡಿಮೆ ಶಕ್ತಿಶಾಲಿಯಾಗಿರುತ್ತದೆ.

ಸಂಗ್ರಹ :
ಶ್ರೀ. ವಿನೋದ್ ಕಾಮತ್
ರಾಜ್ಯ ವಕ್ತಾರರು, ಸನಾತನ ಸಂಸ್ಥೆ
(ಸಂಪರ್ಕ : 9342599299)

 

ಎನ್‌ಆರ್‌ಇಜಿಎಸ್ ಅಡಿಯಲ್ಲಿ ಕರ್ನಾಟಕಕ್ಕೆ ಬಿಡುಗಡೆಯಾದ ಮೊತ್ತವೆಷ್ಟು ಗೊತ್ತೇ?

https://pragati.taskdun.com/6028-07-crores-to-the-state-of-karnataka-for-the-year-2021-22-under-nregs-release/

ಗೃಹ ಸಚಿವ ಅರಗ ಜ್ಞಾನೇಂದ್ರರಿಂದ ದ್ವೇಷದ ರಾಜಕೀಯ: ಡಿಕೆಶಿ ಆರೋಪ

https://pragati.taskdun.com/hate-politics-by-home-minister-araga-gyanendra-d-k-shivkumar-accuses/

ಗ್ರಾಮ ಪಂಚಾಯತಿ ಉಪ ಚುನಾವಣೆ: ಅಧಿಸೂಚನೆ ಪ್ರಕಟ

https://pragati.taskdun.com/gram-panchayat-bye-election-notification-published/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button