ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದದ ವಿಚಾರಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನಾ ಅವರು ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ.
ಬೆಳಗಾವಿ ಸೇರಿದಂತೆ ಕರ್ನಾಟಕದ ಹಲವು ಪಟ್ಟಣಗಳು, ನಗರಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಮಹಾರಾಷ್ಟ್ರ ಸರಕಾರ ಹೂಡಿರುವ ಮೂಲ ದಾವೆಗೆ ಸಂಬಂಧಿಸಿದ ವಿಚಾರಣೆ ಬುಧವಾರ ನಡೆಯಲಿತ್ತು.
ನ್ಯಾಯಮೂರ್ತಿಗಳಾದ ಕೆ.ಎಂ.ಜೊಸೆಫ್, ಹೃಷಿಕೇಶ ರಾಯ್ ಹಾಗೂ ನಾಗರತ್ನ ಅವರಿದ್ದ ಪೀಠದೆದುರು ಇದರ ವಿಚಾರಣೆ ನಡೆಯಬೇಕಿತ್ತು. ಆದರೆ ತಾವು ಸ್ವತಃ ಕರ್ನಾಟಕ ಮೂಲದವರಾಗಿರುವ ಹಿನ್ನೆಲೆಯಲ್ಲಿ ವಿಚಾರಣೆಯಿಂದ ಹಿಂದಕ್ಕೆ ಸರಿಯುವುದಾಗಿ ನಾಗರತ್ನಾ ಅವರು ಘೋಷಿಸಿದರು.
ಇದೀಗ ಮುಖ್ಯ ನ್ಯಾಯಮೂರ್ತಿಗಳು ಹೊಸ ಪೀಠ ರಚಿಸಿದ ನಂತರ ದಾವೆ ವಿಚಾರಣೆಗೆ ಬರಲಿದೆ.
*ವರುಣಾದಲ್ಲಿ ನಾನೇ ಅಭ್ಯರ್ಥಿ ಎಂದ ಡಾ.ಯತೀಂದ್ರ ಸಿದ್ದರಾಮಯ್ಯ*
https://pragati.taskdun.com/varunayatindra-siddaramaiahcontestingvidhanasabha-election/
ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ನಿಧನ
https://pragati.taskdun.com/former-mla-shivanand-ambadgatti-pasess-away/
ಹೊಸ ಟ್ರಾಫಿಕ್ ಫೈನ್ ಡಿಸ್ಕೌಂಟ್ ಯೋಜನೆಯಲ್ಲಿ ವಂಚನೆ: ಪೊಲೀಸರಿಂದ ಎಚ್ಚರಿಕೆ
https://pragati.taskdun.com/fraud-in-new-traffic-fine-discount-scheme-warning-from-police/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ