Latest

*ಟ್ರ್ಯಾಕ್ಟರ್ ನಿಂದ ಬಿದ್ದು ಯೋಧ ದಾರುಣ ಸಾವು*

ಪ್ರಗತಿವಾಹಿನಿ ಸುದ್ದಿ; ಧಾರವಾಡ: ಊರಿಗೆ ಬಂದಿದ್ದ ಯೋಧರೊಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲೆಯ ಗರಗ-ಲೋಕರ ಕ್ರಾಸ್ ಬಳಿ ನಡೆದಿದೆ.

ನಾಗಪ್ಪ ಉದುಮೇಶಿ (27) ಮೃತ ಯೋಧ. ಮೂಲತ: ಧಾರವಾಡದ ಹಾರೋಬೆಳವಡಿ ಗ್ರಾಮದ ನಿವಾಸಿಯಾಗಿದ್ದ ನಾಗಪ್ಪ ಉದುಮೇಶಿ 8 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ರಜೆ ಮೇಲೆ ಊರಿಗೆ ಬಂದಿದ್ದರು.

ಈ ವೇಳೆ ಗರಗದ ಶ್ರೀ ಮಡಿವಾಳೇಶ್ವರ ಜಾತ್ರೆಗೆ ಹೋಗಿ ಜಾತ್ರೆ ಮುಗಿಸಿಕೊಂಡು ಟ್ರ್ಯಾಕ್ಟರ್ ನಲ್ಲಿ ವಾಪಸ್ ಆಗುತ್ತಿದ್ದಾಗ ಟ್ರ್ಯಾಕ್ಟರ್ ಅಪಘಾತವಾಗಿದೆ. ಟ್ರ್ಯಾಕ್ಟರ್ ನಿಂದ ಕೆಳಗೆ ಬಿದ್ದ ಯೋಧ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

*ಪೇಶ್ವೆ ವಂಶಸ್ಥರು ಬಿಎಸ್ ವೈಗೆ ಅಧಿಕಾರ ನಡೆಸಲು ಬಿಡಲಿಲ್ಲ; ಮತ್ತೆ ಕಿಡಿಕಾರಿದ ಕುಮಾರಸ್ವಾಮಿ*

https://pragati.taskdun.com/h-d-kumaraswamyb-s-yedyurappaprahlad-joshiuttara-kannada/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button