ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತೆರಿಗೆ ಇಲಾಖೆಯ ಇನ್ಸ್ ಪೆಕ್ಟರ್ ದೇವೇಂದ್ರ ದುಬೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹತ್ತು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಉತ್ತರಪ್ರದೇಶ ಮೂಲದ ದೇವೆಂದ್ರ ದುಬೆ ಹಲವು ವರ್ಷಗಳಿಂದ ಬೆಂಗಳೂರಿನ ಆದಾಯ ತೆರಿಗೆ ಇಲಾಖೆಯಲ್ಲಿ ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಪತ್ನಿ ಆರತಿ ಮಾಳವಿಯ ಜೊತೆ ಬೆಂಗಳೂರಿನಲ್ಲಿ ವಾಸವಾಗಿದ್ದರು. ಆದರೆ ಈಗ ದುಬೆ ಮೃತದೇಹ ಬಿಡಿಎ ಕಚೇರಿ ಬಳಿಯ ರೈಲ್ವೆ ಹಳಿ ಮೇಲೆ ಪತ್ತೆಯಾಗಿದ್ದು, ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯಲ್ಲಿ ಪತ್ತೆಯಾಗಿದೆ. ಇದು ಹಲವಿ ಅನುಮಾನಕ್ಕೆ ಕಾರಣವಾಗಿದೆ.
ದೇವೇಂದ್ರ ದುಬೆ ಸಾವಿಗೂ ಮುನ್ನ ಉತ್ತರಪ್ರದೇಶದಲ್ಲಿರುವ ತನ್ನ ತಂದೆ-ತಾಯಿ ಜೊತೆ ಫೋನ್ ನಲ್ಲಿ ಮಾತನಾಡಿದ್ದಾರೆ. ಬಳಿಕ ಪತ್ನಿಗೂ ಕರೆ ಮಾಡಿ ಸಂಜೆ ಮನೆಗೆ ಬರುವುದಾಗಿ ಹೇಳಿದ್ದಾರೆ. ಅದಾದ ಕೆಲ ಸಮಯದಲ್ಲಿ ಪತ್ನಿ ಆರತಿ ಮಾಳವಿ ಮೊಬೈಲ್ ಗೆ ವಾಟ್ಸಪ್ ಮೆಸೇಜ್ ಬಂದಿದೆ. ಅದನ್ನು ನೋಡಿದ ಪತ್ನಿ ಶಾಕ್ ಆಗಿದ್ದಾರೆ. ಪತ್ನಿಗೆ ಇನ್ಶುರೆನ್ಸ್ ಪಾಲಿಸಿ ಹಾಗೂ ಡೆತ್ ನೋಟ್ ವಾಟ್ಸಪ್ ಮೂಲಕ ಕಳುಹಿಸಿದ್ದಾರೆ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆ.
ಪತಿ ದೇವೇಂದ್ರ ದುಬೆ ನಾಪತ್ತೆ ಬಗ್ಗೆ ಆರತಿ ಮಾಳವಿಯ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಹುಡುಕಾಟ ನಡೆಸಿದ್ದ ಪೊಲೀಸರಿಗೆ ದೇವೇಂದ್ರ ದುಬೆ ಅವರ ಶವ ಬಿಡಿಎ ಬಳಿಯ ರೈಲ್ವೆ ಹಳಿ ಮೇಲೆ ಪತ್ತೆಯಾಗಿದ್ದು, ತೆರಿಗೆ ಇಲಾಖೆ ಇನ್ಸ್ ಪೆಕ್ಟರ್ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ. ತನಿಖೆಯಿಂದಷ್ಟೇ ಕಾರಣ ತಿಳಿದುಬರಬೇಕಿದೆ.
*ಬೆಂಗಳೂರಿನಲ್ಲಿ ಶಂಕಿತ ಉಗ್ರನ ಬಂಧನ*
https://pragati.taskdun.com/suspected-terroristarrestedbangalore/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ