Latest

5 ವರ್ಷಗಳ ಹಿಂದೆ ಬಾಹ್ಯಾಕಾಶಕ್ಕೆ ಉಡಾವಣೆಯಾದ ಟೆಸ್ಲಾ ಕಾರು ಕ್ರಮಿಸಿದ್ದು 400 ಕೋಟಿ ಕಿ.ಮೀ.

ಪ್ರಗತಿವಾಹಿನಿ ಸುದ್ದಿ, ವಾಷಿಂಗ್ಟನ್: 2018 ರ ಫೆಬ್ರವರಿಯಲ್ಲಿ ಸ್ಪೇಸ್‌ಎಕ್ಸ್‌ನ ಫಾಲ್ಕನ್ ಹೆವಿ ರಾಕೆಟ್‌ಗೆ ಪರೀಕ್ಷಾರ್ಥ ಬಾಹ್ಯಾಕಾಶಕ್ಕೆ ಉಡಾವಣೆಯಾಗಿದ್ದ ಎಲೋನ್ ಮಸ್ಕ್ ಅವರ ವೈಯಕ್ತಿಕ ಟೆಸ್ಲಾ ರೋಡ್‌ಸ್ಟರ್ ಈವರೆಗೆ 400 ಕೋಟಿ ಕಿಲೋಮೀಟರ್‌ಗಳಿಗಿಂತ ಹೆಚ್ಚು ಕ್ರಮಿಸಿದೆ.

ಈ ಡೇಟಾವನ್ನು whereisroadster.com ದಾಖಲಿಸಿದೆ. ಇದು ವಿಶ್ವದ ಎಲ್ಲ ರಸ್ತೆಗಳನ್ನು 63.3 ಬಾರಿ ಕ್ರಮಿಸುವುದಕ್ಕೆ ಸಮಾನವಾಗಿದೆ ಎಂದು ಅದು ಹೇಳಿದೆ. ವಾಹನದ ಪ್ರಸ್ತುತ ಸ್ಥಳ ಭೂಮಿಯಿಂದ 32 ಕೋಟಿ ಕಿಲೋಮೀಟರ್‌ಗಿಂತಲೂ ಹೆಚ್ಚು ದೂರದಲ್ಲಿದೆ.

ರೋಡ್‌ಸ್ಟರ್ ನ್ನು ಫಾಲ್ಕನ್‌ಗೆ ಲೋಡ್ ಮಾಡಿದ ನಂತರ ‘ಸ್ಟಾರ್‌ಮ್ಯಾನ್’ ಡೆಮ್ಮಿಗೆ ಬಾಹ್ಯಾಕಾಶ ಸೂಟ್‌ನಲ್ಲಿ ತೊಡಿಸಿ ಮಂಗಳ ಗ್ರಹದ ಕಡೆ ಉಡಾಯಿಸಲಾಗಿತ್ತು. 2018ರ ಫೆಬ್ರವರಿ 6 ರಂದು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ರಾಕೆಟ್   ಉಡಾವಣೆ ಮಾಡಿದ ನಂತರ  ಮತ್ತು ರೋಡ್‌ಸ್ಟರ್ ನ್ನು ಸೂರ್ಯನ ಸುತ್ತ ಕೇಂದ್ರಿತ ಕಕ್ಷೆಗೆ ಯಶಸ್ವಿಯಾಗಿ ಇರಿಸಲಾಗಿತ್ತು.

ಆಂಧ್ರಪ್ರದೇಶದ ರಾಜ್ಯಪಾಲರಾಗಿ ನೇಮಕಗೊಂಡ ಕನ್ನಡಿಗ

https://pragati.taskdun.com/kannadiga-appointed-as-governor-of-andhra-pradesh/

ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ಭಾವೈಕ್ಯತೆ ವೃದ್ಧಿ: ಪಿ.ಜಿ.ಆರ್ ಸಿಂಧ್ಯಾ

https://pragati.taskdun.com/morale-development-by-scouts-and-guides-pgr-sindhya/

ತಳ್ಳುಗಾಡಿಯಲ್ಲಿ ಅಸ್ವಸ್ಥ ತಂದೆಯನ್ನು ಸಾಗಿಸಿದ 6 ವರ್ಷದ ಬಾಲಕ

https://pragati.taskdun.com/a-6-year-old-boy-carried-his-sick-father-in-a-pram/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button