ಪ್ರಗತಿವಾಹಿನಿ ಸುದ್ದಿ, ಅಂಕಾರಾ: ಟರ್ಕಿಯಲ್ಲಿ ಸಂಭವಿಸಿದ ಭಯಾನಕ ಭೂಕಂಪದ ಬೆನ್ನಲ್ಲೇ ಉಪಗ್ರಹ ದಾಖಲಿಸಿದ ಚಿತ್ರವೊಂದು ಬೆಚ್ಚಿಬೀಳುವಂತೆ ಮಾಡಿದೆ.
ಈ ಚಿತ್ರದಲ್ಲಿ ಭೂಕಂಪದ ವೇಳೆ ಸಂಭವಿಸಿದ ಭೂಮಿಯ 300-ಕಿಮೀ ಉದ್ದದ ಬಿರುಕು ಕಂಡುಬಂದಿದೆ.
ಭೂಕಂಪಗಳು, ಜ್ವಾಲಾಮುಖಿಗಳು ಮತ್ತು ಟೆಕ್ಟೋನಿಕ್ಸ್‌ನ ವೀಕ್ಷಣೆ ಮತ್ತು ಮಾದರಿಗಳ UK ಕೇಂದ್ರ (COMET) 7.8 ತೀವ್ರತೆ ಮತ್ತು 7.5 ತೀವ್ರತೆಯ ಭೂಕಂಪಗಳ ನಂತರ ಟರ್ಕಿಶ್-ಸಿರಿಯನ್ ಗಡಿಯ ಬಳಿ ತೆರೆದಿರುವ ಎರಡು ಬಿರುಕುಗಳನ್ನು ತೋರಿಸುವ ಉಪಗ್ರಹ ಚಿತ್ರವನ್ನು ಹಂಚಿಕೊಂಡಿದೆ.
ಎರಡು ಛಿದ್ರಗಳ ಉದ್ದವು ಮೆಡಿಟರೇನಿಯನ್ ಸಮುದ್ರದ ಈಶಾನ್ಯ ತುದಿಯಿಂದ 300 ಕಿಮೀ ಈಶಾನ್ಯಕ್ಕೆ ವ್ಯಾಪಿಸಿದೆ.
ಈ ಚಿತ್ರವೀಗ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದ್ದು ನೆಟ್ಟಿಗರು “ಅಬ್ಬಬ್ಬಾ..” ಎಂದು ಹುಬ್ಬೇರಿಸುವಂತಾಗಿದೆ.
ನಟಿ ಚಾಹತ್ ಖನ್ನಾಗೆ 100 ಕೋಟಿ ರೂ. ಲೀಗಲ್ ನೋಟಿಸ್ ಕಳಿಸಿದ ಕಾನ್ ಮ್ಯಾನ್
https://pragati.taskdun.com/actress-chahat-khanna-rs-100-crores-legal-notice-by-conman/
5 ವರ್ಷಗಳ ಹಿಂದೆ ಬಾಹ್ಯಾಕಾಶಕ್ಕೆ ಉಡಾವಣೆಯಾದ ಟೆಸ್ಲಾ ಕಾರು ಕ್ರಮಿಸಿದ್ದು 400 ಕೋಟಿ ಕಿ.ಮೀ.
https://pragati.taskdun.com/the-tesla-car-that-was-launched-into-space-5-years-ago-has-covered-400-crore-km/
ಆಂಧ್ರಪ್ರದೇಶದ ರಾಜ್ಯಪಾಲರಾಗಿ ನೇಮಕಗೊಂಡ ಕನ್ನಡಿಗ
https://pragati.taskdun.com/kannadiga-appointed-as-governor-of-andhra-pradesh/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ