ಪ್ರಗತಿವಾಹಿನಿ ಸುದ್ದಿ, ಮಂಗಳೂರು: ಅಕ್ರಮವಾಗಿ ವಿದೇಶಕ್ಕೆ ಸಾಗಾಟ ಮಾಡಲಾಗುತ್ತಿದ್ದ ಕೋಟ್ಯಂತರ ಮೌಲ್ಯದ ವಜ್ರವನ್ನು ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದ್ದು ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಅನಾಸ್ ಮತ್ತು ಉಮರ್ ಬಂಧಿತರು. ಇವರಿಂದ 2.60 ಕೋಟಿ ಮೌಲ್ಯದ ವಜ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇವರಿಬ್ಬರೂ ಶೂ ಅಡಿಯಲ್ಲಿ ವಜ್ರಗಳನ್ನು ಹುದುಗಿಟ್ಟುಕೊಂಡು ದುಬೈಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರು. ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ತಪಾಸಣೆಗೆ ಗುರಿಪಡಿಸಿದಾಗ ಅಕ್ರಮ ಬಯಲಾಗಿದೆ.
ಆರೋಪಿಗಳು ಈ ವಜ್ರಗಳನ್ನು ಮುಂಬೈಯಿಂದ ಖರೀದಿಸಿ ತಂದಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ತನಿಖೆ ಮುಂದುವರಿದಿದೆ.
*ಕಾಂಗ್ರೆಸ್ ಟಿಕೆಟ್ ಗಾಗಿ ದುಂಬಾಲು ಬಿದ್ದ PSI ಅಕ್ರಮದ ಕಿಂಗ್ ಪಿನ್ ರುದ್ರೇಗೌಡ ಪಾಟೀಲ್*
https://pragati.taskdun.com/rudregowda-patilpsi-scameking-pincongressticketaphajalapura/
ಮರಾಠಾ ಸಮಾಜಕ್ಕೆ ಶಾಸಕ ರಮೇಶ ಜಾರಕಿಹೊಳಿ ಅವರಿಂದ 6 ಗುಂಟೆ ಭೂದಾನ
https://pragati.taskdun.com/mla-ramesh-jarakiholi-gave-6-gunte-land-to-maratha-society/
ಆಡಳಿತ ಸೌಧದ ಆವರಣದಲ್ಲಿ ಆತ್ಮಹತ್ಯೆಗೆ ಶರಣಾದ ಮುಖ್ಯೋಪಾಧ್ಯಾಯ
https://pragati.taskdun.com/the-headmaster-committed-suicide-in-the-premises-of-the-administrative-building/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ