Kannada NewsKarnataka NewsLatest

*ಯಕ್ಷಗಾನ ಮುಗಿಸಿ ವೇಷ ಕಳಚುತ್ತಿದ್ದಾಗಲೇ ಹೃದಯಾಘಾತ: ಮಂದಾರ್ತಿ ಮೇಳದ ಖ್ಯಾತ ಕಲಾವಿದ ವಿಧಿವಶ*

ಪ್ರಗತಿವಾಹಿನಿ ಸುದ್ದಿ: ಯಕ್ಷಗಾನ ಮೇಳ ಮುಗಿಸಿ ವೇಷ ಕಳಚುತ್ತಿದ್ದಾಗಲೇ ಹೃದಯಾಘಾತಕ್ಕೀಡಾಗಿ ಖ್ಯಾತ ಯಕ್ಷಗಾನ ಕಲಾವಿದ ಈಶ್ವರ ಗೌಡ ವಿಧಿವಶರಾಗಿದ್ದಾರೆ.

ಉಡುಪಿಯಲ್ಲಿ ಈ ಘಟನೆ ನಡೆದಿದೆ. ಮಂದಾರ್ತಿ ಮೇಳದ ಕಲಾವಿದರಾಗಿದ್ದ ಈಶ್ವರ ಗೌಡ ಮಂದಾರ್ತಿ ಎರಡನೇ ಮೇಳದಲ್ಲಿ ಮಹಿಷಾಸುರನ ಪಾತ್ರ ಮಾಡಿದ್ದರು. ರಾತ್ರಿ ಪಾತ್ರ ಮುಗಿಸಿ ವೇಷ ಕಳಚುತ್ತಿದ್ದಾಗ ತೂವ್ರ ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದಾರೆ.

ಮಂದಾರ್ತಿ ಮೇಳದಲ್ಲಿ ಈಶ್ವರ ಗೌಡ ತಂದೆ ಕೂಡ ಯಕ್ಷಗಾನ ಕಲಾವಿದರಾಗಿದ್ದಾರೆ ಎಂದು ತಿಳಿದುಬಂದಿದೆ. ಯಕ್ಷಗಾನ ಕಲಾವಿದನ ಅಗಲಿಕೆಗೆ ಸಹಕಲಾವಿದರು ಕಂಬನಿ ಮಿಡಿದಿದ್ದಾರೆ.

Related Articles

Back to top button