Latest

*ಭಗ್ನ ಪ್ರೇಮಿಯೊಬ್ಬನ ಪ್ರಲಾಪಗಳು; ಸಂಸದ ತೇಜಸ್ವಿ ಸೂರ್ಯ ಕಾಲೆಳೆದ ಕಾಂಗ್ರೆಸ್; ಪ್ರಿಯತಮೆಯ ಧ್ಯಾನದಂತೆ ಬಿಜೆಪಿಗರ ಕನಸು, ಮನಸಲ್ಲೂ 40%ನದ್ದೇ ಧ್ಯಾನ; ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಘಟಕ ಬಿಜೆಪಿ ಸರ್ಕಾರ, ಬಿಜೆಪಿ ನಾಯಕರ ವಿರುದ್ಧ ವಿಶೇಷವಾದ ಟ್ವೀಟ್ ಮೂಲಕ ಟೀಕಿಸಿದೆ.

ಬಿಜೆಪಿಗರು ಶುದ್ಧ 40% ಪ್ರೇಮಿಗಳು, 40% ಕಮಿಷನ್ ಮೇಲಿನ ಅವರ ಪ್ರೀತಿ ರೋಮಿಯೋ ಜ್ಯುಲಿಯೆಟ್ ಪ್ರೀತಿಗಿಂತಲೂ ಉತ್ಕಟವಾದುದು ಎಂದು ರಾಜ್ಯ ಕಾಂಗ್ರೆಸ್ ಟಾಂಗ್ ನೀಡಿದೆ.

ಪ್ರಿಯಕರನ ಕನಸು, ಮನಸಲ್ಲೂ ಪ್ರಿಯತಮೆ ಕಾಣುವಂತೆ, ಬಿಜೆಪಿಗರ ಕನಸು ಮನಸ್ಸಿನಲ್ಲೂ 40 ಪರ್ಸೆಂಟಿನದ್ದೇ ಧ್ಯಾನ…..!! ಎಂದು ಸಿಎಂ ಬೊಮ್ಮಾಯಿ ಪೋಸ್ಟರ್ ಹಾಕುವ ಮೂಲಕ ಕಮಿಷನ್ ಸರ್ಕಾರದ ಬಗ್ಗೆ ಕಾಲೆಳೆದಿದೆ.

ಪಶುಸಂಗೋಪನಾ ಇಲಖೆ ಸಚಿವ ಪ್ರಭು ಚೌಹಾಣ್ ಅವರ ಕಾಲೆಳೆದ ಕಾಂಗ್ರೆಸ್ ಬಿಜೆಪಿಗರದ್ದು ಗೋ ಪ್ರೀತಿಯಲ್ಲ, Go ಪ್ರೀತಿ!! ಬಿಜೆಪಿಗರು ಗೋವಿನ ಎದುರು ಫ್ಲರ್ಟ್ ಮಾಡುತ್ತಾರೆ ಹೊರತು ಪ್ರೀತಿಯಲ್ಲ! 40% ಲವ್ ಎಂದು ಟ್ಯಾಗ್ ಮಾಡಿದೆ.

ಇದೇ ವೇಳೆ ಸಂಸದ ತೇಜಸ್ವಿ ಸೂರ್ಯ ವಿರುದ್ಧವೂ ಕಟಕಿಯಾಡಿರುವ ಕಾಂಗ್ರೆಸ್, ಭಗ್ನ ಪ್ರೇಮಿಯೊಬ್ಬನ ಪ್ರಲಾಪಗಳು, ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆಯುವುದು, ಸಿಎಂ ಮನೆಗೆ ಕಲ್ಲು ಹೊಡೆಯುವುದು, ರೈತರಿಗೆ ಅವಮಾನಿಸುವುದು…ಪ್ರೀತಿ ಕಳೆದುಕೊಂಡು ವಿಚಿತ್ರವಾಗಿ ವರ್ತಿಸುತ್ತಿರುವ ಈ ಭಗ್ನಪ್ರೇಮಿಗೆ ಕೌನ್ಸ್‌ಲಿಂಗ್ ಅಗತ್ಯವಿದೆ! ಎಂದು ಟೀಕಿಸಿದೆ.

 

 

*ಭೀಕರ ಭೂಕಂಪ; ಸಾವಿನ ಸಂಖ್ಯೆ 37,000ಕ್ಕೆ ಏರಿಕೆ*

https://pragati.taskdun.com/turkeysyriaearthquake/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button