ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಗೆ ಕರ್ನಾಟಕದ ಅತ್ಯುತ್ತಮ ಪೊಲೀಸ್ ಠಾಣೆ ಪ್ರಶಸ್ತಿ ಲಭಿಸಿದೆ.
ಭಾರತ ಸರಕಾರದ ಗೃಹ ಸಚಿವಾಲಯ ಪ್ರತಿ ವರ್ಷ ಉತ್ತಮ ಪೊಲೀಸ್ ಠಾಣೆಗಳನ್ನು ನಿರ್ಧರಿಸುತ್ತಿದ್ದು ಕಳೆದ ವರ್ಷದಲ್ಲಿನ ಉತ್ತಮ ನಿರ್ವಹಣೆ ಹಾಗೂ ಕಾರ್ಯನಿರ್ವಹಣೆ ಪರಿಗಣಿಸಿ ಈ ಪ್ರಶಸ್ತಿ ಘೋಷಿಸಲಾಗಿದೆ.
ದೇಶಾದ್ಯಂತ ಪೊಲೀಸ್ ಠಾಣೆಗಳ ಶ್ರೇಯಾಂಕ ನಿರ್ಧಾರ ಗೃಹ ವ್ಯವಹಾರಗಳ ಸಚಿವಾಲಯದ ವಾರ್ಷಿಕ ಪ್ರಕ್ರಿಯೆಯಾಗಿದೆ. ಅಪರಾಧ ದರ, ತನಿಖೆ, ಪ್ರಕರಣಗಳ ವಿಲೇವಾರಿ, ಮೂಲಸೌಕರ್ಯ ಮತ್ತು ಸಾರ್ವಜನಿಕ ಸೇವೆಯ ವಿತರಣೆ ಸೇರಿದಂತೆ 165 ವಿಭಿನ್ನ ನಿಯತಾಂಕಗಳನ್ನು ಆಧರಿಸಿ ನಿರ್ಧರಿಸಲಾಗುತ್ತದೆ.
ಒಟ್ಟು ಅಂಕಗಳ ಶೇ.20 ರಷ್ಟು ಅಂಕಗಳು ನಾಗರಿಕರಿಂದ ಪೊಲೀಸ್ ಠಾಣೆಯ ಬಗ್ಗೆ ಪ್ರತಿಕ್ರಿಯೆಯನ್ನು ಆಧರಿಸಿವೆ. ಪೊಲೀಸಿಂಗ್ ಗುಣಮಟ್ಟವನ್ನು ಸುಧಾರಿಸುವುದು ಮತ್ತು ಪೊಲೀಸ್ ಠಾಣೆಗಳನ್ನು ಸೌಹಾರ್ದಯುತವಾಗಿಸುವುದು ಶ್ರೇಯಾಂಕದ ಮುಖ್ಯ ಉದ್ದೇಶವಾಗಿದೆ.
ನಿಪ್ಪಾಣಿ ಗ್ರಾಮಿಣ ಪೊಲೀಸ್ ಠಾಣೆಗೆ ಪ್ರಶಸ್ತಿ ಸಂದ ಹಿನ್ನೆಲೆಯಲ್ಲಿ ರಾಜ್ಯ ಗೃಹ ಇಲಾಖೆ , ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳು, ಜಿಲ್ಲಾ ಪೊಲೀಸ್ ಅಧೀಕ್ಷಕ ಸಂಜೀವ ಪಾಟೀಲ ಸೇರಿದಂತೆ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಅಭಿನಂದಿಸಿದ್ದಾರೆ.
ಒಡಿಶಾ ರಾಜ್ಯದ ಗಂಜಾಂ ಜಿಲ್ಲೆಯ ಆಸ್ಕಾ ಪೊಲೀಸ್ ಠಾಣೆ 2022ರ ನಂ.1 ಠಾಣೆ ಪ್ರಶಸ್ತಿ ಪಡೆದಿದೆ.
https://pragati.taskdun.com/valentines-daybjpcongresstweet-war/
*ಭೀಕರ ಭೂಕಂಪ; ಸಾವಿನ ಸಂಖ್ಯೆ 37,000ಕ್ಕೆ ಏರಿಕೆ*
https://pragati.taskdun.com/turkeysyriaearthquake/
ಮನೆಯ ಛಾವಣಿ ಕುಸಿದು ಬಿದ್ದು ಹಿರಿಯ ಮಹಿಳೆ ಸಾವು
https://pragati.taskdun.com/an-elderly-woman-died-after-the-roof-of-her-house-collapsed/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ