Kannada NewsKarnataka NewsLatest

ಬೆಳಗಾವಿ-ಬೆಂಗಳೂರು ತತ್ಕಾಲ್ ಎಕ್ಸಪ್ರೆಸ್: 29ರಂದು ಅಂಗಡಿಯಿಂದ ಹಸಿರು ನಿಶಾನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 

ಬೆಳಗಾವಿ-ಬೆಂಗಳೂರು ಮಧ್ಯೆ ಚಲಿಸಲಿರುವ ನೂತನ ಸುಪರ್ ಫಾಸ್ಟ್ ತತ್ಕಾಲ್ ಎಕ್ಸಪ್ರೆಸ್ ರೈಲಿಗೆ 29ರಂದು ಸಂಜೆ 6 ಗಂಟೆಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹಸಿರು ನಿಶಾನೆ ತೋರಿಸಲಿದ್ದಾರೆ.

Home add -Advt

29ರಂದು ಮಾತ್ರ 6 ಗಂಟೆಗೆ ಹೊರಡಲಿದ್ದು, 30ರಿಂದ ಪ್ರತಿ ದಿನ ರಾತ್ರಿ 9 ಗಂಟೆಗೆ ಬೆಳಗಾವಿಯಿಂದ ಹೊರಟು ಮರುದಿನ ಬೆಳಗ್ಗೆ 7 ಗಂಟೆಗೆ ಬೆಂಗಳೂರು ತಲುಪಲಿದೆ. ಹಾಗೆಯೇ 29ರಿಂದಲೇ ರಾತ್ರಿ 9 ಗಂಟೆಗೆ ಬೆಂಗಳೂರಿನಿಂದ ಹೊರಟು ಮರುದಿನ ಬೆಳಗ್ಗೆ 7 ಗಂಟೆಗೆ ಬೆಳಗಾವಿ ತಲುಪಲಿದೆ.

ಇದು ತತ್ಕಾಲ್ ರೈಲ್ವೆಯಾಗಿರುವುದರಿಂದ ಸಾಮಾನ್ಯ ದರಕ್ಕಿಂತ ಹೆಚ್ಚಿನ ದರ ಇರಲಿದೆ. ತತ್ಕಾಲ್ ಟಿಕೆಟ್ ದರ ಅನ್ವಯವಾಗಲಿದೆ. ಸಧ್ಯಕ್ಕೆ ರೈಲು ಒಂದು ತಿಂಗಳು ಓಡಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದ್ದು, ನಂತರ ಅದನ್ನು ಹಾಗೆಯೇ ಮುಂದುವರಿಸಲಾಗುವುದು ಎಂದು ರೈಲ್ವೆ ಮೂಲಗಳು ತಿಳಿಸಿವೆ. 

Related Articles

Back to top button