
ಇಂತವರನ್ನು ಸಚಿವಸಂಪುಟದಿಂದ ಕಿತ್ತಾಕಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿದರು.
ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಯಾವ ರೀತಿ ಮನಸ್ಥಿತಿ ಇಟ್ಟುಕೊಂಡಿದ್ದಾರೆ? ಬಿಜೆಪಿ ನಾಯಕರು ಹೊಡಿ ಬಡಿ ಸಂಸ್ಕೃತಿಯವರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೆ ಕೆಂಡ ಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸಿದ್ದರಾಮಯ್ಯರನ್ನು ಮುಗಿಸಿ ಎಂದರೆ ಏನರ್ಥ? ಟಿಪ್ಪು ಮುಗಿಸಿದಂತೆ ಸಿದ್ದರಾಮಯ್ಯರನ್ನು ಮುಗಿಸಿಬಿಡಿ ಎಂದು ಹೇಳಿದರೆ ಅರ್ಥಏನು? ನೀವೇ ಹೇಳಿ? ಈ ರೀತಿ ಹೇಳಿದರೆ ನಿಮಗೆ ಏನು ಅನಿಸುತ್ತೆ? ಹೇಳಿ ಎಂದು ಕೆಂಡಾಮಂಡಲರಾಗಿದ್ದಾರೆ.
ನರಹಂತಕ ಎಂದು ಆರೋಪ ಮಾಡುವುದು ಬೇರೆ. ಟಿಪ್ಪು ಹೊಡೆದಂತೆ ಅವರನ್ನು ಮುಗಿಸಿ ಬಿಡಿ ಎಂಬುದು ಬೇರೆ. ರಾಜ್ಯದ ಒಬ್ಬ ಸಚಿವರು ಈರೀತಿ ಮಾತನಾಡುವುದು ಸರಿಯೇ? ಪ್ರಧಾನಿ ಮೋದಿ, ಅಮಿತ್ ಶಾ ಅವರು ಉತ್ತರ ಕೊಡಲಿ. ಇದು ಸರಿನಾ? ಸಚಿವರಾಗಿ ಈ ರೀತಿ ಮನಸ್ಥಿತಿಯಿದ್ದರೆ ಪ್ರಜಾಪ್ರಭುತ್ವ ಇರುತ್ತದೆಯೇ? ಸಂವಿಧಾನ ಇರುತ್ತದೆಯೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣೆಯಲ್ಲಿ ಬಿಜೆಪಿಯವರಿಗೆ ಸೋಲುವುದು ಖಚಿತವಾಗಿದೆ. ಹಾಗಾಗಿ ಹತಾಶರಾಗಿ ಇಂತಹ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಅವರದ್ದು ಹೊಡಿ ಬಡಿ ಸಂಸ್ಕೃತಿ. ರಾಜ್ಯದ ಜನತೆಯೇ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ಇಂತವರನ್ನು ಸಚಿವಸಂಪುಟದಿಂದ ಕಿತ್ತಾಕಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿದರು.
https://pragati.taskdun.com/ashwaththanarayanaclarificationsiddaramaiahvidhanasoudha/