Latest

*ಬೆಂಗಳೂರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಆದ್ಯತೆ; ಸಿಎಂ ಬಸವರಾಜ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಮಾಣವಾಗಿರುವ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.

ಬ್ರ್ಯಾಂಡ್ ಬೆಂಗಳೂರು
ಭಾರತದಲ್ಲಿ ಅತಿ‌ ಹೆಚ್ಚು ಸಮ್ಮೇಳನಗಳು, ವಿಚಾರಸಂಕಿರಣಗಳು ನಡೆಯುವ ಸ್ಥಳ ಬೆಂಗಳೂರು. ಇಂಡಿಯಾ ಎನರ್ಜಿವೀಕ್, ಏರ್ ಶೊ, ಜಿ20 ಸಭೆಗಳು ಬೆಂಗಳೂರಿನಲ್ಲಿಯೇ ನಡೆಯುತ್ತಿವೆ. 15 ಕ್ಕೂ ಹೆಚ್ಚು ಸಮಾವೇಶಗಳು ಆಗುತ್ತಿವೆ ಇದಕ್ಕೆ ಬೆಂಗಳೂರಿನ ಬ್ರ್ಯಾಂಡ್ ಕಾರಣ. ಮುಂದೆಯೂ ಬೆಂಗಳೂರಿನ ಹೆಸರನ್ನು ಅಂತರರಾಷ್ಟ್ರೀಯ ಮಟ್ಟದಲ್ಕಿ ಶಾಶ್ವತವಾಗಿ ಉಳಿಸಲು ಅಗತ್ಯ ಕ್ರಮ ಕೈಗೊಂಡಿದೆ ಎಂದರು.

ಕೆಲವರು ಸ್ವಾರ್ಥಕ್ಕಾಗಿ ಬೆಂಗಳೂರಿನ ಬಗ್ಗೆ ಮಾತನಾಡುತ್ತಾರೆ. ಆದರೆ ಬೆಂಗಳೂರು ನಮಗೆ ಅನ್ನ ಕೊಡುತ್ತಿದೆ. ಎಷ್ಟೊ‌ ಜನರಿಗೆ ಉದ್ಯೋಗ, ಅನ್ನ ನೀಡಿದೆ. ಇದಕ್ಕೆ ಒಳ್ಳೆ ಹೆಸರು ತರಲು ಶ್ರಮಿಸಬೇಕೆ ಹೊರತಾಗಿ ಕೆಟ್ಟ ಹೆಸರು ತರಬಾರದು ಎಂದರು.

Home add -Advt

ಅಭಿವೃದ್ಧಿಯಲ್ಲಿ ವೇಗ
ಸಮಸ್ಯೆಗಳನ್ನು ಬಗೆಹರಿಸಲು ಅನುದಾನ ನೀಡಿ ನಿರ್ದಿಷ್ಟ ಯೋಜನೆಗೆ ಅನುಮೋದನೆ ನೀಡಿ, . ಬೆಂಗಳೂರಿನ ಸಂಚಾರ, ರಸ್ತೆ ಮುಂತಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ.

ಬೆಂಗಳೂರಿನಲ್ಲಿ ಪ್ರತಿ ದಿನ ಎರಡು ಲಕ್ಷ ಜನರು ಬರುತ್ತಿದ್ದಾರೆ. ಬೆಂಗಳೂರಿನಲ್ಲಿ 125 ಲಕ್ಷ ಜನರಿದ್ದಾರೆ. 1.25 ಕೋಟಿ ವಾಹನಗಳಿವೆ. ಪ್ರತಿ ದಿನ 5000 ವಾಹನಗಳು ರಸ್ತೆಗಿಳಿಯುತ್ತವೆ. ಗೋವಿಂದರಾಜನಗರ ಕ್ಷೇತ್ರದಲ್ಲಿ ಗೆಲುವು ಮತ್ತು ಅಭಿವೃದ್ಧಿಯ ವೇಗವಿದೆ. ವಿ.ಸೋಮಣ್ಣ ಅವರು ಅತ್ಯಂತ ಕ್ರಿಯಾಶಿಲ ವ್ಯಕ್ತಿ, ಅವರು ತಮ್ಮ ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ‌ ನೀಡಿದ್ದಾರೆ ಎಂದರು.

ಬ್ರಾಂಡ್ ಬೆಂಗಳೂರಿನ ಉಳಿಸಲು ಕ್ರಮ
ಬೆಂಗಳೂರಿನ ಅಭಿವೃದ್ಧಿಗೆ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ನಮ್ಮ ಶಾಸಕರು ಬೆಂಗಳೂರಿನಲ್ಲಿ ಸಮಸ್ಯೆಗಳ ಸುಧಾರಣೆಗೆ ಇನ್ನಷ್ಟು ಹಣಕಾಸಿನ ಅಗತ್ಯವಿದೆ ಎಂದು ಹೇಳಿದಾಗ 6000 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ರಾಜಕಾಲುವೆಗಳ ಮರು ನಿರ್ಮಾಣ, 21 ಆಧುನಿಕ‌ ಶಾಲೆ ನಿರ್ಮಾಣ, ಅಮೃತ ಯೋಜನೆಯಲ್ಲಿ 72 ಕೆರೆ ಹಾಗೂ ಉದ್ಯಾನವನಗಳನ್ನು ಅಭಿವೃದ್ದಿ ಮಾಡಲಾಗಿದೆ, 75 ಕೊಳಗೇರಿಗಳ ಅಭಿವೃದ್ಧಿಯನ್ನು ಕೈಗೊಂಡು ಬ್ರಾಂಡ್ ಬೆಂಗಳೂರು ಉಳಿಸಲು ಕ್ರಮ ಕೈಗೊಂಡಿದೆ ಎಂದರು. ಗೋವಿಂದರಾಜನಗರದಲ್ಲಿ ಅದ್ಭುತವಾದ ಆಸ್ಪತ್ರೆ ನಿರ್ಮಾಣ ವಾಗಿದ್ದು 25 ಕೋಟಿ ರೂ.ಗಳನ್ನು ಉಪಕರಣಗಳನ್ನು ಒದಗಿಸಲಾಗಿದೆ. ಈ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಲು ಇದು ಸಹಾಯಕವಾಗಲಿದೆ ಎಂದರು.

ಮಠಗಳ ಪರಂಪರೆ

ಪ್ರಜಾಪ್ರಭುತ್ವದಲ್ಲಿ ಜನರ ಭಾವನೆಗಳನ್ನು ಆಳುವವರಿಗೆ ಮುಟ್ಟಿಸುವ ಕೆಲಸ ಶ್ರೀ ಮಠಗಳಿಂದ ಆಗಿದೆ. ರಾಜ್ಯದಲ್ಲಿ ಮಠಗಳು ಒಳ್ಳೆಯ ಕೆಲಸ ಮಾಡುತ್ತಿವೆ. ಮಠಗಳು ಶಿಕ್ಷಣ, ಆಶ್ರಯ ಆರೋಗ್ಯ ,ಜ್ಞಾನ, ಮುಂತಾದ ವಿಷಯಗಳಿಗೆ ಮಹತ್ವ ನೀಡಿವೆ. ಈ ಪರಂಪರೆ ಕರ್ನಾಟಕದಲ್ಲಿ ಶತಮಾನಗಳಿಂದ ಇದೆ. ಬೇರೆ ರಾಜ್ಯಗಳಲ್ಲಿ ಇತ್ತೀಚೆಗೆ ಈ ಪರಂಪರೆ ಬೆಳೆಯುತ್ತಿದೆ ಎಂದರು.

ಈ ಸಂದರ್ಭದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಮದನಾಥ ಸ್ವಾಮೀಜಿ, ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಶ್ರೀ ನಂಜಾವಧೂತ ಸ್ವಾಮೀಜಿ, ಶ್ರೀ ಚಂದ್ರಶೇಖರ್ ಸ್ವಾಮೀಜಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಚಿವರಾದ ವಿ.ಸೋಮಣ್ಣ, ಆರ್.ಅಶೋಕ್, ಡಾ: ಸುಧಾಕರ್, ಗೋಪಾಲಯ್ಯ ಮತ್ತಿತರರು ಹಾಜರಿದ್ದರು.

*ನಾಳೆಯ ಬಜೆಟ್ ಕೇವಲ ಭಾಷಣಕ್ಕೆ ಸೀಮಿತವಾಗಲಿದೆ; ಡಿ.ಕೆ.ಶಿವಕುಮಾರ್ ಭವಿಷ್ಯ*

https://pragati.taskdun.com/d-k-shivakumark-r-nagaraprajadwanikarnataka-budget/

Related Articles

Back to top button