Kannada NewsLatest

*ವಚನಗಳಿಂದ ಸಮಾಜದ ಜನರು ಜಾಗೃತರಾಗಬೇಕು: ಅನಿಲ ಬೆನಕೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ : ಶರಣರ ಜಯಂತಿಗಳ ಮುಖ್ಯ ಉದ್ದೇಶ ಅವರ ವಚನಗಳಿಂದ ಸಮಾಜದ ಜನರು ಜಾಗೃತರಾಗಬೇಕು. ಜಾತೀಯತೆ ಇನ್ನೂ ಹಾಗೇ ಮುಂದುವರೆದಿದೆ. ಇದನ್ನು ಹೋಗಲಾಡಿಸಲು ವಚನೋತ್ಸವದ ಅಗತ್ಯತೆ ಇದೆ ಎಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಅನಿಲ್ ಬೆನಕೆ  ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನರ ಪಾಲಿಕೆಯ ವತಿಯಿಂದ ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಶನಿವಾರ (ಫೆ.18)ರಂದು ಏರ್ಪಡಿಸಲಾಗಿದ್ದ ಕಾಯಕ ಶರಣರಾದ ಮಾದಾರ ಚನ್ನಯ್ಯ,ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ ಸಮಗಾರ ಹರಳಯ್ಯ ಹಾಗೂ ಗುರುಲಿಂಗಪೆದ್ದಿಯವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂತಹ ಅನೇಕ ಶರಣರ ವಚನಗಳು ಮನೆಮನೆಗೆ ತಲುಪುವಂತಾಗಬೇಕು. ಇಂತಹ ಶರಣರ ಜಯಂತಿಗಳಿಗೆ ಯುವಕರು ಹೆಚ್ಚು ಹೆಚ್ಚು ಬರಬೇಕು. ವಚನಗಳನ್ನು ತಿಳಿದುಕೊಂಡು ಇತರರಿಗೂ ತಿಳಿಸಬೇಕು ಮತ್ತು ಸಮಾಜದಲ್ಲಿ ಜಾತಿ ಬೇಧ ಭಾವ ಬಿಟ್ಟು ಎಲ್ಲರೂ ಒಂದುಗೂಡಿ ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಎಲ್ಲರೂ ಶ್ರಮಿಸೋಣ ಎಂದರು.
ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡದ ಪ್ರೊ. ಕೆ.ಎಸ್ ಕೌಜಲಗಿ ಅವರು, ಮಾದಾರ ಚೆನ್ನಯ್ಯನ ತನ್ನ ಕುಲದ ಕಾಯಕದ ಉಪಕರಣಗಳನ್ನು ವಚನಗಳನ್ನಾಗಿಟ್ಟುಕೊಂಡು ಚೆನ್ನಯ್ಯನ ವಚನಗಳಲ್ಲಿ ಕಾವ್ಯ ಸೌಂದರ್ಯ ಕಡಿಮೆ ಇದ್ದರೂ ಸಾಮಾಜಿಕ ಕಳಕಳಿ ಮಾತ್ರ ಹೆಚ್ಚಾಗಿ ಕಂಡುಬರುತ್ತದೆ ಎಂದರು.
ಸಮಾಜಕ್ಕೆ ಶಾಪವಾಗಿ ಪರಿಣಮಿಸಿದ್ದ ಕುಲ, ಜಾತಿ ಸಮಸ್ಯೆಗಳನ್ನು ಕುರಿತು ಚೆನ್ನಯ್ಯನು ಚಿಂತನೆ ನಡೆಸಿ ಅವುಗಳಿಗೆ ಹೊಸ ವ್ಯಾಖ್ಯಾನ ನೀಡಿದ್ದಾರೆ. ಚೆನ್ನಯ್ಯನು ಕೆಲವೇ ವಚನಗಳನ್ನು ಬರೆದಿದ್ದರೂ ಅವುಗಳಿಗೆ ವಚನ ಸಾಹಿತ್ಯದಲ್ಲಿ ವಿಶೇಷ ಮಹತ್ವವಿದೆ ಎಂದು ಹೇಳಿದರು
ಮಾದರ ಧೂಳಯ್ಯ ಚರ್ಮವನ್ನು ಹದ ಮಾಡಿ ಪಾದರಕ್ಷೆಗಳನ್ನು ಹೋಲೆಯುವ ಕಾಯಕ ಮಾಡಿಕೊಂಡು ಕಾಮ ಧೂಮ ಧೂಳೇಶ್ವರ ಅಂಕಿತದಲ್ಲಿ ವಚನಗಳನ್ನು ರಚಿಸಿದ್ದಾನೆ.
ಕಾಯಕದಲ್ಲಿಯೇ ಶಿವನನ್ನು ಸಾಕ್ಷಾತ್ಕಸರಿಸಿಕೊಂಡು ಜ್ಞಾನವೇಶಗಳ ಸ್ವರೂಪ ಮತ್ತು ಕಾಯಕದ ಮಹತ್ವ ಹಾಗೂ ಭಕ್ತಿಯ ಸ್ವರೂಪ ವನ್ನು ತನ್ನ ವಚನಗಳಲ್ಲಿ ವಿವರಿಸಿದ್ದು, ಈತನ ವಚನಗಳಲ್ಲಿ ಕಂಡುಬರುವ ವೃತ್ತಿಪರ ಭಾಷೆ ಓದುಗರ ಗಮನ ಸೆಳೆಯುತ್ತವೆ ಎಂದು ಹೇಳಿದರು.
ಡೋಹರ ಕಕ್ಕಯ್ಯನವರು ಕಾಯಕ ಯೋಗಿ ಇವರು ವಚನಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದವರು ಮತ್ತು ಭಕ್ತಿ ಚಳುವಳಿಯಲ್ಲಿ ಹುತಾತ್ಮರಾದವರು ಎಂದು ಹೇಳಿದರು. ಸಮಗಾರ ಹರಳಯ್ಯನವರು ಶರಣ ಸಮಾಜದ ನಕ್ಷತ್ರ ಲೋಕದಲ್ಲಿ ಸತ್ಯಕ್ಕಾಗಿ ಜೀವತೆತ್ತ ಧಿರತೆಯ ಧೃವತಾರೆಗಳಗಿ ಬೆಳಗುತ್ತಿರುವರು, ಸಮಗಾರ ಹರಳಯ್ಯ ಶರಣರು ಸಮಾಜದಲ್ಲಿ ಅಸಮಾನತೆ ತಾರತಮ್ಯ ಅಸ್ಪೃಶ್ಯ, ಅಸಹನೆ ಮೊದಲಾದ ವಿಷಮತೆ ಹೋಗಲಾಡಿಸಲು ಆಹುತಿಯಾದ ಹುತಾತ್ಮರು ಎಂದು ಹೇಳಿದರು
ಉರಿಲಿಂಗಪೆದ್ದಿ ಅವರ ಶರಣರಸತಿ ಲಿಂಗಪತಿ ಭಾವದ ನಿಷ್ಠೆಯನ್ನು ಪರೀಕ್ಷಿಸಲು ಪರವಾದಿಗಳು ಗುಡಿಸಲಿಗೆ ಬೆಂಕಿ ಹಚ್ಚಿದರು, ಅದಕ್ಕೆ ವಿಚಲಿತನಾಗದೆ ಲಿಂಗ ಪೂಜಾ ನಿಷ್ಠೆ ಮೆರೆದ ಶರಣನೀತ, ಮತ್ತು ವೇದಾಪುರಾನ ಉಪನಿಷತ್ತುಗಳಲ್ಲಿ ಅಪಾರಜ್ಞಾನವನ್ನು ಹೊಂದಿದವರು ಎಂದು ಹೇಳಿದರು
ಹೀಗೆ ತಳ ಸಮುದಾಯದ ಶರಣರು ಬಸವಣ್ಣ ಅವರ ಹೋರಾಟಕ್ಕೆ, ಅವರ ವಚನ ಸಾಹಿತ್ಯಕ್ಕೆ ಶಕ್ತಿ ತುಂಬಿದವರು, ಇವತ್ತಿನ ಕಾಲದಲ್ಲಿಯೂ ತಳ ಸಮುದಾಯಗಳಿಗೆ ಅನೇಕ ಸಮಸ್ಯೆಗಳೂ ಇವೆ. ಅವುಗಳನ್ನು ಹೋಗಲಾಡಿಸಬೇಕು ನಾವೆಲ್ಲರೂ ಒಂದು ಗುಡಿ ಅಂಬೇಡ್ಕರ್ ಹೇಳಿದಂತೆ ಶಿಕ್ಷಣ ಸಂಘಟನೆ ಹೋರಾಟ ಈ ನಿಟ್ಟಿಲ್ಲಿಯೇ ನಾವು ಜಾಗೃರಾಗಿರಬೇಕು. ಹೀಗೆ ಶಿಕ್ಷಣದಿಂದ ಸಮಾಜದಲ್ಲಿ ಬದಲಾವಣೆ ಆಗಲು ಸಾಧ್ಯ ಎಂದು ಪ್ರೊ. ಕೆ.ಎಸ್.ಕೌಜಲಗಿ ಹೇಳಿದರು.
ಧೊಂಡಿಬಾ ಮಾಹುರಕರ, ಸಂತೋಷ್ ಹೊಂಗಲ ವಿಠ್ಠಲ ಪೋಳ, ಹಿರಾಲಾಲ ಚವನ, ಗಣೇಶ ಕಾಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಹಾಗೂ ಸಮುದಾಯದ ಹಿರಿಯರು ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
 ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಪರೀಲ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
https://pragati.taskdun.com/belagavicongress-guarantee-cardmeeting/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button