Kannada NewsKarnataka NewsLatest

*ಶಾಲಾ ಬಸ್ ಗೆ ಮತ್ತೋರ್ವ ಬಾಲಕ ಬಲಿ*

ಪ್ರಗತಿವಾಹಿನಿ ಸುದ್ದಿ: ಖಾಸಗಿ ಶಾಲೆಯ ಬಸ್ ಹರಿದು ಬಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ.


ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಗಾಜರಕೋಟ್ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ೪ ವರ್ಷದ ಪುನೀತ್ ಮೃತ ಬಾಲಕ.

ಗಾಜರಕೋಟ್ ನಲ್ಲಿರುವ ಖಾಸಗಿ ಶಾಲೆಯಲ್ಲಿ ಬಾಲಕ ಓದುತ್ತಿದ್ದ. ವಿದ್ಯಾರ್ಥಿಯನ್ನು ಮನೆಗೆ ಬಿಡಲು ಬಂದ ಖಾಸಗಿ ಶಾಲಾ ಬಸ್ ನಿಂದ ಇಳಿದ ಬಾಲಕ ಅಲ್ಲಿಯೇ ನಿಂತಿದ್ದ. ಈ ವೇಳೆ ಬಸ್ ರಿವರ್ಸ್ ತೆಗೆದುಕೊಳ್ಳುವಾಗ ಬಸ್ ಡಿಕ್ಕಿಯಾಗಿ ಕೆಳಗೆ ಬಿದ್ದಿದ್ದಾನೆ. ಹೀಗೆ ಕೆಳಗೆ ಬಿದ್ದ ಬಾಲಕ ಮೇಲೆಯೇ ಶಾಲಾ ಬಸ್ ಹರಿದು ಹೋಗಿದೆ.

ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮಗನನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಚಾಲಕನ ನಿರ್ಲಕ್ಷಕ್ಕೆ ಬಾಲಕ ಬಲಿಯಾಗಿದ್ದಾನೆ. ಗುರುಮಠಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button