Kannada NewsLatest

ವಿಟಿಯು ಬಳಿಯ ಅರಣ್ಯ ಪ್ರದೇಶಕ್ಕೆ ಬೆಂಕಿ; ಅಪಾರ ಸಸ್ಯಗಳು ಆಹುತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಾಂಬೋಟಿ ರಸ್ತೆಗೆ ಹೊಂದಿಕೊಂಡಿರುವ  ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಬಳಿಯ ಅರಣ್ಯ ಪ್ರದೇಶದ ಅಪಾರ ಸಸ್ಯಗಳು ಬೆಂಕಿಗೆ ಆಹುತಿಯಾಗಿವೆ.

ಬೆಂಕಿಯ ಕೆನ್ನಾಲಗೆ ಯಾವ ಪರಿ ಹರಡಿತ್ತೆಂದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದವರು ಇದನ್ನು ಕಂಡು ಹೌಹಾರಿದರು. ಇಡೀ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದ್ದು ಅನೇಕ ಜನ ತಮ್ಮ ಕೈಯ್ಯಲ್ಲಿ ಸಾಧ್ಯವಾದಷ್ಟು ಬೆಂಕಿ ಆರಿಸಲು ಯತ್ನಿಸಿದ್ದಾರೆ. ಆದರೆ ಆಗಲೇ ಅದು ವ್ಯಾಪಕವಾಗಿ ಹರಡಿದ್ದರಿಂದ ಕೈಮೀರಿ ಹೋಗಿತ್ತು.

ಬೇಸಿಗೆ ಅವಧಿ ಆರಂಭವಾಗುತ್ತಿದ್ದಂತೆ ಸಂಭವನೀಯ ಕಾಡ್ಗಿಚ್ಚು ನಿಯಂತ್ರಿಸಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.

ನೂರಾರು ಸಾವಿರಾರು ವಾಹನಗಳು ಸಂಚರಿಸುವ ಮಾರ್ಗದ ಪಕ್ಕದಲ್ಲೇ ಇಂಥ ಘಟನೆಯಾದರೆ ದಟ್ಟಾರಣ್ಯದ ಒಳಗೆ ನಡೆಯುವ ಅನಾಹುತಗಳನ್ನು ತಡೆಯಲು ಅರಣ್ಯ ಇಲಾಖೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಿದೆ.

ಮಲಪ್ರಭಾ ನದಿ ತೀರದಲ್ಲಿ ಗಂಗಾ ಆರತಿ

https://pragati.taskdun.com/ganga-aarti-on-the-banks-of-malaprabha-river/

*ಕರ್ನಾಟಕ ಅರಣ್ಯ ಸಿಬ್ಬಂದಿ-ತಮಿಳುನಾಡು ಬೇಟೆಗಾರರ ನಡುವೆ ಗುಂಡಿನ ಚಕಮಕಿ; ಮೃತ ವ್ಯಕ್ತಿ ಬಗ್ಗೆ ಸಚಿವ ಸೋಮಣ್ಣ ಹೇಳಿದ್ದೇನು?*

https://pragati.taskdun.com/karnataka-forest-stafftamil-nadu-hunterfiring-casev-somannareaction/

*ವಚನಗಳಿಂದ ಸಮಾಜದ ಜನರು ಜಾಗೃತರಾಗಬೇಕು: ಅನಿಲ ಬೆನಕೆ*

https://pragati.taskdun.com/madara-channaiahdhulayyadohara-kakkaiahharalaiahgurulingapeddi-jayanti/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button