ಟರ್ಕಿಯಲ್ಲಿ ಭಾರತೀಯ ಸೇನಾ ಕಾರ್ಯಕ್ಕೆ ಭರಪೂರ ಪ್ರಶಂಸೆ

 ಭಾರತ ಈಗ ಅಕ್ಷರಶಃ “ಸರ್ವೇ ಜನಾ ಸುಖಿನೋ ಭವಂತು” ಎಂಬ ಮಾತನ್ನು ಕಾರ್ಯರೂಪದಲ್ಲಿ ತೋರಿಸುತ್ತಿದೆ.

ಟರ್ಕಿ : ಟರ್ಕಿ ಮತ್ತು ಸಿರಿಯ ದೇಶಗಳು ಇತ್ತೀಚಿಗೆ ಭೂಕಂಪಕ್ಕೆ ತುತ್ತಾಗಿ, ಅಪಾರ ಪ್ರಮಾಣದಲ್ಲಿ ನಷ್ಟವನ್ನು ಅನುಭವಿಸುತ್ತಿದ್ದು, ಸಂಕಷ್ಟ ಕಾಲದಲ್ಲಿ, ಹಲವು ದೇಶಗಳು ನೆರವಾಗುವುದು ಅವಶ್ಯಕವಾಗಿದೆ. ಆದರ ನಡುವೆ  ಭಾರತ ಮುಂಚೂಣಿಯಲ್ಲಿದ್ದು ತನ್ನ ಸೇವೆಯನ್ನು ಮನಃಪೂರ್ವಕವಾಗಿ ಕೈಗೊಂಡಿದೆ.  ಜಗತ್ತಿನ ಇತರೆ ರಾಷ್ಟ್ರಗಳ ಗಮನವನ್ನು ಸೆಳೆಯುವುದಲ್ಲದೆ, ಅವುಗಳು ಕೂಡಾ ತೊಡಗುವಂತೆ ಉತ್ತೇಜಿಸಿದೆ.
ಜಗತ್ತಿನ ಕಣ್ಣಲ್ಲಿ ಭಾರತ ಮತ್ತೊಮ್ಮೆ  ಆಪದ್ಭಾಂಧವನಾಗಿ ಮಿಂಚಿದೆ.  ಕರೋನಾದ ಸಂದರ್ಭದಲ್ಲಿ ಜಗತ್ತಿನ ಹಲವು ರಾಷ್ಟ್ರಗಳಿಗೆ ಲಸಿಕೆಯನ್ನು ಪೂರೈಸುವುದರ ಮೂಲಕ ಸಂಜೀವಿನಿಯಾಗಿ ಭಾರತವು ಕಾಣಿಸಿಕೊಂಡಿತ್ತು.  ಇದೀಗ ಮತ್ತೊಮ್ಮೆ ಟರ್ಕಿಯಲ್ಲಿ  ಭೂಕಂಪಕ್ಕೆ ತುತ್ತಾಗಿ ಸಾವು ನೋವು ಕಂಡಂತಹ ಸಂದರ್ಭದಲ್ಲಿ ಸೇನೆಯು  ಕೇವಲ ಆರು ಗಂಟೆಗಳಲ್ಲಿ ಆಸ್ಪತ್ರೆಗಳ ನಿರ್ಮಾಣ ಮಾಡಿ ಸರಿ ಸುಮಾರು ಮೂರುವರೆ ಸಾವಿರಕ್ಕಿಂತಲೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗೆ ಕ್ರಮ ಕೈಗೊಂಡಿರುವುದಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಎನ್ ಡಿ ಆರ್ ಎಫ್ ತಂಡವು ಚುರುಕಾಗಿ ಇದರಲ್ಲಿ ಪಾಲ್ಗೊಂಡಿತ್ತು.  ಸೇನೆಯ ಮುಖ್ಯಸ್ಥ ಮನೋಜ್ ಪಾಂಡೆ ಅವರು ಈ ಕುರಿತಾಗಿ ಹಲವು ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. ಮೊದಲು 30 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಾಣ ಮಾಡಿ, ಸತತವಾಗಿ ಕೆಲವು ದಿನಗಳ ಕಾಲ ಯೋಜನೆಯೊಂದನ್ನು ರೂಪಿಸಿ’ ಅದಕ್ಕಾಗಿ ಕ್ರಮ ಕೈಗೊಂಡಿದ್ದರು. ಇದರಲ್ಲಿ ನುರಿತ ವೈದ್ಯರನ್ನು ತೊಡಗಿಸಲಾಗಿತ್ತು.
ಹೆಣ್ಣು ಗಂಡು ಎಂಬ ಭೇದ ಭಾವವಿಲ್ಲದೆ ಭಾರತೀಯ ಸೈನಿಕರನ್ನು ತಬ್ಬಿಕೊಂಡು, ಧನ್ಯವಾದ ಹೇಳುತ್ತಿರುವ ಚಿತ್ರಗಳು ಕೂಡ ಈಗ ಎಲ್ಲೆಡೆ ಕಾಣ ಸಿಗುತ್ತಿವೆ. ಭಾರತದ ಸೇನೆ ತುರ್ತು ನೆರವಿಗೆ ತೆರಳಿ, ಪರಿಹಾರೋಪಾಯ ಕಾರ್ಯಗಳಲ್ಲಿ ಅವಿರತವಾಗಿ ತೊಡಗಿಸಿಕೊಂಡಿದೆ. ಭಾರತ ತನ್ನ ಸೇವೆಯನ್ನು ಸಲ್ಲಿಸುವುದರ ಮೂಲಕ ಮತ್ತೊಮ್ಮೆ ಜಗತ್ತಿನ ಕಣ್ಣಿನಲ್ಲಿ ಎದ್ದು ಕಾಣುವಂತಾಗಿದೆ.
 ಭಾರತ ಈಗ ಅಕ್ಷರಶಃ “ಸರ್ವೇ ಜನಾ ಸುಖಿನೋ ಭವಂತು” ಎಂಬ ಮಾತನ್ನು ಕಾರ್ಯರೂಪದಲ್ಲಿ ತೋರಿಸುತ್ತಿದೆ ಮತ್ತು “ವಸುದೈವ ಕುಟುಂಬಕಂ” ಎಂಬುದನ್ನು ಚಾಚು ತಪ್ಪದೇ ಮಾಡಿ ತೋರಿಸುತ್ತಿದೆ.
https://pragati.taskdun.com/chief-minister-eknath-shindes-son-threatened-his-life-sanjay-raut-wrote-a-letter-to-the-police/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button