Belagavi NewsBelgaum NewsKannada NewsKarnataka News

*ಕೇದಾರ ಪೀಠದ ಶಾಖಾ ಮಠದ ಶಿವಾನಂದ ಶಿವಾಚಾರ್ಯ ಶ್ರೀ ಲಿಂಗೈಕ್ಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಮುತ್ನಾಳ ಗ್ರಾಮದ ಕೇದಾರ ಪೀಠದ ಶಾಖಾ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅವರು ನಗರ ಅರಿಹಂತ ಖಾಸಗಿ ಆಸ್ಪತ್ರೆಯಲ್ಲಿ ಲಿಂಗೈಕ್ಯರಾಗಿದ್ದಾರೆ.

ಅನಾರೋಗ್ಯದಿಂದ ಶ್ರೀಗಳನ್ನು ಶನಿವಾರ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.‌ ಕಳೆದ ಕೆಲ ದಿನಗಳಿಂದ ಅವರ ಅನಾರೊಗ್ಯ ಸಮಸ್ಯೆ ಇತ್ತು ಎನ್ನಲಾಗಿದೆ.‌ ಆದರೆ ಚಿಕಿತ್ಸೆ ಫಲಿಸದೆ ಶ್ರೀಗಳು ಲಿಂಗೈಕ್ಯರಾಗಿದ್ದಾರೆ. 

Home add -Advt

ಇತ್ತಿಚೇಗೆ ಶ್ರೀಗಳನ್ನು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಜಿಲ್ಲಾ ಘಟಕದ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. 

ಶಿವಾನಂದ ಶ್ರೀಗಳು ಬಹಳಷ್ಟು ಸರಳ ವ್ಯಕ್ತಿ, ಹಾಗೆ ಶ್ರೀಗಳು ಎಲ್ಲರೊಂದಿಗೆ ಬೆರೆಯುವ ಅಪರೂಪದ ವ್ಯಕ್ತಿ. ಅವರ ಅಗುಲುವಿಕೆಯಿಂದ ಇಡೀ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಕೆಯಿಂದ ಅವರ ಭಕ್ತ ಸಮೂಹ ಶೋಕ ಸಾಗರದಲ್ಲಿ ಮುಳುಗಿದೆ.

Related Articles

Back to top button